For Quick Alerts
  ALLOW NOTIFICATIONS  
  For Daily Alerts

  'ಸಂಗೊಳ್ಳಿ ರಾಯಣ್ಣ' ಚಿತ್ರಕ್ಕೆ ರಾಜ್ಯ ಚಲನಚಿತ್ರ ಪ್ರಶಸ್ತಿ?

  By ಉದಯರವಿ
  |

  2012ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟಣೆಗೆ ಕ್ಷಣಗಣನೆ ಶುರುವಾಗಿದೆ. ವಾರ್ತಾ ಸಚಿವ ರೋಷನ್ ಬೇಗ್ ಅವರು ಚಲನಚಿತ್ರ ಪ್ರಶಸ್ತಿಗಳನ್ನು ಸೋಮವಾರ (ಆ.25) ವಾರ್ತಾಸೌಧದಲ್ಲಿ ಪ್ರಕಟಿಸಲಿದ್ದಾರೆ.

  ಈ ಬಾರಿ ಪ್ರಶಸ್ತಿಗಾಗಿ 59 ಚಿತ್ರಗಳ ನಡುವೆ ತೀವ್ರ ಪೈಪೋಟಿ ನಡೆದಿದೆ. ಮುಖ್ಯವಾಗಿ ಐದು ಚಿತ್ರಗಳ ನಡುವೆ ಬಹುತೇಕ ಪ್ರಶಸ್ತಿಗಳಿಗಾಗಿ ಸ್ಪರ್ಧೆ ನಡೆದಿದೆ ಎನ್ನಲಾಗಿದೆ. ಅವುಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರವೂ ಒಂದು.

  ಪ್ರಶಸ್ತಿ ಸ್ಪರ್ಧೆಯಲ್ಲಿರುವ ಉಳಿದ ಚಿತ್ರಗಳೆಂದರೆ ಪಿ. ಶೇಷಾದ್ರಿ ಅವರ ಭಾರತ್ ಸ್ಟೋರ್ಸ್, ಸುಮನಾ ಕಿತ್ತೂರು ಅವರ ಎದೆಗಾರಿಕೆ, ಎನ್ ಸುದರ್ಶನ್ ಅವರ ತಲ್ಲಣ, ಜೊತೆಗೆ ಅಗ್ರಹಾರವನ್ನು ತೊರೆಯುವ ಬಾಲಕ ಬಸವಣ್ಣನ ಕುರಿತ ಚಲನಚಿತ್ರ ಕಾರಣಿಕ ಶಿಶು. ಈ ಚಿತ್ರಗಳು ಪ್ರಶಸ್ತಿಗಾಗಿ ತೀವ್ರ ಪೈಪೋಟಿ ನಡೆಸಿವೆ ಎನ್ನಲಾಗಿದೆ.

  ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್ ಮತ್ತು ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗಳನ್ನೂ ಪ್ರಕಟಿಸಲಾಗುತ್ತಿದೆ. ಚಲನಚಿತ್ರ ನಿರ್ಮಾಪಕರಾದ ಕೆ.ಸಿ.ಎನ್.ಚಂದ್ರಶೇಖರ್ ಅವರ ನೇತೃತ್ವದ ಸಮಿತಿಯು 59 ಚಿತ್ರಗಳನ್ನು ವೀಕ್ಷಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

  ಸಮಿತಿ ಶಿಫಾರಸು ಮಾಡಿರುವ ಚಲನಚಿತ್ರಗಳನ್ನು ವಾರ್ತಾ ಸಚಿವರಾದ ರೋಷನ್ ಬೇಗ್ ಅವರು ಇಂದು ಪ್ರಕಟಿಸಲಿದ್ದಾರೆ. ಪ್ರಮೀಳಾ ಜೋಷಾಯ್, ಮುರಳಿಧರ ಹಾಲಪ್ಪ, ಸತ್ಯಮೂರ್ತಿ ಆನಂದೂರು, ಸಾ.ರಾ.ಗೋವಿಂದು, ಯಾಕುಬ್ ಖಾದರ್ ಗುಲ್ವಾಡಿ, ಅಪ್ಪಗೆರೆ ತಿಮ್ಮರಾಜು, ಗೋಪಿ ಪೀಣ್ಯ ಹಾಗೂ ವಾರ್ತಾ ನಿರ್ದೇಶಕರು ಆಯ್ಕೆ ಸಮಿತಿಯ ಸದಸ್ಯರು.

  English summary
  Information Minister Roshan Baig all set to announce The Karnataka State Film Awards for the year 2012 on the 25th of August. A total of 59 films will be fighting for various category awards.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X