For Quick Alerts
  ALLOW NOTIFICATIONS  
  For Daily Alerts

  RRR: ರಾಜಮೌಳಿ ಬಳಿ ವಿಶೇಷ ಬೇಡಿಕೆ ಇಟ್ಟ ಶಿವಣ್ಣ: ಜಕ್ಕಣ್ಣ ಹೇಳಿದ್ದೇನು?

  |

  ಇಂದು (ಮಾರ್ಚ್ 19) ಬೆಳಗ್ಗೆಯಿಂದ ಎಲ್ಲಿ ನೋಡಿದರೂ RRR ಜಪ. ಮೂರು ರಾಜ್ಯದ ಗಡಿ ಭಾಗದಲ್ಲಿರುವ ಜನರು ಈ ವಿಶೇಷ ಇವೆಂಟ್ ನೋಡಲು ಆಗಮಿಸಿದ್ದರು. ರಾಜಮೌಳಿ, ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಈ ಮೂವರನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದರು.

  Recommended Video

  RRR ಸಿನಿಮಾ ದೊಡ್ಡ ಮಟ್ಟದಲ್ಲಿ ರಿಲೀಸ್ ಈಗಲೇ ಶುವರುವಾಯ್ತು ಲೆಕ್ಕಾಚಾರ!

  ಇದೇ ಕಾರ್ಯಕ್ರಮಕ್ಕೆ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಹಾಗೂ ಸಿ ಎಂ ಬಸವರಾಜ ಬೊಮ್ಮಾಯಿ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ನಿರ್ದೇಶಿಸಿದ RRR ಕನ್ನಡದಲ್ಲೂ ಬಿಡುಗಡೆಯಾಗುತ್ತಿರುವುದರಿಂದ ಸಿನಿಮಾ ನೀಡುವ ತವಕ ಕನ್ನಡಿಗರಲ್ಲೂ ಹೆಚ್ಚಾಗಿದೆ. ಈ ಕಾರಣಕ್ಕೆ ಚಿಕ್ಕಬಳ್ಳಾಪುರದಲ್ಲಿ RRR ಪ್ರಿ-ರಿಲೀಸ್ ಇವೆಂಟ್‌ನಲ್ಲಿ ಸಿನಿಪ್ರಿಯರು ಕಿಕ್ಕಿರಿದು ಸೇರಿದ್ದರು. ಈ ವೇಳೆ ಶಿವರಾಜ್‌ಕುಮಾರ್ ನಿರ್ದೇಶಕ ರಾಜಮೌಳಿ ಬಳಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

  ರಾಜಮೌಳಿ ಬಳಿ ಶಿವಣ್ಣ ಮನವಿ

  ರಾಜಮೌಳಿ ಬಳಿ ಶಿವಣ್ಣ ಮನವಿ

  ಶಿವರಾಜ್‌ಕುಮಾರ್ RRR ಸಿನಿಮಾಗೆ ವಿಶೇಷ ಅತಿಥಿಯಾಗಿ ಹೋಗಿದ್ದರು. ಚಿತ್ರತಂಡಕ್ಕೆ ವಿಶ್ ಮಾಡುವುದರ ಜೊತೆ ಜೊತೆಗೆ ರಾಜಮೌಳಿ ಬಳಿ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. RRR ಚಿತ್ರವನ್ನು ಮೊದಲ ದಿನವೇ ಮೊದಲ ಶೋನೇ ನೋಡುತ್ತೇನೆ. ಆದರೆ, ಕರ್ನಾಟಕದಲ್ಲಿ ಕನ್ನಡ ಶೋ ಹೆಚ್ಚು ಪ್ರದರ್ಶನ ಮಾಡಿ ಎಂದು ವೇದಿಕೆ ಮೇಲೆನೇ ಶಿವಣ್ಣ ಮನವಿ ಮಾಡಿಕೊಂಡಿದ್ದಾರೆ.

  ಕನ್ನಡದಲ್ಲಿ ಪ್ಯಾನ್ ಇಂಡಿಯಾ ಚಿತ್ರ ರಿಲೀಸ್ ಆಗಲ್ಲ

  ಕನ್ನಡದಲ್ಲಿ ಪ್ಯಾನ್ ಇಂಡಿಯಾ ಚಿತ್ರ ರಿಲೀಸ್ ಆಗಲ್ಲ

  'ಬಾಹುಬಲಿ' ಹಾಗೂ 'ಕೆಜಿಎಫ್' ಸಿನಿಮಾ ಬಳಿಕ ಹೆಚ್ಚು ಪ್ಯಾನ್ ಇಂಡಿಯಾ ಸಿನಿಮಾಗಳು ರಿಲೀಸ್ ಆಗುತ್ತಿವೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ನಿರ್ಮಾಣ ಆಗುತ್ತಿವೆ. ಆದರೆ, ಪ್ರತಿ ಬಾರಿಯೂ ಕನ್ನಡಕ್ಕೆ ಡಬ್ ಆದರೂ, ಕರ್ನಾಟಕದಲ್ಲಿ ಮಾತ್ರ ತೆಲುಗು ಭಾಷೆಯ ಸಿನಿಮಾವೇ ರಿಲೀಸ್ ಆಗುತ್ತೆ. ಅಲ್ಲು ಅರ್ಜುನ್ ಅಭಿನಯದ 'ಪುಷ್ಪ', ಪ್ರಭಾಸ್ ಅಭಿನಯದ 'ರಾಧೆಶ್ಯಾಮ್' ಅಷ್ಟೇ ಯಾಕೆ ಬಾಲಿವುಡ್‌ನ '83' ಸಿನಿಮಾ ಕೂಡ ಪ್ರಮುಖ ಭಾಷೆಯಲ್ಲಿಯೇ ಬಿಡುಗಡೆಯಾಗಿತ್ತು. ಈಗ ಶಿವಣ್ಣ ಮನವಿ ಬಳಿಕ ರಾಜಮೌಳಿ ಕನ್ನಡಕ್ಕೆ ಹೆಚ್ಚಿನ ಅವಕಾಶ ನೀಡುತ್ತಾರಾ? ಅನ್ನುವುದನ್ನು ನೋಡಬೇಕಿದೆ.

  ನಾನು ರಾಜಮೌಳಿ ಫ್ಯಾನ್

  ನಾನು ರಾಜಮೌಳಿ ಫ್ಯಾನ್

  ಶಿವಣ್ಣ ರಾಜ್‌ಕುಮಾರ್ ಇದೇ RRR ಪ್ರಿ ರಿಲೀಸ್ ಇವೆಂಟ್‌ನಲ್ಲಿ ರಾಜಮೌಳಿ ಸಿನಿಮಾ ಬಗ್ಗೆ ಮಾತನಾಡಿದರು. " ನಾನು ರಾಜಮೌಳಿ ಅವರ ದೊಡ್ಡ ಫ್ಯಾನ್. 'ಬಾಹುಬಲಿ' ಸಿನಿಮಾ ನೋಡಿ, ರಾಜಮೌಳಿ ಅವರಿಗೆ ಫೋನ್ ಮಾಡಿ ಅದ್ಭುತ ಸಿನಿಮಾ ಮಾಡಿದ್ದೀರಿ ಎಂದು ಹೇಳಿದ್ದೆ. ನಮ್ಮ ಸಿನಿಮಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಅವರು ಎಲ್ಲೇ ಕರೆದರೂ ಬರುತ್ತೇನೆ." ಎಂದು ಹೇಳಿದರು. ಇದೇ ವೇಳೆ " ಜೂ.ಎನ್‌ಟಿಆರ್ ಎಲ್ಲಾ ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿದ್ದೀನಿ. ರಾಮ್ ಚರಣ್, ಪವನ್ ಕಲ್ಯಾಣ್, ಚಿರಂಜೀವಿ ಅವರ ಸಿನಿಮಾಗಳನ್ನು ಥಿಯೇಟರ್‌ನಲ್ಲಿಯೇ ನೋಡುತ್ತೇನೆ." ಎಂದು ಹೇಳಿದ್ದಾರೆ.

  ಅಪ್ಪು ನೆನೆದು ಶಿವಣ್ಣ ಕಣ್ಣೀರು

  ಅಪ್ಪು ನೆನೆದು ಶಿವಣ್ಣ ಕಣ್ಣೀರು

  ಮೊನ್ನೆ ತಾನೇ ಅಪ್ಪು ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಬಿಡುಗಡೆಯಾಗಿದೆ. ಈ ವೇಳೆ ಥಿಯೇಟರ್‌ನಲ್ಲಿ ಸಿನಿಮಾ ನೋಡಿದ ಬಳಿಕ ಶಿವಣ್ಣ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇಂದು (ಮಾರ್ಚ್ 19) ಕೂಡ RRR ಪ್ರಿ-ರಿಲೀಸ್ ಇವೆಂಟ್‌ನಲ್ಲೂ ಅಪ್ಪು ಬಗ್ಗೆ ಮಾತನಾಡಿದರು. ಅಪ್ಪುಗೆ ಹೀಗೆ ವಾಯ್ಸ್ ಕೊಡುತ್ತೇನೆ ಎಂದುಕೊಂಡಿರಲಿಲ್ಲ. ಜೂ.ಎನ್‌ಟಿಆರ್, ರಾಮ್ ಚರಣ್ ಎಲ್ಲರೂ ನಾವು ನಿಮ್ಮ ತಮ್ಮ ಎಂದು ಸಮಾಧಾನ ಆಯ್ತು ಎಂದು ಶಿವಣ್ಣ ಹೇಳಿದ್ದಾರೆ.

  English summary
  RRR pre release event Shivarajkumar requested SS Rajamouli to show more Kannada versions in Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X