RRR vs James Collection: ಕರ್ನಾಟಕದಲ್ಲಿ 'ಜೇಮ್ಸ್' ರೆಕಾರ್ಡ್ ಬ್ರೇಕ್ ಮಾಡಲು ಪರದಾಡಿದ RRR!
'ಜೇಮ್ಸ್' ಸಿನಿಮಾ ಮಾರ್ಚ್ 17ರಂದು ತೆರೆಕಂಡ ದಿನದಿಂದ ವರ್ಲ್ಡ್ ವೈಡ್ ಉತ್ತಮ ಪ್ರದರ್ಶನ ಕಾಣುತ್ತಿದೆ. ರಾಜ್ಯ, ಹೊರ ರಾಜ್ಯ ಮತ್ತೆ ಬೇರೆ ಬೇರೆ ದೇಶಗಳಲ್ಲಿ ಪುನೀತ್ ಅಭಿನಯದ 'ಜೇಮ್ಸ್' ಸಿನಿಮಾ ರಿಲೀಸ್ ಆಗಿದ್ದು ಕಲೆಕ್ಷನ್ ವಿಚಾರದಲ್ಲಿ ಭಾರೀ ಸದ್ದು ಮಾಡಿದೆ.
'ಜೇಮ್ಸ್' ಸಿನಿಮಾದ ಡೇ ಒನ್ ಕಲೆಕ್ಷನ್ ನಿಂದ ಹಿಡಿದು ಇಲ್ಲಿಯ ವರೆಗೂ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಕಣ್ಣಿಟ್ಟಿರುವ ಸಿನಿಮಾ ಮಂದಿ ಭಾರಿ ಕೌತುಕದಿಂದ 'ಜೇಮ್ಸ್' ಕಲೆಕ್ಷನ್ ಬಗ್ಗೆ ಮಾತನಾಡುತ್ತಿದ್ದಾರೆ.
ಇದೀಗ 'ಜೇಮ್ಸ್' ಮತ್ತು RRR ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ವಿಚಾರ ಸುದ್ದಿಯಲ್ಲಿದೆ. ನಿನ್ನೆಯಷ್ಟೆ (ಮಾ. 25) ಬಿಡುಗಡೆಯಾಗಿರುವ ಈ ಸಿನಿಮಾ ಕರ್ನಾಟಕದಲ್ಲಿ ಮಾಡಿರುವ ಕಲೆಕ್ಷನ್ ಎಷ್ಟು. 'ಜೇಮ್ಸ್' ಸಿನಿಮಾದ ಕಲೆಕ್ಷನ್ ಅನ್ನು ಬೀಟ್ ಮಾಡಿದ್ಯಾ ಅಂದ್ರೆ ಖಂಡಿತಾ ಇಲ್ಲಾ.

RRR ಸಿನಿಮಾ ಎಡವಿದ್ದೆಲ್ಲಿ?
ಹೌದು ರಿಲೀಸ್‌ಗೂ ಮುನ್ನವೇ 'ಜೇಮ್ಸ್' ಚಿತ್ರದ ಥಿಯೇಟರ್ ಲಿಸ್ಟ್, ಶೋ ಲಿಸ್ಟ್ ನೋಡಿ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿತ್ತ. ಅದರಂತೆ ಜೇಮ್ಸ್ ಚಿತ್ರವು ರಾಜ್ಯದಲ್ಲಿ ಊಹೆಗು ಮೀರಿ 20ಕೋಟಿ ಕಲೆಕ್ಷನ್ ಮಾಡಿದೆ. ಆದರೇ ಕರ್ನಾಟಕದಲ್ಲಿ RRR ಸಿನಿಮಾದ ಕಲೆಕ್ಷನ್ 'ಜೇಮ್ಸ್' ಕಲೆಕ್ಷನ್ ಅನ್ನು ಬ್ರೇಕ್ ಮಾಡಿಲ್ಲ. ಇದಕ್ಕೆ ಸಾಕಷ್ಟು ಕಾರಣಗಳು ಇದ್ದರೂ ಈಗ 'ಜೇಮ್ಸ್' ರೆಕಾರ್ಡ್ ಅನ್ನು RRR ಬ್ರೇಕ್ ಮಾಡಲು ಸಾಧ್ಯ ಆಗದೇ ಇದಿದ್ದಕ್ಕೆ ಅಪ್ಪು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ವರ್ಲ್ಡ್ ವೈಡ್ ಮೊದಲ ದಿನವೇ 200 ಕೋಟಿಯ ಗಡಿ ದಾಟಿದೆ
ಅಷ್ಟಕ್ಕು RRR ಸಿನಿಮಾ ಕರ್ನಾಟಕದಲ್ಲಿ ಫಸ್ಟ್ ಡೇ ಮಾಡಿದ ಕಲೆಕ್ಷನ್ ಕೇವಲ 14 ಕೋಟಿ. ವಿಶ್ವದಾದ್ಯಂತ ತೆರೆಕಂಡಿರುವ ಈ ಸಿನಿಮಾ ವರ್ಲ್ಡ್ ವೈಡ್ ಈ ಚಿತ್ರ ಮೊದಲ ದಿನವೇ 200 ಕೋಟಿಯ ಗಡಿ ದಾಟಿದೆ. ಇದು ನಿರೀಕ್ಷೆಯನ್ನು ಮೀರಿಸಿದ ಕಲೆಕ್ಷನ್ ಆಗಿದೆ. ವಿಶ್ವಾದ್ಯಂತ RRR ಮೊದಲ ದಿನದ ಬಾಕ್ಸಾಫೀಸ್ ಗಳಿಕೆ 260 ಕೋಟಿ ಆಗಿದೆ ಎಂದು ಅಂದಾಜಿಸಲಾಗಿದೆ. ಕಲೆಕ್ಷನ್ ವಿಚಾರದಲ್ಲಿ ಬೇರೆ ಬೇರೆ ಕಡೆ ಉತ್ತಮ ರೆಕಾರ್ಡ್ ಮಾಡುತ್ತಿರುವ RRR ಕರ್ನಾಟಕದಲ್ಲಿ 'ಜೇಮ್ಸ್' ರೆಕಾರ್ಡ್ ಬ್ರೇಕ್ ಮಾಡಲು ವಿಫಲವಾಗಿದೆ.

RRR ಹಿಂದಿ ಅವತರಣಿಕೆ ಮೊದಲ ದಿನ 25 ಕೋಟಿ
ಇನ್ನು ಆಂಧ್ರ ಮತ್ತು ತೆಲಂಗಾಣವನ್ನು ಬಿಟ್ಟು ತಮಿಳುನಾಡಿನಲ್ಲಿ ಸುಮಾರು ರೂ 10 ಕೋಟಿ ಗಳಿಸಿದರೆ, ಕರ್ನಾಟಕ ಮತ್ತು ಕೇರಳದಲ್ಲಿ ಕ್ರಮವಾಗಿ ರೂ 14 ಕೋಟಿ ಮತ್ತು ರೂ 4 ಕೋಟಿ ಗಳಿಸಿದೆ. ಆದರೆ ಮುಖ್ಯವಾಗಿ ಈ ಚಿತ್ರ ನಾರ್ತ್‌ನಲ್ಲಿ ಎಷ್ಟು ಗಳಿಸಿದೆ ಎನ್ನುವ ಕುತೂಹಕ್ಕೂ ತೆರೆ ಬಿದ್ದಿದೆ. RRR ಹಿಂದಿ ಅವತರಣಿಕೆ ಮೊದಲ ದಿನ 25 ಕೋಟಿ ರೂ ಸಂಗ್ರಹಿಸ ಮಾಡಿದೆ. ಇನ್ನುಳಿದಂತೆ ಚಿತ್ರಕ್ಕೆ ಓವರ್ಸೀಸ್‌ನಲ್ಲಿ 75 ಕೋಟಿ ರೂ ಗಳಿಸಿದೆ ಎಂದು ವರದಿ ಆಗಿದೆ. ಹಾಗಾಗಿ ಚಿತ್ರದ ಮೊದಲ ದಿನದ ಒಟ್ಟಾರೆ ಕಲೆಕ್ಷನ್ 260 ಕೋಟಿ ರೂ ಆಗಿದೆ.

'ಜೇಮ್ಸ್' ಸಿನಿಮಾ ಸಾಕಷ್ಟು ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದೆ
ಮೊದಲ ದಿನವೇ ಕರ್ನಾಟಕ ಒಂದರಲ್ಲೇ 'ಜೇಮ್ಸ್' ಸಿನಿಮಾ 20ಕೋಟಿ ಕಲೆಕ್ಷನ್ ಮಾಡಿದೆ. ವಾರಾಂತ್ಯಕ್ಕೆ ಇನ್ನೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಹಿಂದೆ ಸಿನಿಮಾಗಳು ಮಾಡಿದ್ದ ರೆಕಾರ್ಡ್ಸ್‌ಗಳನ್ನು ಬ್ರೇಕ್ ಮಾಡಿದೆ. ಅಪ್ಪು ಮೇಲಿನ ಅಭಿಮಾನಕ್ಕೆ ಫ್ಯಾನ್ಸ್ 'ಜೇಮ್ಸ್' ಸಿನಿಮಾವನ್ನು ಗೆಲ್ಲಿಸೋದಕ್ಕೆ ಶ್ರಮ ಪಟ್ಟಿದ್ರು. ಕರ್ನಾಟಕದ ಜನತೆ ಕೂಡ ಅಪ್ಪು ಕೊನೆ ಸಿನಿಮಾವನ್ನು ನೋಡಿ ಖುಷಿ ಪಟ್ಟಿದ್ರು. ಹೀಗೆ 'ಜೇಮ್ಸ್' ಸಿನಿಮಾ ಸಾಕಷ್ಟು ರೆಕಾರ್ಡ್‌ಗಳನ್ನು ಬ್ರೇಕ್ ಮಾಡಿದ್ದು, ಇನ್ನು ಕೂಡ ಉತ್ತಮ ಪ್ರದರ್ಶನ ಕಾಣುತ್ತಿದೆ.


Click it and Unblock the Notifications











