ರಾಜಮೌಳಿ 'RRR' : ಕತೆ, ನಾಯಕಿ, ಬಿಡುಗಡೆ ದಿನಾಂಕ ಬಹಿರಂಗ!

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜಮೌಳಿ ಅವರ ಮುಂದಿನ ಸಿನಿಮಾ 'ಆರ್ ಆರ್ ಆರ್' ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ರಾಜಮೌಳಿ 'ಬಾಹುಬಲಿ'ಯಂತಹ ಎರಡು ಮಹಾ ದೃಶ್ಯಕಾವ್ಯ ಗಳನ್ನು ನೀಡಿದ ನಂತರವಂತೂ ಅವರ ಮುಂದಿನ ಸಿನಿಮಾದ ಬಗ್ಗೆ ಮತ್ತಷ್ಟು ನಿರೀಕ್ಷೆ ಜಾಸ್ತಿಯಾಗಿದೆ.

'ಆರ್ ಆರ್ ಆರ್' ಚಿತ್ರದಲ್ಲಿ ತೆಲುಗಿನ ಖ್ಯಾತ ನಟರಾದ ಜ್ಯೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ತೇಜ ಅಭಿನಯಿಸುತ್ತಿದ್ದಾರೆ. ರಾಜಮೌಳಿ ತಮ್ಮ ಚಿತ್ರದ ಬಗ್ಗೆ ಇಷ್ಟು ಮಾಹಿತಿ ಬಿಟ್ಟು ಬೇರೆನೂ ಹೆಚ್ಚು ಹೇಳಿರಲಿಲ್ಲ. ಆದರೀಗ ಈ ಎಲ್ಲಾ ಕುತೂಹಲ ಗಳಿಗೆ ತೆರೆ ಎಳೆದಿದ್ದಾರೆ. ನಿರ್ದೇಶಕ ರಾಜಮೌಳಿ ಮತ್ತು ತಂಡದವರು ಚಿತ್ರದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹೌದು, ಇಂದು 'ಆರ್ ಆರ್ ಆರ್' ಚಿತ್ರದ ಪ್ರೆಸ್ ಮೀಟ್ ನಡೆಸಿದ್ದ ಚಿತ್ರತಂಡ ಚಿತ್ರದ ಬಗ್ಗೆ ಸಂಪೂರ್ಣ ವಿವರವನ್ನು ಬಹಿರಂಗ ಪಡಿಸಿದೆ. 'ಆರ್ ಆರ್ ಆರ್' ಸಿನಿಮಾದ ನಾಯಕಿಯರು, ಕಲಾವಿದರು ಮತ್ತು ಚಿತ್ರದ ಕತೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿದೆ. ಅಂದ್ಹಾಗೆ 'ಆರ್ ಆರ್ ಆರ್' ಸಿನಿಮಾದ ವಿವರ ಇಲ್ಲಿದೆ. ಮುಂದೆ ಓದಿ.

'ಆರ್ ಆರ್ ಆರ್'ನಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರ ಕತೆ

'ಆರ್ ಆರ್ ಆರ್'ನಲ್ಲಿ ಇಬ್ಬರು ಸ್ವಾತಂತ್ರ್ಯ ಹೋರಾಟಗಾರ ಕತೆ

ನಿರ್ದೇಶಕ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್' ಸಿನಿಮಾದ ಕತೆ ರೋಚಕವಾಗಿದೆ. ಇಲ್ಲಿ ಇತಿಹಾಸದ ನೈಜ ಘಟನೆಯನ್ನು ಸಿನಿಮಾ ರೂಪಕ್ಕೆ ತರುತ್ತಿದ್ದಾರೆ ಅಂದ್ಹಾಗೆ, 1920ರಲ್ಲಿ ಬ್ರಿಟಿಷರ ವಿರುದ್ದ ಹೋರಾಡಿದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೋಮರಂ ಭೀಮ್ ಅವರ ಕತೆ ಇದಾಗಿದೆ. ಈ ಇಬ್ಬರು ಪರಕೀಯರ ವಿರುದ್ಧ ಹೋರಾಡಿ ಸಾವನಪ್ಪುತ್ತಾರೆ. ಇದೆ ಕತೆಯನ್ನು ರಾಜಮೌಳಿ ತಮ್ಮ 'ಆರ್ ಆರ್ ಆರ್' ಸಿನಿಮಾದ ಮೂಲಕ ತೆರೆ ಮೇಲೆ ತರುತ್ತಿದ್ದಾರೆ.

ರಾಜಮೌಳಿ ಹೊಸ ಸಿನಿಮಾಗೆ ಇವರೇ ನಾಯಕಿಯರು

ರಾಜಮೌಳಿ ಹೊಸ ಸಿನಿಮಾಗೆ ಇವರೇ ನಾಯಕಿಯರು

ಹೌದು, ನಾಯಕಿರ ವಿಚಾರದಲ್ಲಿ 'ಆರ್ ಆರ್ ಆರ್' ಸಿನಿಮಾಗೆ ದೊಡ್ಡ ತಲೆನೋವಾಗಿತ್ತು. ಈ ಸಿನಿಮಾಗೆ ಸಾಕಷ್ಟು ನಟಿಮಣಿಯರ ಹೆಸರು ಕೇಳಿಬಂದಿತ್ತು. ಈಗ ನಾಯಕಿಯರ ಗೊಂದಲದ ವಿಚಾರಕ್ಕೂ ಪುಲ್ ಸ್ಟಾಪ್ ಇಟ್ಟಿದೆ ಚಿತ್ರತಂಡ. ಅಂದ್ಹಾಗೆ ಬಾಲಿವುಡ್ ನಟಿ ಅಲಿಯಾ ಭಟ್ ಮತ್ತು ಇಂಗ್ಲೆಡ್ ಬೆಡಗಿ ಡೈಸಿ ಎಡ್ಗರ್ ಜಾನ್ಸ್ ಸಿನಿಮಾಗೆ ನಾಯಕಿಯರಾಗಿದ್ದಾರೆ. ಡೈಸಿ 'ವಾರ್ ಆಫ್ ದಿ ವರ್ಲ್ಡ್ಸ್' ಸಿನಿಮಾದ ಖ್ಯಾತಿಯ ಹೊಂದಿದ್ದಾರೆ.

ರಾಜಮೌಳಿ ಸಿನಿಮಾದಲ್ಲಿ ಬಾಲಿವುಡ್ ನ ಸ್ಟಾರ್ ನಟ

ರಾಜಮೌಳಿ ಸಿನಿಮಾದಲ್ಲಿ ಬಾಲಿವುಡ್ ನ ಸ್ಟಾರ್ ನಟ

ರಾಜಮೌಳಿ ಸಿನಿಮಾಗೆ ಬಾಲಿವುಡ್ ನ ಸ್ಟಾರ್ ನಟ ಅಜಯ್ ದೇವಗನ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಚಿತ್ರದಲ್ಲಿ ಅಜಯ್ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಸಸ್ಪೆನ್ಸ್. ಆದರೆ, ಅಜಯ್ ಎಂಟ್ರಿ ಟಾಲಿವುಡ್ ಮಂದಿಯ ಸಂತಸ ಹೆಚ್ಚಿಸಿದೆ.

ಆರ್ ಆರ್ ಆರ್ ಸಿನಿಮಾಗೆ ಎಂಟ್ರಿ ಕೊಟ್ಟ ಸಮುದ್ರ ಕಣಿ

ಆರ್ ಆರ್ ಆರ್ ಸಿನಿಮಾಗೆ ಎಂಟ್ರಿ ಕೊಟ್ಟ ಸಮುದ್ರ ಕಣಿ

ಇನ್ನೂ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಿರ್ದೇಶಕ ಸಮುದ್ರ ಕಣಿ ಸಹ ಬಣ್ಣ ಹಚ್ಚುತ್ತಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸಿನಿ ಇಂಡಸ್ಟ್ರಿಯಲ್ಲಿ ನಿರ್ದೇಶಕನಾಗಿ ಹೆಸರು ಮಾಡಿದ್ದ ಸಮುದ್ರ ಕಣಿ ರಾಜಮೌಳಿ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

'ಆರ್ ಆರ್ ಆರ್' ಸಿನಿಮಾ ರಿಲೀಸ್ ಡೇಟ್ ಅನೌನ್ಸ್

'ಆರ್ ಆರ್ ಆರ್' ಸಿನಿಮಾ ರಿಲೀಸ್ ಡೇಟ್ ಅನೌನ್ಸ್

ಬಾರಿ ನಿರೀಕ್ಷೆ ಮೂಡಿಸಿರುವ 'ಆರ್ ಆರ್ ಆರ್' ಸಿನಿಮಾ ಮುಂದಿನ ವರ್ಷ ಅಂದರೆ 2020 ಜುಲೈ 30ಕ್ಕೆ ರಿಲೀಸ್ ಆಗಲಿದೆ. ಚಿತ್ರದ ಬಗ್ಗೆ ಸಂಪೂರ್ಣ ವಿವರ ನೀಡಿದ ಚಿತ್ರತಂಡ ಚಿತ್ರದ ರಿಲೀಸ್ ಡೇಟ್ ಅನ್ನು ಬಹಿರಂಗ ಪಡಿಸಿದೆ. ವಿಶೇಷ ಅಂದರೆ, ಆರ್ ಆರ್ ಆರ್' ಸಿನಿಮಾ 'ಬಾಹುಬಲಿ' ಚಿತ್ರದಂತೆ ವಿಶ್ವದಾದ್ಯಂತ ತೆರೆಕಾಣುತ್ತಿದೆ. ತೆಲುಗು, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲೂ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.

More from Filmibeat

English summary
RRR movie final cast revealed. SS Rajamouli announces who all will star in his much awaited period drama. Alia Bhatt, Ajay Devgn join cast of SS Rajamouli's upcoming project.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X