KGF 2: ಕರ್ನಾಟಕದಲ್ಲಿ 'RRR' ಬ್ಯಾನ್ ಆದ್ರೆ, ನಾವು 'ಕೆಜಿಎಫ್ 2' ಬ್ಯಾನ್ ಮಾಡ್ತೀವಿ. ಇದೇನಿದು ಹೊಸ ತಲೆನೋವು?

ಬಹುನಿರೀಕ್ಷಿತ ಸಿನಿಮಾ 'ಆರ್‌ಆರ್‌ಆರ್' ಚಿತ್ರ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಇನ್ನೊಂದು ದಿನ ಕಳೆದರೆ 'ಆರ್‌ಆರ್‌ಆರ್' ಚಿತ್ರ ತೆರೆಗೆ ಅಪ್ಪಳಿಸಲಿದೆ. ಮಾರ್ಚ್ 25ಕ್ಕೆ "ಆರ್‌ಆರ್‌ಆರ್' ಚಿತ್ರ ರಿಲೀಸ್ ಆಗುತ್ತಿದ್ದು, ಈಗ ತಾನೇ ಒಂದು ವಿವಾದ ತಣ್ಣಗಾಗಿದೆ.

ಕನ್ನಡ ಶೋಗಳಿಗೆ ಕರ್ನಾಟಕದಲ್ಲಿ ಆದ್ಯತೆ ನೀಡಿಲ್ಲ ಎನ್ನುವ ಕಾರಣಕ್ಕೆ ಕನ್ನಡಿಗರು 'ಆರ್‌ಆರ್‌ಆರ್' ಚಿತ್ರದ ವಿರುದ್ಧ ತಿರುಗಿ ಬಿದಿದ್ದಾರೆ. ಪ್ಯಾನ್ ಇಂಡಿಯಾ ಹೆಸರಲ್ಲಿ, ಸಿನಿಮಾ ತಂಡ ಕನ್ನಡಿಗರಿಗೆ ಮೋಸ ಮಾಡುತ್ತಿದೆ ಎಂದು ಕಿಡಿ ಕಾರುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರು ಕರ್ನಾಟಕದಲ್ಲಿ ಬಾಯ್‌ಕಾಟ್ 'ಆರ್‌ಆರ್‌ಆರ್' ಎಂಬ ಅಭಿಯಾನ ಶುರು ಮಾಡಿದ್ದಾರೆ. ಕರ್ನಾಟಕದಲ್ಲಿ 'ಆರ್‌ಆರ್‌ಆರ್' ಚಿತ್ರ ರಿಲೀಸ್ ಆಗುವುದು ಬೇಡ ಎಂದು ಹೋರಾಟಕ್ಕೆ ಇಳಿಯುತ್ತಿದ್ದಾರೆ. ಜೊತೆಗೆ ಕೆಲವು ಸಂಘಟನೆಗಳು ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿವೆ. ಕನ್ನಡಿಗರ ಈ ಆಕ್ರೋಶ ಈಗ 'ಕೆಜಿಎಫ್ 2' ಮೇಲೆ ಪರಿಣಾಮ ಬೀರುತ್ತಿದೆ.

Recommended Video

ಮಾಡದ ತಪ್ಪಿಗೆ KGF 2 ಗೇಕೆ ಇಂತಹ ಶಿಕ್ಷೆ

ಕರ್ನಾಟಕದಲ್ಲಿ 'RRR' ಬ್ಯಾನ್ ಮಾಡಿದ್ರೆ ಹುಷಾರ್!

'RRR' ಸಿನಿಮಾ ರಿಲೀಸ್‌ಗೆ ಇನ್ನೇನು ಒಂದೇ ದಿನ ಬಾಕಿ ಇದೆ. ಮೊದಲಿನಿಂದಲೂ ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಕನ್ನಡ ಅಭಿಮಾನಿಗಳು ಕೂಡ ಈ ಚಿತ್ರವನ್ನು ಕನ್ನಡದಲ್ಲಿ ನೋಡಿ ಸವಿಯಬಹುದು ಎಂದು ಅಂದುಕೊಂಡಿದ್ದಾರೆ. ಆದರೆ ಕರ್ನಾಟಕದಲ್ಲಿ 'ಆರ್‌ಆರ್‌ಆರ್' ಸಿನಿಮಾದ ಕನ್ನಡ ಶೋಗಳೇ ಇಲ್ಲಾ ಅನ್ನೋದು ಕನ್ನಡಿಗರನ್ನು ಕೆರಳಿಸಿದೆ. ಹೀಗಾಗಿ ಬಾಯ್‌ಕಾಟ್ 'ಆರ್‌ಆರ್‌ಆರ್' ಅನ್ನುವ ಪೋಸ್ಟ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಕನ್ನಡಿಗರು ಹಂಚಿಕೊಳ್ಳುತ್ತಿದ್ದಾರೆ. 'ಆರ್‌ಆರ್‌ಆರ್' ಸಿನಿಮಾ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಮಾಡಿದೆ. 'RRR' ಕನ್ನಡದಲ್ಲಿ ರಿಲೀಸ್ ಮಾಡಲ್ಲ ಅಂತಾದ್ರೆ, ಕನ್ನಡದಲ್ಲಿ ಚಿತ್ರವನ್ನು ರಿಲೀಸ್ ಮಾಡ್ತೀವಿ ಎಂದು ಯಾಕೆ ಹೇಳಿದ್ದು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಹೀಗೆ ಕರ್ನಾಟಕದಲ್ಲಿ 'RRR' ಕಾವು ಜೋರಾಗುತ್ತಿದ್ದಂತೆ ಅತ್ತ ತೆಲುಗು ಜನತೆ 'ಆರ್‌ಆರ್‌ಆರ್' ಸಿನಿಮಾವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಿದ್ರೆ 'ಕೆಜಿಎಫ್ 2' ಪರಿಸ್ಥಿತಿ ಏನಾಗುತ್ತೆ ನೋಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸಮಸ್ಯೆ ಯಾಕೆ ಆಗುತ್ತಿರೋದು ಯಾಕೆ?

'RRR' ಫ್ಯಾನ್ಸ್‌ಗೆ ಈ ವಿಚಾರ ತಿಳಿದು ಭುಗಿಲೆದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದಾರೆ. ಒಂದು ವೇಳೆ 'ಆರ್‌ಆರ್‌ಆರ್' ಸಿನಿಮಾವನ್ನು ನೀವು ಬ್ಯಾನ್ ಮಾಡಿದ್ದೇ ಆದಲ್ಲಿ, 'ಕೆಜಿಎಫ್ 2' ರಿಲೀಸ್ ಹತ್ತಿರದಲ್ಲೇ ಇದೆ ಮರೆಯಬೇಡಿ ಎಂದು ಎಚ್ಚರಿಸಿದ್ದಾರೆ. ಅಲ್ಲದೇ 'ಆರ್‌ಆರ್‌ಆರ್' ಕನ್ನಡ ವರ್ಷನ್‌ನಲ್ಲಿ ರಿಲೀಸ್ ಆಗುತ್ತಿಲ್ಲ ಅನ್ನೋದು ಚಿತ್ರತಂಡದ ಸಮಸ್ಯೆ ಅಲ್ಲ. ನೀವು ಈ ಸಮಸ್ಯೆಯನ್ನು ಚಿತ್ರತಂಡಕ್ಕೆ ಪ್ರಶ್ನೆ ಮಾಡುವುದು ಸರಿಯಲ್ಲ. ನಿಮ್ಮ ರಾಜ್ಯದ ಡಿಸ್ಟ್ರಿಬ್ಯೂಟರ್‌ ಜೊತೆ ಮಾತನಾಡಿ ಈ ಸಮಸ್ಯೆ ಬಗ್ಗೆ ಬಗೆಹರಿಸಿಕೊಳ್ಳಿ. ಅದು ಬಿಟ್ಟು 'ಆರ್‌ಆರ್‌ಆರ್' ಸಿನಿಮಾಗೆ ತೊಂದರೆ ಮಾಡಬೇಡಿ. ಹಾಗೇನಾದರೂ ಆದರೆ, 'ಕೆಜಿಎಫ್ 2' ಸಿನಿಮಾಗೆ ನೀವು ಮಾಡಿದ ದುಪ್ಪಟ್ಟು ಡ್ಯಾಮೇಜ್ ಅನ್ನು ನಾವು 'ಕೆಜಿಎಫ್‌ 2'ಗೆ ಮಾಡುತ್ತೇವೆ ಎಂದಿದ್ದಾರೆ.

ಸಮಸ್ಯೆ ತಣ್ಣಗಾಗಲು ಇದೆಯಾ ಉಪಾಯ?

ಒಂದು ಕಡೆ ರಾಜ್ಯದಲ್ಲಿ 'ಜೇಮ್ಸ್' ಸಿನಿಮಾ ಎತ್ತಂಗಡಿ ಬಗ್ಗೆ ಪ್ರತಿಭಟನೆಗಳು ನಡೆಯುತ್ತಿವೆ. ಮತ್ತೊಂದು ಕಡೆ 'ಆರ್‌ಆರ್‌ಆರ್' ಬಾಯ್‌ಕಾಟ್ ಅನ್ನುವ ಹೋರಾಟ ನಡೆಯುತ್ತಿದೆ. ಇದೀಗ ಈ ದ್ವೇಷದ ಕಿಡಿ 'ಕೆಜಿಎಫ್ 2' ಸಿನಿಮಾ ಮೇಲೂ ಪರಿಣಾಮ ಬೀಳುವ ಎಲ್ಲಾ ಸಾಧ್ಯತೆಗಳು ಇವೆ. ಇತ್ತ 'ಆರ್‌ಆರ್‌ಆರ್' ಸಿನಿಮಾವನ್ನು ರಾಜ್ಯದಲ್ಲಿ ಡಿಸ್ಟ್ರಿಬ್ಯೂಷನ್ ಮಾಡುತ್ತಿರುವ ಕೆವಿಎನ್ ಪ್ರೋಡಕ್ಷನ್ ಮಾತ್ರ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿ ಸುಮ್ಮನಾಗಿ ಬಿಟ್ಟಿದೆ. ಈ ವಿವಾದಕ್ಕೆ ಕೆವಿಎನ್ ಪ್ರೋಡಕ್ಷನ್ ಮುಂದೆ ಬಂದು ಎದ್ದಿರುವ ಗೊಂದಲಕ್ಕೆ ಉತ್ತರ ನೀಡಬೇಕಿದೆ.

ಇದೇ ನಿಜವಾದ ಕಾರಣ ಎನ್ನುತ್ತಿರುವ ಕೆವಿಎನ್ ಪ್ರೋಡಕ್ಷನ್ !

ಇದೇ ನಿಜವಾದ ಕಾರಣ ಎನ್ನುತ್ತಿರುವ ಕೆವಿಎನ್ ಪ್ರೋಡಕ್ಷನ್ !

ಕೆವಿನ್ ಪ್ರೊಡಕ್ಷನ್ಸ್ ಮಾಡಿದ ಪೋಸ್ಟ್‌ನಲ್ಲಿ ಪ್ರದರ್ಶಕರು 'RRR' ಕನ್ನಡ ಅವತರಣಿಕೆ ಬೇಡ ಎನ್ನುತ್ತಿದ್ದಾರಂತೆ. "ಆರ್‌ಆರ್‌ಆರ್ ಚಿತ್ರದ ಕನ್ನಡ ಅವತರಣಿಕೆಯನ್ನು ಪ್ರದರ್ಶಿಸಲು ಹಿಂದೇಟು ಹಾಕುತ್ತಿರುವ ಥಿಯೇಟರ್ ಮಾಲೀಕರು ಮನವೊಲಿಸುವ ಕಾರ್ಯ ನಡೆಯುತ್ತಿದೆ. ಕನ್ನಡ ಅವತರಣಿಕೆಯನ್ನು ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಮಾಡಲು ನಾವು ಎಲ್ಲಾ ಪ್ರಯತ್ನಗಳನ್ನು ಸತತವಾಗಿ ಮಾಡುತ್ತಿದ್ದೇವೆ.'' ಎನ್ನುವುದನ್ನು ಪೋಸ್ಟ್‌ನಲ್ಲಿ ಹೇಳಲಾಗಿದೆ. ಹೀಗೆ ಈ ವಿವಾದ ಮುಂದುವರೆದರೆ, ನಮ್ಮ ಸಿನಿಮಾಗೆ ತೊಂದರೇ ಆಗಬಹುದು ಎಂಬ ಚಿಂತೆಯಲ್ಲಿದೆ 'ಕೆಜಿಎಫ್ 2' ಸಿನಿಮಾ ತಂಡ.

More from Filmibeat

English summary
'RRR’s fans telling to Kannada fans. “Stop blaming RRR unit for what is happening. Blame your distributor.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X