For Quick Alerts
  ALLOW NOTIFICATIONS  
  For Daily Alerts

  ಅಪ್ಪು ಕನಸಿನ 'ಗಂಧದ ಗುಡಿ'ಗೆ ಬಾಹುಬಲಿ ನಿರ್ದೇಶಕ ರಾಜಮೌಳಿ ಅಸಾಧಾರಣ ಎಂದಿದ್ದೇಕೆ?

  |

  'ಗಂಧದ ಗುಡಿ' ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕಂಡ ಬಹುದಿನದ ಕನಸು. ಇಂತಹದ್ದೊಂದು ಕನಸು ಕರ್ನಾಟಕದಲ್ಲಷ್ಟೇ ಅಲ್ಲ. ಭಾರತೀಯ ಚಿತ್ರರಂಗದಲ್ಲೇ ಈ ವಿನೂತನ ಪ್ರಯತ್ನಕ್ಕೆ ಕೈ ಹಾಕಿಲ್ಲ. ಕರ್ನಾಟಕದ ಒಬ್ಬ ಸೂಪರ್‌ಸ್ಟಾರ್ ಹಾಗೂ ವನ್ಯ ಜೀವಿ ಛಾಯಾಗ್ರಾಹಕ ಇಬ್ಬರೂ ಸೇರಿ ಪ್ರಕೃತಿಯ ಸೊಬಗನ್ನು ತೋರಿಸುವ ಅದ್ಭುತ ಸಿನಿಮಾವನ್ನು ತೆರೆ ಮೇಲೆ ತರುವ ಪ್ರಯತ್ನವನ್ನು ಯಾರೂ ಮಾಡಿಲ್ಲ. ಇದೇ ಪ್ರಯತ್ನ ಫಲವೇ ಈಗ ಒಂದು ಚಿಕ್ಕ ಟೀಸರ್ ಮಾತಾಡುತ್ತಿದೆ. ಮೂವೀ ಮಾಂತ್ರಿಕ ರಾಜಮೌಳಿಯ ಮೆಚ್ಚಿಗೆ ಗಳಿಸಿದೆ.

  Recommended Video

  ಎಲ್ಲಾಕಡೆ ಧೂಳೆಬ್ಬಿಸುತ್ತಿದೆ RRR ಚಿತ್ರದ ಟ್ರೇಲರ್

  ಡಿಸೆಂಬರ್ 6 ರಂದು ಪಾರ್ವತಮ್ಮ ರಾಜ್‌ಕುಮಾರ್ ಜನ್ಮ ದಿನದಂದು ಅಪ್ಪು ಕಂಡ ಕನಸಿ ಚಿಕ್ಕದೊಂದು ಝಲಕ್ ಅನ್ನು ಕನ್ನಡಿಗರ ಮುಂದೆ ಇಡಲಾಗಿತ್ತು. 'ಗಂಧದ ಗುಡಿ'ಯ ಟೀಸರ್ ನೋಡಿ ಇಡೀ ಕನ್ನಡ ಚಿತ್ರರಂಗ ಬೆರಗು ಕಣ್ಣಿಗಳಿಂದ ನೋಡಿತ್ತು. ಈಗ ಬಾಹುಬಲಿಯಂತಹ ದಾಖಲೆ ಸಿನಿಮಾ ನಿರ್ದೇಶಿಸಿದ ಎಸ್ ಎಸ್ ರಾಜಮೌಳಿ 'ಗಂಧದ ಗುಡಿ'ಯ ಚಿಕ್ಕ ಟೈಟಲ್ ಟೀಸರ್ ನೋಡಿ ಮನಸಾರೆ ಹೊಗಳಿದ್ದಾರೆ.

  ಅಪ್ಪು ಕನಸು ಅಸಾಧಾರಣವೆಂದ ರಾಜಮೌಳಿ

  ಇತ್ತೀಚೆಗೆ ಎಸ್‌ ಎಸ್ ರಾಜಮೌಳಿ RRR ಸಿನಿಮಾದ ಜನನಿ ಸಾಂಗ್ ರಿಲೀಸ್ ಮಾಡಲು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಭೇಟಿ ನೀಡಿ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ಅವರ ಮಕ್ಕಳಿಗೆ ಧೈರ್ಯ ತುಂಬಿ ಹೋಗಿದ್ದರು. ಈಗ ಅಪ್ಪು ಕಂಡ ಕನಸಿನ ಪ್ರಾಜೆಕ್ಟ್ 'ಗಂಧದ ಗುಡಿ'ಯ ಟೈಟಲ್ ಟೀಸರ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ. " ಗಂಧದ ಗುಡಿ ನೋಡುವುದಕ್ಕೆ ಅಸಾಧಾರಣವೆನಿಸುತ್ತದೆ. ಇದು ನಿಜವಾಗಿಯೂ ಪುನೀತ್‌ಗೆ ಹೃದಯಪೂರ್ವಕವಾಗಿ ನೀಡಲಾದ ಗೌರವ. ಕರ್ನಾಟಕದ ಸೊಬಗನ್ನು ಸಂಭ್ರಮಿಸಲು ಅಪ್ಪು ಕಂಡ ಡಾಕ್ಯೂಮೆಂಟರಿ ನಿಜಕ್ಕೂ ಗಮನಾರ್ಹ. ಈ ವಿಶಿಷ್ಟ ಪ್ರಯತ್ನಕ್ಕೆ ಇಡೀ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ." ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ.

  ರಾಜಮೌಳಿಗೆ ಪ್ರತಿಕ್ರಿಯಿಸಿದ ಅಮೋಘವರ್ಷ

  ಅಪ್ಪು ಕನಸನ್ನು ನನಸು ಮಾಡುವುದಕ್ಕೆ ಜೊತೆ ಒಂದು ವರ್ಷಗಳ ಕಾಲ ಜೊತೆಯಲ್ಲೇ ಇದ್ದ ಗಂಧದ ಗುಡಿಯ ಮತ್ತೊಬ್ಬ ರೂವಾರಿ ಅಮೋಘವರ್ಷ. ಅಪ್ಪು ಹಾಗೂ ಅಮೋಘವರ್ಷ ಇಬ್ಬರೂ ಸೇರಿಕೊಂಡು ನಿರ್ಮಿಸಿದ ಗಂಧದ ಗುಡಿ ದೇಶಾದ್ಯಂತ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ವಿಶ್ವದ ಮೂಲೆ ಮೂಲೆಯಿಂದ ಈ ಗಂಧದ ಗುಡಿ ಟೈಟಲ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈಗ ಸ್ವತಃ ಮೂವಿ ಮಾಂತ್ರಿಕ ಜಕ್ಕಣ್ಣನೇ ಮೆಚ್ಚುಗೆ ಸೂಚಿಸಿರುವುದ್ದು, ಅಮೋಘ ವರ್ಷ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

  2 ದಿನದಲ್ಲಿ 35 ಲಕ್ಷ ಮಂದಿ ವೀಕ್ಷಣೆ

  2 ದಿನದಲ್ಲಿ 35 ಲಕ್ಷ ಮಂದಿ ವೀಕ್ಷಣೆ

  'ಗಂಧದ ಗುಡಿ' ಟೈಟಲ್ ಟೀಸರ್ ರಿಲೀಸ್ ಆದ ದಿನದಿಂದ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಪ್ಪು ಅಭಿಮಾನಿಗಳಂತೂ ಈ ಟೀಸರ್ ನೋಡಿ ಕಣ್ತುಂಬಿ ಕೊಂಡಿದ್ದಾರೆ. ಮತ್ತೆ ಎದ್ದು ಬಂದ ಪವರ್‌ಸ್ಟಾರ್ ನೋಡಿ ಥ್ರಿಲ್ ಆಗಿದ್ದಾರೆ. ಪುನೀತ್ ರಾಜ್‌ಕುಮಾರ್ ಅಗಲಿಕೆ ನೋವಿನಲ್ಲಿದ್ದವರ ಕಣ್ಣುಗಳನ್ನು ಈ ಟೀಸರ್ ಒದ್ದೆಯಾಗಿಸಿದೆ. ಅಪ್ಪು ಒಡೆತನದ ಪಿಆರ್‌ಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಟೀಸರ್ ರಿಲೀಸ್ ಆಗಿತ್ತು. ಎರಡೇ ದಿನಕ್ಕೆ ಬರೋಬ್ಬರಿ 35 ಲಕ್ಷ ಮಂದಿ ವೀಕ್ಷಿಸಿ, 3.87 ಲಕ್ಷಕ್ಕೂ ಅಧಿಕ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.

  ಥಿಯೇಟರ್‌ನಲ್ಲಿ ಅಪ್ಪು 'ಗಂಧದ ಗುಡಿ'

  ಥಿಯೇಟರ್‌ನಲ್ಲಿ ಅಪ್ಪು 'ಗಂಧದ ಗುಡಿ'

  ಗಂಧದ ಗುಡಿ ಕೇವಲ ಡಾಕ್ಯೂಮೆಂಟರಿ ಅಲ್ಲ. ಇದೊಂದು ವಿಭಿನ್ನ ಸಿನಿಮಾ. ಕರ್ನಾಟಕದ ಪ್ರಕೃತಿ ಸೌಂದರ್ಯದ ಸೊಬಗನ್ನು ಬೆಳ್ಳಿ ಪರದೆಯ ಮೇಲೆ ನೋಡುವುದೇ ಒಂದು ಅದ್ಭುತ ಅನುಭವ. ಅಪ್ಪು ಕಂಡ ಕನಸು ಕೂಡ ಇದೆನೇ. ಹೀಗಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಗಂಧದ ಗುಡಿ'ಯನ್ನು ತೆರೆಮೇಲೆ ತರಲು ತೀರ್ಮಾನಿಸಿದ್ದು, 2022ರಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಣೆ ಮಾಡಲಾಗಿದೆ. ಈ ಟೀಸರ್ ರಿಲೀಸ್ ಆದಲ್ಲಿಂದ ಸಿನಿಮಾ ಯಾವಾಗ ನೋಡುತ್ತೇವೋ ಅಂತ ಅಪ್ಪು ಅಭಿಮಾನಿಗಳು ಕಾದು ಕೂತಿದ್ದಾರೆ.

  English summary
  RRR director SS Rajamouli praised Puneeth Rajkumar dream project Gandhada Gudi. GandhadaGudi looks phenomenal and will certainly be an honest & heartfelt tribute to Puneeth says SS Rajamouli.
  Wednesday, December 8, 2021, 17:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X