For Quick Alerts
  ALLOW NOTIFICATIONS  
  For Daily Alerts

  ಸ್ಟಾಂಪ್‌ ಮೇಲೆ ಕಿಚ್ಚಿನ ಚಿತ್ರ: ಸುದೀಪ್‌ಗೆ ಹಲವು ಗೌರವ

  By ಫಿಲ್ಮಿಬೀಟ್ ಡೆಸ್ಕ್
  |

  ''ನಿನ್ನ ಪಾಡಿಗೆ ನೀನು ಇಷ್ಟಪಟ್ಟು, ಶ್ರಮಪಟ್ಟು ಕೆಲಸ ಮಾಡುತ್ತಾ ಸಾಗು ದಾಖಲೆಗಳು ತಂತಾನೆ ಆಗುತ್ತವೆ, ನಿನ್ನ ಕೆಲಸವನ್ನು ಜನ ಖಂಡಿತವಾಗಿಯೂ ಗುರುತಿಸುತ್ತಾರೆ'' ಮೊನ್ನೆ ಸುದೀಪ್‌ ಹುಟ್ಟುಹಬ್ಬದಂದು ಆಯೋಜಿತವಾಗಿದ್ದ ಸಂವಾದದಲ್ಲಿ ಸುದೀಪ್ ಹೇಳಿದ ಮಾತಿದು.

  ತಾವು ಮಾಡಿದ್ದನ್ನೇ ಸುದೀಪ್ ಹೇಳುವವರು. ಅಂತೆಯೇ ಸುದೀಪ್ ತಮ್ಮ ಪಾಡಿಗೆ ತಾವು ಶ್ರಮಪಟ್ಟು ಕೆಲಸ ಮಾಡುತ್ತಾ ಸಾಗಿದರು. ಅವರ ಸಾಧನೆಯನ್ನು ಜನಗಳು, ಸರ್ಕಾರ, ಅಭಿಮಾನಿಗಳು, ಹಲವು ಸಂಘ-ಸಂಸ್ಥೆಗಳು ಗುರುತಿಸಿದ್ದಾವೆ. ಇದೀಗ ರೋಟರಿ ಸಂಸ್ಥೆಯು ಸುದೀಪ್ ಸಾಧನೆಯನ್ನು ಗುರುತಿಸಿ ಸನ್ಮಾನ ಮಾಡಿದೆ.

  ಸುದೀಪ್ ಚಿತ್ರರಂಗ ಪ್ರವೇಶಿಸಿ 25 ವರ್ಷಗಳಾಗಿವೆ ಈ 25 ವರ್ಷಗಳಲ್ಲಿ ಭಿನ್ನ-ಭಿನ್ನ ಪಾತ್ರಗಳಲ್ಲಿ ನಟಿಸಿ ಸಿನಿಪ್ರೇಮಿಗಳನ್ನು ರಂಜಿಸಿದ್ದಾರೆ. ನಟನೆ, ನಿರ್ದೇಶನ ಎಲ್ಲರದಲ್ಲೂ ಸೈ ಎನಿಸಿಕೊಂಡಿರುವ ಸುದೀಪ್ ಸಾಧನೆ ಸಹಜವಾಗಿಯೇ ಭಾರತೀಯ ಅಂಚೆ ಇಲಾಖೆಯನ್ನು ಸೆಳೆದಿದ್ದು ಸುದೀಪ್ ಚಿತ್ರವನ್ನು ಮುದ್ರಿಸಿ ಸ್ಟ್ಯಾಂಪ್ ಬಿಡುಗಡೆ ಮಾಡಿದೆ. ಸುದೀಪ್‌ರ ನಟನೆಯನ್ನು ನೋಡಿಯಷ್ಟೆ ಈ ಗೌರವ ನೀಡಲಾಗಿಲ್ಲ ಸುದೀಪ್ ಮಾಡಿರುವ ಸಾಮಾಜಿಕ ಕಾರ್ಯವನ್ನೂ ಪರಿಗಣನೆಗೆ ತೆಗೆದುಕೊಂಡು ಸುದೀಪ್ ಅವರನ್ನು ಗೌರವಿಸಲಾಗಿದೆ.

  ಸುದೀಪ್ ಕೇವಲ ನಟನೆಗಷ್ಟೆ ತಮ್ಮನ್ನು ಸೀಮಿತ ಮಾಡಿಕೊಂಡಿಲ್ಲ. ನಿರ್ದೇಶಕ, ಬರಹಗಾರ, ಕ್ರಿಕೆಟಿಗ, ನಿರೂಪಕ, ಬಾಣಸಿಗ, ಗಾಯಕ, ಉದ್ಯಮಿ, ಮಾನವತಾವಾದಿ ಹೀಗೆ ಹಲವು ಆಯಾಮಗಳು ಸುದೀಪ್ ವ್ಯಕ್ತಿತ್ವಕ್ಕೆ ಇವೆ. ಜೊತೆಗೆ ವಿವಾದಗಿಂದ ಸಾಧ್ಯವಾದಷ್ಟೂ ದೂರ ಉಳಿದು, ಚಿತ್ರರಂಗದ ಹೊಸಬರಿಗೆ ಪ್ರೋತ್ಸಾಹ ನೀಡುತ್ತಾ ಸಾಗುತ್ತಿದ್ದಾರೆ ಸುದೀಪ್.

  ಸುದೀಪ್ ಹುಟ್ಟುಹಬ್ಬವಾಗಿ ಕೆಲವೇ ದಿನಗಳಾಗಿವೆ ಇಂಥಹಾ ಸಂದರ್ಭದಲ್ಲಿ ಸುದೀಪ್ ಅಭಿಮಾನಿಯೊಬ್ಬ, ಸುದೀಪ್ ಹೆಸರಲ್ಲಿ ಭಾರತೀಯ ಅಂಚೆ ಇಲಾಖೆಯ 'ಮೈ ಸ್ಟ್ಯಾಂಪ್' ಸರ್ವೀಸ್ ಬಳಸಿ ಸ್ಟ್ಯಾಂಪ್‌ ಮೇಲೆ ಸುದೀಪ್ ಚಿತ್ರ ಮುದ್ರಿಸಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾನೆ.

  ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ರವಿ ಎಂಬಾತ ಸುದೀಪ್ ಅಭಿಮಾನಿಯಾಗಿದ್ದು, ಭಾರತೀಯ ಅಂಚೆಯವರು ನೀಡುವ 'ಮೈ ಸ್ಟ್ಯಾಂಪ್' ಸೇವೆಯನ್ನು ಬಳಸಿಕೊಂಡು ಸ್ಟ್ಯಾಂಪ್‌ ಮೇಲೆ ಸುದೀಪ್ ಅವರ ಭಾವ ಚಿತ್ರವನ್ನು ಮುದ್ರಣಗೊಳ್ಳುವಂತೆ ಮಾಡಿದ್ದಾರೆ. ನೂರಕ್ಕು ಹೆಚ್ಚು ಸ್ಟ್ಯಾಂಪ್‌ಗಳನ್ನು ಮುದ್ರಿಸಿ ಅವನ್ನು ನಟ ಸುದೀಪ್ ಅವರಿಗೆ ಉಡುಗೊರೆಯಾಗಿ ರವಿ ನೀಡಿದ್ದಾನೆ.

  Rotary International Chandrapura Members Felicitate Actor Sudeep

  ಸುದೀಪ್‌ ಅವರ ಸಾಧನೆಯನ್ನು ಗುರುತಿಸಿ ಗೋವಾ ಅಂತರಾಷ್ಟ್ರೀಯ ಸಿನಿಮೋತ್ಸವಕ್ಕೆ ಅತಿಥಿಯಾಗಿ ಕರೆಸಲಾಗಿತ್ತು. ಇನ್ನೂ ಹಲವು ಗೌರವಗಳು ಸುದೀಪ್ ಅವರನ್ನು ಅರಸಿ ಬಂದಿವೆ.

  ಕೆಲವು ದಿನಗಳ ಹಿಂದಷ್ಟೆ ನಡೆದ ಸುದೀಪ್ ಹುಟ್ಟುಹಬ್ಬಕ್ಕೆ ಸುದೀಪ್ ಅಭಿಮಾನಿಗಳು ರಾಜ್ಯದಾದ್ಯಂತ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು. ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್‌ ಸದಸ್ಯರು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ಸುದೀಪ್ ನೇತೃತ್ವದಲ್ಲಿಯೇ ಈ ಸಾಮಾಜಿಕ ಕಾರ್ಯಗಳು ನಡೆಯುತ್ತವೆ.

  ಸುದೀಪ್ ನಟನೆಯ 'ಕೋಟ್ಯಧಿಪತಿ 3' ಸಿನಿಮಾವು ಬಿಡುಗಡೆಗೆ ರೆಡಿಯಾಗಿದೆ. ಅದರ ಬೆನ್ನಲ್ಲೆ 'ವಿಕ್ರಾಂತ್ ರೋಣ' ಸಿನಿಮಾವು ಸಹ ಬಿಡುಗಡೆ ಆಗಲಿದೆ. ಅನುಪ್ ಭಂಡಾರಿ ನಿರ್ದೇಶನದ 'ವಿಕ್ರಾಂತ್ ರೋಣ' ಸಿನಿಮಾದ ಬಗ್ಗೆ ಸುದೀಪ್‌ಗೆ ಬಹಳಷ್ಟು ನಿರೀಕ್ಷೆ ಇದ್ದು, ಇತ್ತೀಚೆಗಷ್ಟೆ ಯೂಟ್ಯೂಬ್‌ನಲ್ಲಿ ಬಿಡುಗಡೆ ಆದ ಸಿನಿಮಾದ ಟೀಸರ್‌ ಭಾರಿ ವೈರಲ್ ಆಗಿದೆ.

  English summary
  Actor Sudeep felicitated by Rotary international Chandrapura members. Sudeep fan Ravi gave Indian postal stamps that has Sudeep's photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X