twitter
    For Quick Alerts
    ALLOW NOTIFICATIONS  
    For Daily Alerts

    ಕೆಜಿಎಫ್ 2 ಕಲೆಕ್ಷನ್ ದಾಖಲೆ ಮುರಿದ ಆರ್‌ಆರ್‌ಆರ್; ವರ್ಷದ ಬಳಿಕ ಇದು ಸಾಧ್ಯವಾಗಿದ್ದೇಗೆ?

    By ಫಿಲ್ಮಿಬೀಟ್ ಡೆಸ್ಕ್
    |

    ಕಳೆದ ವರ್ಷ ಸಿನಿಮಾ ಕ್ಷೇತ್ರ ಚಿನ್ನದ ಬೆಳೆ ತೆಗೆದ ವರ್ಷ ಎಂದೇ ಹೇಳಬಹುದು. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದ ಚಿತ್ರರಂಗಗಳು ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿದ ವರ್ಷ ಇದಾಗಿತ್ತು. ಮಲಯಾಳಂ ಚಿತ್ರರಂಗವನ್ನು ಹೊರತುಪಡಿಸಿ ಉಳಿದ ಚಿತ್ರರಂಗಗಳಾದ ಕನ್ನಡ ಚಿತ್ರರಂಗ, ತೆಲುಗು ಚಿತ್ರರಂಗ ಹಾಗೂ ತಮಿಳು ಚಿತ್ರರಂಗಗಳು ಕಳೆದ ವರ್ಷ ಇಂಡಸ್ಟ್ರಿ ಹಿಟ್ ಬಾರಿಸುವಲ್ಲಿ ಯಶಸ್ವಿಯಾಗಿದ್ದವು.

    ಹೌದು, ತಮಿಳಿನ ವಿಕ್ರಮ್ ಹಾಗೂ ಪೊನ್ನಿಯಿನ್ ಸೆಲ್ವನ್ ಚಿತ್ರಗಳು ತಮಿಳುನಾಡಿನಲ್ಲಿ ದಾಖಲೆಯ ಕಲೆಕ್ಷನ್ ಮಾಡಿ ಈ ಹಿಂದಿನ ಕಲೆಕ್ಷನ್‌ಗಳನ್ನು ಹಿಂದಿಕ್ಕಿ ಇಂಡಸ್ಟ್ರಿ ಹಿಟ್ ಚಿತ್ರಗಳು ಎನಿಸಿಕೊಂಡರೆ, ಅತ್ತ ತೆಲುಗಿನ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ತೆಲುಗು ರಾಜ್ಯಗಳಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ದಾಖಲೆ ಬರೆದು ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಇತ್ತ ಕನ್ನಡದಲ್ಲಿ ಮಾರ್ಚ್ ತಿಂಗಳಿನಲ್ಲಿ ಕರ್ನಾಟಕದಲ್ಲಿ 150 ಕೋಟಿ ಕಲೆಕ್ಷನ್ ಮಾಡುವ ಮೂಲಕ ಜೇಮ್ಸ್ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿತ್ತು. ಬಳಿಕ ಕೆಜಿಎಫ್ ಚಾಪ್ಟರ್ 2 ಈ ದಾಖಲೆಯನ್ನು ಹಿಂದಿಕ್ಕಿ ಕನ್ನಡದ ನೂತನ ಇಂಡಸ್ಟ್ರಿ ಹಿಟ್ ಆಗಿ ಹೊರಹೊಮ್ಮಿತು.

    ಇನ್ನು ಕನ್ನಡದ ಇಂಡಸ್ಟ್ರಿ ಹಿಟ್ ಆದ ಕೆಜಿಎಫ್ ಚಾಪ್ಟರ್ 2 ಹಾಗೂ ತೆಲುಗಿನ ಇಂಡಸ್ಟ್ರಿ ಹಿಟ್ ಆರ್ ಆರ್ ಆರ್ ನಡುವೆ ಕಳೆದ ವರ್ಷ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಯಾವುದು ಎಂಬ ಪೈಪೋಟಿ ಏರ್ಪಟ್ಟಿತ್ತು. ತನಗಿಂತ ಒಂದು ತಿಂಗಳು ಮುಂಚಿತವಾಗಿ ಬಿಡುಗಡೆಗೊಂಡಿದ್ದ ಆರ್ ಆರ್ ಆರ್ ಚಿತ್ರದ ಕಲೆಕ್ಷನ್ ಅನ್ನು ಹಿಂದಿಕ್ಕಿದ್ದ ಕೆಜಿಎಫ್ ಚಾಪ್ಟರ್ 2 2022ರಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಭಾರತದ ಚಿತ್ರ ಎನಿಸಿಕೊಂಡಿತು. ಆದರೆ ಇದೀಗ ಆರ್ ಆರ್ ಆರ್ ಈ ವರ್ಷ ಕೆಜಿಎಫ್ ಚಾಪ್ಟರ್ 2 ದಾಖಲೆಯನ್ನು ಹಿಂದಿಕ್ಕಿ 2022ರಲ್ಲಿ ಬಿಡುಗಡೆಗೊಂಡ ಭಾರತದ ಚಿತ್ರಗಳ ಪೈಕಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ. ಇದು ಸಾಧ್ಯವಾಗಿದ್ದೇಗೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

     ಆರ್ ಆರ್ ಆರ್ ಕಲೆಕ್ಷನ್ ಹೆಚ್ಚಿಸಿದ ಜಪಾನ್ ರಿಲೀಸ್!

    ಆರ್ ಆರ್ ಆರ್ ಕಲೆಕ್ಷನ್ ಹೆಚ್ಚಿಸಿದ ಜಪಾನ್ ರಿಲೀಸ್!

    ಕಳೆದ ವರ್ಷ ಅತಿಹೆಚ್ಚು ಗಳಿಸಿದ್ದ ಕೆಜಿಎಫ್ ಚಾಪ್ಟರ್ 2 ಚಿತ್ರದ ದಾಖಲೆಯನ್ನು ಆರ್‌ಆರ್‌ಆರ್‌ ಈ ವರ್ಷ ಹಿಂದಿಕ್ಕಿದ್ದು ಜಪಾನ್ ಬಿಡುಗಡೆಯಿಂದ. ಹೌದು, ಜಪಾನ್ ಭಾಷೆಗೆ ಡಬ್ ಆಗಿ ಬಿಡುಗಡೆಗೊಂಡ ಆರ್ ಆರ್ ಆರ್ ಅಲ್ಲಿ ನೂರು ದಿನಗಳನ್ನು ಪೂರೈಸಿದ್ದು, ಭರ್ಜರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಕಳೆದ ವರ್ಷ 1200 ಕೋಟಿ ಗಳಿಕೆ ಮಾಡಿದ್ದ ಈ ಚಿತ್ರ ಈಗ 1258 ಕೋಟಿ ಗಳಿಕೆ ಮಾಡಿದ್ದು, 2022ರ ಭಾರತದ ಚಿತ್ರಗಳ ಪೈಕಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎನಿಸಿಕೊಂಡಿದೆ. ಇನ್ನು ಕೆಜಿಎಫ್ ಚಾಪ್ಟರ್ 2 1250 ಕೋಟಿ ರೂಪಾಯಿಗಳನ್ನು ಗಳಿಸಿ ಈ ದಾಖಲೆಯನ್ನು ತನ್ನ ಹೆಸರಿನಲ್ಲಿ ಹೊಂದಿತ್ತು. ಆದರೀಗ ಈ ದಾಖಲೆ ಆರ್ ಆರ್ ಆರ್ ಪಾಲಾಗಿದೆ.

    ಅತಿಹೆಚ್ಚು ಗಳಿಸಿದ ಭಾರತದ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಆರ್ ಆರ್ ಆರ್

    ಅತಿಹೆಚ್ಚು ಗಳಿಸಿದ ಭಾರತದ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ ಆರ್ ಆರ್ ಆರ್

    ಇನ್ನು ಭಾರತ ಚಿತ್ರರಂಗದ ಇತಿಹಾಸದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಆರ್ ಆರ್ ಆರ್ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೇರಲೂ ಸಹ ಈ ಜಪಾನ್ ಗಳಿಕೆ ಸಹಾಯ ಮಾಡಿದೆ. ಈ ಬದಲಾವಣೆ ನಂತರ ಅತಿಹೆಚ್ಚು ಗಳಿಕೆ ಮಾಡಿದ ಭಾರತದ ಚಿತ್ರಗಳ ಪಟ್ಟಿ ಹೇಗಿದೆ ಎಂಬ ಮಾಹಿತಿ ಇಲ್ಲಿದೆ..

    1. ದಂಗಲ್ - 2024 ಕೋಟಿ ರೂಪಾಯಿಗಳು

    2. ಬಾಹುಬಲಿ 2 - 1810 ಕೋಟಿ ರೂಪಾಯಿಗಳು

    3. ಆರ್ ಆರ್ ಆರ್ - 1258 ಕೋಟಿ ರೂಪಾಯಿಗಳು*

    4. ಕೆಜಿಎಫ್ ಚಾಪ್ಟರ್ 2 - 1250 ಕೋಟಿ ರೂಪಾಯಿಗಳು

    5. ಸೀಕ್ರೆಟ್ ಸೂಪರ್‌ಸ್ಟಾರ್ - 977 ಕೋಟಿ ರೂಪಾಯಿಗಳು

    ಇನ್ನೂ ಪ್ರದರ್ಶನವಾಗ್ತಿದೆ ಆರ್ ಆರ್ ಆರ್

    ಇನ್ನೂ ಪ್ರದರ್ಶನವಾಗ್ತಿದೆ ಆರ್ ಆರ್ ಆರ್

    ಜಪಾನ್ ಕಲೆಕ್ಷನ್ ಸಹಾಯದಿಂದ ಮೇಲ್ಕಂಡ ಸಾಧನೆಗಳನ್ನು ಮಾಡಿರುವ ಆರ್‌ಆರ್‌ಆರ್ ಇನ್ನೂ ಸಹ ಜಪಾನ್‌ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಹೌದು, ಜಪಾನ್‌ನಲ್ಲಿ ನೂರು ದಿನಗಳನ್ನು ಪೂರೈಸಿದ ಬಳಿಕವೂ ಸಹ ಆರ್‌ಆರ್‌ಆರ್‌ ಚಿತ್ರದ ಓಟ ಮಾತ್ರ ನಿಂತಿಲ್ಲ. ಹೀಗೆ ತನ್ನ ಓಟವನ್ನು ಮುಂದುವರಿಸಿರುವ ಆರ್‌ಆರ್‌ಆರ್‌ ಗಳಿಕೆ ಮತ್ತಷ್ಟು ಏರುವುದಂತೂ ಖಚಿತ.

    English summary
    RRR beats lifetime collection of KGF chapter 2 with the help of Japan earnings. Read on
    Wednesday, February 1, 2023, 14:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X