twitter
    For Quick Alerts
    ALLOW NOTIFICATIONS  
    For Daily Alerts

    ಕರ್ನಾಟಕದ 600 ಥಿಯೇಟರ್‌ಗಳಲ್ಲಿ RRR ಟ್ರೈಲರ್ ಪ್ರದರ್ಶನ

    |

    ರಾಜಮೌಳಿಯ ನಿರ್ದೇಶಿಸಿದ ಮೆಗಾ ಸಿನಿಮಾ RRR ಬಹಳಷ್ಟು ನಿರೀಕ್ಷೆಯ ಬಳಿಕ ರಿಲೀಸ್ ಆಗಿದೆ. ಜಕ್ಕಣ್ಣನ ಸ್ಟೈಲ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಿದ್ದು, ಬೇಜಾನ್ ಸದ್ದು ಮಾಡುತ್ತಿದೆ. ಟ್ರೈಲರ್‌ ಅನ್ನು ಯೂಟ್ಯೂಬ್‌ಗಿಂತಲೂ ಮೊದಲು ಥಿಯೇಟರ್‌ಗಳಲ್ಲಿ ಬೆಳ್ಳಿ ಪರದೆ ಮೇಲೆ ರಿಲೀಸ್ ಮಾಡಿರುವುದು ವಿಶೇಷ. ಸಿನಿಪ್ರಿಯರು RRR ಟ್ರೈಲರ್ ನೋಡಲೆಂದೇ ಚಿತ್ರಮಂದಿರಕ್ಕೆ ಆಗಮಿಸಿದ್ದರು.

    RRR ಕೇವಲ ತೆಲುಗಿನಲ್ಲಿ ಮಾತ್ರ ರಿಲೀಸ್ ಆಗುತ್ತಿಲ್ಲ. ಕನ್ನಡ ಭಾಷೆಯಲ್ಲೂ ಬಿಡುಗಡೆಯಾಗುತ್ತಿದೆ. ಹಾಗಂತ ಒಂದೆರಡು ಚಿತ್ರಮಂದಿರಗಳಲ್ಲಿ ಮಾತ್ರ ಕನ್ನಡ ವರ್ಷನ್ ರಿಲೀಸ್ ಆಗುತ್ತೆ ಅಂದುಕೊಂಡಿದ್ದರೆ ಅದು ತಪ್ಪು. ಈ ಬಾರಿ ಕನ್ನಡದ ಸೂಪರ್‌ಸ್ಟಾರ್ ಸಿನಿಮಾ ಅದೆಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೋ ಅಷ್ಟೇ ಸ್ಕ್ರೀನ್‌ಗಳಲಿ RRR ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿದೆ. RRR ಸಿನಿಮಾ ರಾಜ್ಯಾದ್ಯಂತ ವಿತರಕ-ನಿರ್ಮಾಪಕ ಸುಪ್ರಿತ್ ರಿಲೀಸ್ ಮಾಡುತ್ತಿದ್ದಾರೆ. ಟ್ರೈಲರ್, ರಿಲೀಸ್ ಪ್ಲ್ಯಾನ್ ಇವೆಲ್ಲದರ ಬಗ್ಗೆನೂ ಸುಪ್ರಿತ್ ಎಕ್ಸ್‌ಕ್ಲೂಸಿವ್ ವಿಚಾರಗಳನ್ನು ಫಿಲ್ಮ್ ಬೀಟ್ ಜೊತೆ ಹಂಚಿಕೊಂಡಿದ್ದಾರೆ.

    600 ಚಿತ್ರಮಂದಿರಗಳಲ್ಲಿ RRR ಟ್ರೈಲರ್

    600 ಚಿತ್ರಮಂದಿರಗಳಲ್ಲಿ RRR ಟ್ರೈಲರ್

    ಮೊದಲು ಕರ್ನಾಟಕದಾದ್ಯಂತ 30 ಚಿತ್ರಮಂದಿರಗಳಲ್ಲಿ ಟ್ರೈಲರ್ ಪ್ರದರ್ಶನ ಮಾಡಲಾಗುತ್ತೆ ಎನ್ನಲಾಗಿತ್ತು. ಆದರೆ, ರಾತ್ರಿ ಕಳೆದು ಬೆಳಕಾಗುವಷ್ಟರಲ್ಲಿ 30 ಇದ್ದ ಚಿತ್ರಮಂದಿರ 600 ಆಗಿದೆ. "ನಾವು ಮೊದಲು 30 ಥಿಯೇಟರ್‌ ಅಂದುಕೊಂಡಿದ್ದೆವು. ಆದರೆ, ಬೇಡಿಕೆ ಹೆಚ್ಚಾಗಿದ್ದರಿಂದ ರಾತ್ರಿ ಇನ್ನೂ 20 ಥಿಯೇಟರ್‌ಗಳನ್ನು ಹೆಚ್ಚಿಗೆ ಸೇರಿಸಲಾಯ್ತು. ನಮಗೆ ತುಂಬಾನೇ ಡಿಮ್ಯಾಂಡ್ ಬಂದಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ಅದು ಸಾಧ್ಯವಾಗಿರಲಿಲ್ಲ. ಈಗ 600 ಚಿತ್ರಮಂದಿರಗಳಲ್ಲಿ RRR ಟ್ರೈಲರ್ ಪ್ಲೇ ಆಗುತ್ತಿದೆ. ರೆಸ್ಪಾನ್ಸ್ ತುಂಬಾನೇ ಚೆನ್ನಾಗಿದೆ. ಬಹುತೇಕ 50 ಚಿತ್ರಮಂದಿರಗಳೂ ಕೂಡ ಫುಲ್ ಆಗಿದ್ದವು. " ಎಂದು ವಿತರಕ ಸುಪ್ರಿತ್ ಹೇಳಿದ್ದಾರೆ.

    RRR ಟ್ರೈಲರ್ ನೋಡಿದವರ ಸಂಖ್ಯೆ ಎಷ್ಟು?

    RRR ಟ್ರೈಲರ್ ನೋಡಿದವರ ಸಂಖ್ಯೆ ಎಷ್ಟು?

    RRR ಚಿತ್ರತಂಡ ಟ್ರೈಲರ್ ಅನ್ನು ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಅದರಂತೆಯೇ ಸಿನಿಮಾದ ಟ್ರೈಲರ್ ಅನ್ನು ಬೇರೊಂದು ಸಿನಿಮಾ ಬಿಡುಗಡೆ ಆಗುವುದಕ್ಕೂ ಮುನ್ನ ರಿಲೀಸ್ ಆಗಿತ್ತು. ಮೊದಲು ಪ್ರಸಾರವಾದ ಟ್ರೈಲರ್ ಅನ್ನು ಸುಮಾರು 50 ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. " ಸುಮಾರು 50 ಸಾವಿರ ಮಂದಿ RRR ಟ್ರೈಲರ್ ಅನ್ನು ಚಿತ್ರಮಂದಿರದಲ್ಲಿ ನೋಡಿರಬಹುದು. ಮಧ್ಯಾಹ್ನದ ಮೇಲೆ ಟ್ರೈಲರ್ ನೋಡುವವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ." ಅಂತ ವಿತರಕ ಸುಪ್ರಿತ್ ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.

    ಒಂದು ವರ್ಷದ ಮುಂಚೆನೇ RRR ಡೀಲ್ ಆಗಿತ್ತು.

    ಒಂದು ವರ್ಷದ ಮುಂಚೆನೇ RRR ಡೀಲ್ ಆಗಿತ್ತು.

    "ಹೌದು ಈ ಸಿನಿಮಾಗೆ ಬಹಳಷ್ಟು ಮಂದಿ ಕೇಳಿದ್ದರು. ಕೆಲವರಂತೂ ಸಿನಿಮಾ ತಮಗೆ ಸಿಕ್ಕಿದೆ ಅಂತನೂ ಹೇಳಿಕೊಂಡಿದ್ದರು. ಆದರೆ, ಸಿನಿಮಾ ನಮಗೆ ಕೊಟ್ಟು ಒಂದು ವರ್ಷವೇ ಆಗಿತ್ತು. ಆದರೆ, ಎರಡು ತಿಂಗಳ ಹಿಂದಷ್ಟೇ ಈ ಸಿನಿಮಾ ಅಧಿಕೃತವಾಗಿ ನಮ್ಮ ಕೈ ಸೇರಿದೆ. ಅವರು ಬಿಡುತ್ತಿರುವ ಪ್ರತಿಯೊಂದು ಕಂಟೆಂಟ್‌ನಲ್ಲೂ ನಮ್ಮ ಸಂಸ್ಥೆಯ ಲೋಗೊ ಹಾಕುತ್ತಿರುವುದನ್ನು ನೀವು ನೋಡಬಹುದು." ಎನ್ನುತ್ತಾರೆ ಸುಪ್ರಿತ್.

    ದಾಖಲೆ ಥಿಯೇಟರ್‌ಗಳಲ್ಲಿ RRR ರಿಲೀಸ್

    ದಾಖಲೆ ಥಿಯೇಟರ್‌ಗಳಲ್ಲಿ RRR ರಿಲೀಸ್

    "ಒಂದು ಹೇಳುತ್ತೇನೆ. ಈ ಸಿನಿಮಾವನ್ನು ಇದುವರೆಗೂ ಯಾವ ಸಿನಿಮಾನೂ ರಿಲೀಸ್ ಆಗದೆ ಇರುವಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತೆ. ಇದು ಇತಿಹಾಸದಲ್ಲೇ ಅತಿ ಹೆಚ್ಚು ಅಂದುಕೊಳ್ಳಿ. ಕನ್ನಡ ಸೆಂಟರ್ ಎಲ್ಲೆಲ್ಲಿ ಇದೆಯೋ ಅಲ್ಲೆಲ್ಲಾ ಕನ್ನಡನೇ ರಿಲೀಸ್ ಆಗುತ್ತೆ. ಕೆಲವು ಥಿಯೇಟರ್‌ಗಳು ಬೇರೆ ಭಾಷೆಯ ಸಿನಿಮಾ ಮಾಡುತ್ತಾರೆ. ಅಲ್ಲಿ ಮಾತ್ರ ಬೇರೆ ಭಾಷೆಯ ಸಿನಿಮಾ ರಿಲೀಸ್ ಆಗುತ್ತೆ. ಹೇಗಂದ್ರೆ RRR ಕನ್ನಡ ವರ್ಷನ್ ಅನ್ನು ನಾವೇ ನಿರ್ಮಾಣ ಮಾಡಿದಂತೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ." ಅಂತ ವಿತಕರ ಸುಪ್ರಿತ್ ಮಾಹಿತಿ ನೀಡಿದ್ದಾರೆ.

    English summary
    RRR movie kannada trailer playing more than 600 theaters in Karnataka. Producer Supreet will be releasing RRR in huge no of theaters in Karnataka.
    Thursday, December 9, 2021, 18:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X