ರೌಡಿ ಬೇಬಿ ದಾಖಲೆ : ಅತಿ ಹೆಚ್ಚು ವೀಕ್ಷಣೆ ಪಡೆದ ಸೌತ್ ಇಂಡಿಯಾನ್ ಹಾಡು
'ರೌಡಿ ಬೇಬಿ...' ಹಾಡು ಕೇಳುತ್ತಿದ್ದರೆ ಒಂದು ಕ್ಷಣ ಸುಮ್ಮನಿರಲು ಆಗಲ್ಲ. ಹಾಡು ಕೇಳಿದ ತಕ್ಷಣ ಕುಣಿಯಬೇಕು ಅನಿಸುತ್ತದೆ. ಹೀಗೆ ಎಲ್ಲರನ್ನು ಕುಣಿಸಿದ ಈ ಹಾಡು ಈಗ ದೊಡ್ಡ ದಾಖಲೆ ನಿರ್ಮಿಸಿದೆ.
ತಮಿಳಿನ 'ರೌಡಿ ಬೇಬಿ...' ಹಾಡು ಇದೀಗ ಯೂ ಟ್ಯೂಬ್ ನಲ್ಲಿ 500 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ವೀಕ್ಷಣೆ ಪಡೆದ ಹಾಡುಗಳ ಪೈಕಿ ಮೊದಲ ಸ್ಥಾನದಲ್ಲಿದೆ.
'ಮಾರಿ 2' ಸಿನಿಮಾದ ಈ ಹಾಡು ಮಾಡಿದ ಮೋಡಿ ಕಡಿಮೆ ಏನಲ್ಲ. ಹಾಡು ಬಿಡುಗಡೆಯಾದಾಗನಿಂದ ಯೂ ಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಹಿಟ್ಸ್ ಪಡೆದುಕೊಳ್ಳುತ್ತಿತ್ತು. ಈಗ 5 ತಿಂಗಳಿನಲ್ಲಿ ಬರೋಬ್ಬರಿ 500 ಮಿಲಿಯನ್ ವೀಕ್ಷಣೆ ಪಡೆದಿದೆ. ಇದರ ಜೊತೆಗೆ ರೌಡಿ ಬೇಬಿ ಲಿರಿಕಲ್ ವಿಡಿಯೋ 16 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ.

ಈ ಹಾಡು ಈ ಮಟ್ಟಿಗಿನ ಜನಪ್ರಿಯತೆ ಪಡೆಯಲು ಹಾಡಿನ ಮ್ಯೂಸಿಕ್ ಹಾಗೂ ಡ್ಯಾನ್ಸ್ ಬಹಳ ಮುಖ್ಯವಾಗಿದೆ. ಇಳಯರಾಜ ಪುತ್ರ ಯುವನ್ ಶಂಕರ್ ರಾಜ ಈ ಹಾಡಿಗೆ ಸಂಗೀತ ನೀಡಿದ್ದಾರೆ. ಪ್ರಭುದೇವ ನೃತ್ಯ ಸಂಯೋಜನೆ ಮಾಡಿದ್ದಾರೆ.
ನಟ ಧನುಷ್ ಹಾಗೂ ಸಾಯಿ ಪಲ್ಲವಿ ಇಬ್ಬರ ಡ್ಯಾನ್ಸ್ ಹಾಡಿನ ಹೈಲೈಟ್ ಆಗಿದೆ. ಮತ್ತೊಂದು ವಿಶೇಷ ಅಂದರೆ ಈ ಹಾಡನ್ನು ಧನುಷ್ ಅವರೇ ಬರೆದು ಹಾಡಿದ್ದಾರೆ. ಕೊಲವೆರಿ ಹಾಡಿನ ಬಳಿಕ ಮತ್ತೊಮ್ಮೆ ಧನುಷ್ ಹಾಡು ಈ ಮಟ್ಟಿಗಿನ ಹಿಟ್ ಆಗಿದೆ.


Click it and Unblock the Notifications











