ನಟ ಉಪೇಂದ್ರ ಸಿಂಗಲ್ ಶಾಟ್ ಗೆ ರು.1 ಕೋಟಿ
ಕನ್ನಡ ಚಿತ್ರರಂಗದಲ್ಲಿ ಕೋಟಿ ಕೋಟಿ ಚೆಲ್ಲುವ ನಿರ್ಮಾಪಕ ಎಂದರೆ ರಾಮು ಮಾತ್ರ. ಈಗ ಅವರ ಜೊತೆ ಸರಿಸಮನಾಗಿ ನಿಲ್ಲುವ ಮತ್ತೊಬ್ಬ ನಿರ್ಮಾಪಕರು ಕನ್ನಡಕ್ಕೆ ಸಿಕ್ಕಿದ್ದಾರೆ. 'ಬ್ರಹ್ಮ' ಚಿತ್ರದ ನಿರ್ಮಾಪಕರಾದ ಮಂಜುನಾಥ ಬಾಬು (ಅಮೃತಹಳ್ಳಿ) ಅವರೇ ಈ ಧೀರ ನಿರ್ಮಾಪಕ.
ಇತ್ತೀಚೆಗೆ ಬ್ರಹ್ಮ ಚಿತ್ರದ ಸಾಹಸ ಸನ್ನಿವೇಶವನ್ನು ರಾಜಸ್ತಾನದಲ್ಲಿ ಚಿತ್ರೀಕರಿಸಲಾಯಿತು. ಅಲ್ಲಿ ಹಾಕಿರುವ ಭರ್ಜರಿ ಸೆಟ್ ಗಾಗಿ ಒಂದು ಕೋಟಿ ರುಪಾಯಿ ಖರ್ಚು ಮಾಡಿದ್ದಾರೆ. ಒಂದೇ ಶಾಟ್ ನಲ್ಲಿ ಅದನ್ನು ಚಿತ್ರೀಕರಿಸಿಕೊಂಡಿರುವುದು ಚಿತ್ರದ ವಿಶೇಷಗಳಲ್ಲಿ ಒಂದು.
ಥ್ರಿಲ್ಲರ್ ಮಂಜು ಹಾಗೂ ವಿಜಯ್ ಅವರ ಸಾಹಸ ನಿರ್ದೇಶನದಲ್ಲಿ ಈ ರಾಜಸ್ತಾನದ ಆಕ್ಷನ್ ಸೀನನ್ನು ಶೇಖರ್ ಚಂದ್ರ ಅವರ ಛಾಯಾಗ್ರಹಣದಲ್ಲಿ ಸೆರೆಹಿಡಿಯಲಾಗಿದೆ. ಆರ್.ಚಂದ್ರು ಅವರು ನಿರ್ದೇಶಿಸುತ್ತಿರುವ ಮಹತ್ವಾಕಾಂಕ್ಷಿ ಚಿತ್ರ ಕನ್ನಡ, ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದೆ.ರಿಯಲ್ ಸ್ಟಾರ್ ಉಪೇಂದ್ರ, ಪ್ರಣೀತಾ ಮುಖಭೂಮಿಕೆಯಲ್ಲಿರುವ ಈ ಚಿತ್ರದ ಟಾಕಿ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಪಾತ್ರವರ್ಗದಲ್ಲಿ ರಂಗಾಯಣರಘು, ಸಾಧುಕೋಕಿಲ, ಶಯ್ಯಾಜಿ ಶಿಂಧೆ, ನಾಜರ್, ರಾಹುಲ್ ದೇವ್, ಸೋನು ಸೂಧ್, ಸುಭಾಷ್ ಶೆಟ್ಟಿ, ಗಿರೀಶ್ ಕಾರ್ನಾಡ್, ಕಾಟ್ ರಾಜು, ಬುಲೆಟ್ ಪ್ರಕಾಶ್, ಜಾನ್ ಕೊಕೇನ್, ಮಂಗಳೂರು ಸುರೇಶ್, ಲಕ್ಷ್ಮಣ್,ಶರಣ್, ಪದ್ಮಜಾರಾವ್, ಸುಚೇಂದ್ರಪ್ರಸಾದ್ ಮುಂತಾದವರಿದ್ದಾರೆ.
ಮೈಲಾರಿ ಎಂಟರ್ ಪ್ರೈಸಸ್ ಲಾಂಛನದಲ್ಲಿ ಮಂಜುನಾಥ ಬಾಬು ನಿರ್ಮಿಸುತ್ತಿರುವ ಚಿತ್ರಕ್ಕೆ ಆರ್.ಚಂದ್ರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ.
ಕೆ.ಎಂ.ಪ್ರಕಾಶ್ ಸಂಕಲನ, ಶಿವಕುಮಾರ್, ಇಸ್ಮಾಯಿಲ್ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು, ವಿಜಯ್ ಸಾಹಸ ನಿರ್ದೇಶನ ಹಾಗೂ ಪ್ರದೀಪ್ ಆಂಟೋನಿ ಅವರ ನೃತ್ಯ ನಿರ್ದೇಶನ 'ಬ್ರಹ್ಮ' ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












