ಬರೋಬ್ಬರಿ 100 ಮಿಲಿಯನ್ ಹಿಟ್ಸ್ ಪಡೆದ 'ರೌಡಿ ಬೇಬಿ ಹಾಡು
ನಟ ಧನುಷ್ ಹಾಗೂ ಸಾಯಿ ಪಲ್ಲವಿ ಜೋಡಿಯ 'ರೌಡಿ ಬೇಬಿ..' ಹಾಡು ಸೂಪರ್ ಹಿಟ್ ಆಗಿದೆ. 'ಮಾರಿ 2' ಸಿನಿಮಾದ ಈ ಹಾಡಿಗೆ ಎಲ್ಲರೂ ಕ್ವೀನ್ ಬೋಲ್ಡ್ ಆಗಿದ್ದಾರೆ.
'ರೌಡಿ ಬೇಬಿ..' ವಿಡಿಯೋ ಹಾಡು ಇದೀಗ ಯೂಟ್ಯೂಬ್ ನಲ್ಲಿ 100 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಕೇವಲ ಎರಡು ವಾರಗಳಲ್ಲಿ ಈ ಮಟ್ಟಿಗೆ ಹಾಡು ಹಿಟ್ ಆಗಿದೆ. ಈ ಸಂತಸವನ್ನು ನಟ ಧನುಷ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ

ಅಂದಹಾಗೆ, ಸಿನಿಮಾದ ಈ ಹಾಡಿನ ಲಿರಿಕಲ್ ವಿಡಿಯೋ ಈ ಹಿಂದೆಯೇ ಬಿಡುಗಡೆಯಾಗಿತ್ತು. ಆ ಹಾಡು 60 ಮಿಲಿಯನ್ ವ್ಯೂವ್ಸ್ ಪಡೆದುಕೊಂಡಿತ್ತು. ಅದರ ಹಿಂದೆ ಬಂದ ವಿಡಿಯೋ ಸಾಂಗ್ 100 ಮಿಲಿಯನ್ ಆಗಿದೆ. ಎರಡು ಸೇರಿ ಬರೋಬ್ಬರಿ 160 ಮಿಲಿಯನ್ ಹಿಟ್ಸ್ ಅನ್ನು ಹಾಡು ಪಡೆದುಕೊಂಡಿದೆ.
ಈ ವರ್ಷದ ಸೌತ್ ಇಂಡಿಯಾದ ಸೂಪರ್ ಹಿಟ್ ಹಾಡುಗಳ ಪೈಕಿ 'ರೌಡಿ ಬೇಬಿ..' ಹಾಡು ಪ್ರಮುಖವಾಗಿದೆ. ಪ್ರಭುದೇವ ಡ್ಯಾನ್ಸ್ ಹಾಡು ಹಿಟ್ ಆಗಲು ಪ್ರಮುಖ ಕಾರಣವಾಗಿದೆ. ಯುವನ್ ಶಂಕರ್ ರಾಜ್ ಹಾಡಿಗೆ ಸಂಗೀತ ನೀಡಿದ್ದಾರೆ.
English summary
'Maari 2' movie Rowdy Baby video song got 100 million in youtube.


Click it and Unblock the Notifications