ಉಮಾಪತಿ ನನ್ನನ್ನು ಉಪಯೋಗಿಸಿಕೊಂಡಿದ್ದು ತಪ್ಪು, ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ; ಅರುಣಾ ಕುಮಾರಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ಹೆಸರಿನಲ್ಲಿ 25 ಕೋಟಿ ವಂಚನೆ ಯತ್ನ ಪ್ರಕರಣ ಕ್ಷಣಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಹರ್ಷ ಮಿಲಾಂಟ, ಉಮಾಪತಿ ಮತ್ತು ಆರೋಪಿ ಅರುಣಾ ಕುಮಾರಿ ಹೇಳಿಕೆಗಳು ಈಗ ಗೊಂದಲ ಸೃಷ್ಟಿ ಮಾಡುತ್ತಿವೆ.

Recommended Video

ಮುಂದಿನ ಜೀವನ ನೆನೆಸಿಕೊಂಡ್ರೆ ಭಯ ಆಗ್ತಿದೆ! | Darshan | Aruna Kumari | Umapathy | Filmibeat Kannada

ದರ್ಶನ್, ಉಮಾಪತಿ ಪ್ರೆಸ್ ಮೀಟ್ ಬಳಿಕ ಇದೀಗ ಮೊದಲ ಬಾರಿಗೆ ಅರುಣಾ ಕುಮಾರಿ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಅರುಣಾ ಕುಮಾರಿ, ಉಮಾಪತಿ ವಿರುದ್ಧ ಕಿಡಿ ಕಾರಿದ್ದಾರೆ. "ಉಮಾಪತಿ ನನ್ನನ್ನು ಬಳಸಿಕೊಂಡಿದ್ದು ತಪ್ಪು, ಅವರೆಲ್ಲ ದೊಡ್ಡವರು ಕುಳಿತು ಬಗೆಹರಿಸಿಕೊಳ್ಳಬೇಕಿತ್ತು. ಈಗ ನನ್ನ ಸಂಪೂರ್ಣ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವಂತೆ ಆಗಿದೆ" ಎಂದು ಕಿಡಿ ಕಾರಿದರು.

"ನನ್ನನ್ನು ಯಾಕೆ ತೇಜೋವಧೆ ಮಾಡುತ್ತಿದ್ದೀರಿ? ಚಾಲಕಿ ಅಂತ ಕರೆಯುತ್ತಿದ್ದೀರಿ. ಹಾರ್ಟ್ ಇಮೋಜಿ ಯಾರು ಕಳುಹಿಸುವುದೇ ಇಲ್ವ. ಅಣ್ಣತಂಗಿಗೂ ಕಳುಹಿಸುತ್ತಾರೆ. ದರ್ಶನ್ ಮನೆಗೆ 2 ಸರಿ ಹೋಗಿದ್ದೀನಿ, ನಾನೇನು ಕಳ್ಳತನ ಮಾಡಿದ್ದೀನಾ, ದುಡ್ಡು ಕಿತ್ತಿದ್ದೀನಾ?" ಗುಡುಗಿದ್ದಾರೆ.

Rs 25 cr Fraud Case: Umapathy Srinivasa Gowda used me in this case says Aruna Kumari

"ಇಲ್ಲಿ ಲೋನ್‌ಗೆ ಅಪ್ರೋಚ್ ಮಾಡಿದ್ದು ಅಷ್ಟೆ. ಲೋನ್ ಅಪ್ಲೈ ಮಾಡಿದಲ್ಲ" ಎಂದು ಅರುಣಾ ಕುಮಾರಿ ಸ್ಪಷ್ಟಪಡಿಸಿದ್ದಾರೆ.

"ನನ್ನ ಸಂಪೂರ್ಣ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವಂತೆ ಆಗಿದೆ. ದೊಡ್ಡ ದೊಡ್ಡವರು ಏನೆನ್ ಮಾಡ್ತಾರೋ ಗೊತ್ತಿಲ್ಲ. ನನ್ನ ಹತ್ರ ಸಾಕ್ಷಿ ಇದೆ ಇಟ್ಟಿದ್ದೀನಿ. ನನಗೆ ಆಗ್ತಿಲ್ಲ ಸರ್. ಫುಲ್ ಖಿನ್ನತೆಗೆ ಹೋಗಿದ್ದೀನಿ. ನಾಳೆ ನನ್ನ ಜೀವನ ಹೇಗೆ ಎನ್ನುವುದು ಗೊತ್ತಾಗುತ್ತಿಲ್ಲ" ಎಂದು ಅಳಲು ತೋಡಿಕೊಂಡಿದ್ದಾರೆ.

"ಉಮಾಪತಿ ಮಾಡಿರುವುದು ತಪ್ಪು. ಇಬ್ಬರು ದೊಡ್ಡವರು, ಅವರೇ ಕೂತು ಮಾತನಾಡಬಹುದಿತ್ತು. ನನ್ನನ್ನು ಯಾಕೆ ಉಪಯೋಗಿಸಿಕೊಳ್ಳುತ್ತಿದ್ದೀರಿ" ಎಂದು ಅರುಣಾ ಕುಮಾರಿ ಕಿಡಿ ಕಿಡಿಕಾರಿದ್ದಾರೆ.

"ಸೀಲ್ ಹಾಕಿ 2 ಲಕ್ಷ ತೆಗೆದುಕೊಂಡ್ರು ಅಂತ ದರ್ಶನ್ ಹೇಳಿದ್ರು. ಅದು ನನ್ನ ಲೈಫ್, ನನಗೆ ಬಿಟ್ಟಿದ್ದು, ನನ್ನ ಜೀವನ ಹಾಳಾದ್ರೆ ಯಾರು ಬರಲ್ಲ, ನನ್ನನ್ನು ಬದುಕಲು ಬಿಡಿ. ಆದರೆ ಕೊನೆಯದಾಗಿ ಹೇಳುತ್ತೇನೆ. ಉಮಾಪತಿ ಮಾಡಿದ್ದು ತಪ್ಪು. ನನ್ನನ್ನು ಉಪಯೋಗಿಸಿಕೊಂಡಿದ್ದು ತಪ್ಪು" ಎಂದು ಉಮಾಪತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪಿ ಅರುಣಾ ಕುಮಾರಿ, ಉಮಾಪತಿ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ರೆ, ಉಮಾಪತಿ, ದರ್ಶನ್ ಸ್ನೇಹಿತರ ವಿರುದ್ಧ ನೇರ ಆರೋಪ ಮಾಡುತ್ತಿದ್ದಾರೆ. ದರ್ಶನ್ ಮತ್ತು ಸ್ನೇಹಿತರು ಪ್ರೆಸ್ ಮೀಟ್ ನಲ್ಲಿ ಉಮಾಪತಿ ಉತ್ತರ ನೀಡಬೇಕು ಎಂದಿದ್ದರು. ಒಟ್ನಲ್ಲಿ 25 ಕೋಟಿ ವಂಚನೆ ಪ್ರಕರಣ ಈಗ ಮತ್ತಷ್ಟು ರೋಚಕ ತಿರುವು ಪಡೆದುಕೊಳ್ಳುತ್ತಿದೆ.

More from Filmibeat

English summary
Rs 25 cr Fraud Case: Umapathy Srinivasa Gowda used me in this case says Aruna Kumari.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X