»   » ಅಪ್ಪು ನಿರ್ಮಾಣದ ಮೊದಲ ಚಿತ್ರಕ್ಕೆ ಇವರೇ ನೋಡಿ ನಾಯಕಿ

ಅಪ್ಪು ನಿರ್ಮಾಣದ ಮೊದಲ ಚಿತ್ರಕ್ಕೆ ಇವರೇ ನೋಡಿ ನಾಯಕಿ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಸಿನಿಮಾಗೆ ನಾಯಕಿಯ ಆಯ್ಕೆ ಆಗಿದೆ. 'ಕವಲು ದಾರಿ' ಸಿನಿಮಾದ ಲೀಡ್ ರೋಲ್ ಗಾಗಿ ಆಡಿಷನ್ ಮಾಡಿ ಒಬ್ಬ ನಟಿಯನ್ನು ಆರಿಸಿಕೊಳ್ಳಲಾಗಿದೆ.

ಸದ್ಯ 'ಕವಲು ದಾರಿ' ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿರುವುದು ರೋಶಿನಿ ಪ್ರಕಾಶ್. ಸತೀಶ್ ನೀನಾಸಂ ಜೊತೆ 'ಟೈಗರ್ ಗಲ್ಲಿ' ಸಿನಿಮಾದಲ್ಲಿ ನಟಿಸುತ್ತಿದ್ದ ರೋಶಿನಿ ಪ್ರಕಾಶ್ ಅವರಿಗೆ ಎರಡನೇ ಚಿತ್ರದಲ್ಲಿಯೇ ಸೂಪರ್ ಚಾನ್ಸ್ ಸಿಕ್ಕಿದೆ. ರೋಶಿನಿ ಜೊತೆಗೆ ಸುಮನ್ ರಂಗನಾಥ್ ಕೂಡ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.

Roshini Prakash is selected to play lead role in 'Kavaludari'.

'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಖ್ಯಾತಿಯ ನಿರ್ದೇಶನ ಹೇಮಂತ್ ರಾವ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಆಪರೇಶನ್ ಅಲಮೇಲಮ್ಮ' ಚಿತ್ರದ ನಾಯಕ ರಿಷಿ ಅಭಿನಯದ ಎರಡನೇ ಚಿತ್ರ ಇದಾಗಿದೆ. ಪುನೀತ್ ತಮ್ಮ 'PRK' ಪ್ರೊಡಕ್ಷನ್ ನಲ್ಲಿ 'ಕವಲು ದಾರಿ' ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಇದೇ ಶುಕ್ರವಾರ ಈ ಸಿನಿಮಾ ಸೆಟ್ಟೇರಲಿದೆ.

English summary
Kannada Actress Roshini Prakash is selected to play lead role in Puneeth Rajkumar's 'Kavaludari' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada