For Quick Alerts
  ALLOW NOTIFICATIONS  
  For Daily Alerts

  'ದಾಸ' ದರ್ಶನ್ ಸೆರೆ ಹಿಡಿದ ಫೋಟೋಗಳಿಂದ ಬಂತು 3.75 ಲಕ್ಷ ಹಣ.!

  By ಯಶಸ್ವಿನಿ.ಎಂ.ಕೆ.
  |
  Yajamana Movie: ದಾಸ' ದರ್ಶನ್ ಸೆರೆ ಹಿಡಿದ ಫೋಟೋಗಳಿಂದ ಬಂತು ಲಕ್ಷ ಹಣ.! | FILMIBEAT KANNADA

  ಮೈಸೂರು, ಮಾರ್ಚ್ 4 : ಕಳೆದ 2 ದಿನಗಳಿಂದ ಮೈಸೂರಿನಲ್ಲಿ ನಡೆದಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆರೆಹಿಡಿದಿದ್ದ ಫೋಟೋ ಎಕ್ಸಿಬಿಷನ್ ಗೆ ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

  ದರ್ಶನ್ ಕ್ಲಿಕ್ಕಿಸಿದ್ದ 75 ಅರಣ್ಯ ಸಂಪತ್ತು ಹಾಗೂ ಪ್ರಾಣಿಗಳ ಫೋಟೋಗಳು ಅಂದುಕೊಂಡದ್ದಿಕ್ಕಿಂತ ಹೆಚ್ಚು ಮಾರಾಟವಾಗಿದೆ. ಮೂರು ದಿನಗಳಲ್ಲಿ 3,75,000 ರೂಪಾಯಿ ಹಣ ಸಂಗ್ರಹವಾಗಿದೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆರೆ ಹಿಡಿದ ಫೋಟೋಗಳ ಪ್ರದರ್ಶನ ಹಾಗೂ ಮಾರಾಟಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆರೆ ಹಿಡಿದ ಫೋಟೋಗಳ ಪ್ರದರ್ಶನ ಹಾಗೂ ಮಾರಾಟ

  ಅರಣ್ಯ ಸಂರಕ್ಷಣಾ ನಿಧಿಗಾಗಿ ದರ್ಶನ್ ತಮ್ಮ ಫೋಟೋಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್ ನಲ್ಲಿ ಮೂರು ದಿನಗಳ ಕಾಲ ದರ್ಶನ್ ಫೋಟೋಗಳ ಎಕ್ಸಿಬಿಷನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.

  ವಿಶ್ವ ವನ್ಯಜೀವಿ ದಿನದ ಅಂಗವಾಗಿ ಎಕ್ಸಿಬಿಷನ್ ಆಯೋಜಿಸಲಾಗಿತ್ತು.

  'ಲೈಫ್ ಆನ್ ದಿ ವೈಲ್ಡ್ ಸೈಡ್' ಹೆಸರಿನಲ್ಲಿ ನಟ ದರ್ಶನ್ ಅರಣ್ಯದಲ್ಲಿ ಸೆರೆ ಹಿಡಿದಿರುವ ಛಾಯಾಚಿತ್ರಗಳ ಪ್ರದರ್ಶನ ಆಯೋಜನೆಗೊಂಡಿತ್ತು. ದರ್ಶನ್ ಕಾಡಿನಲ್ಲಿ ಸೆರೆ ಹಿಡಿದಿದ್ದ 75 ಛಾಯಾಚಿತ್ರಗಳ ಪ್ರದರ್ಶನ ಎಕ್ಸಿಬಿಷನ್ ನಲ್ಲಿ ಮಾರಾಟ ನಡೆದಿತ್ತು.

  ದರ್ಶನ್ ಸೆರೆಹಿಡಿದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆದರ್ಶನ್ ಸೆರೆಹಿಡಿದ ವನ್ಯಜೀವಿ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ

  ಖುದ್ದು ನಟ ದರ್ಶನ್ ಪ್ರದರ್ಶನದ ಬಳಿಕ ಉಳಿದುಕೊಂಡು ಅಲ್ಲಿ ಬರುವ ಅಭಿಮಾನಿಗಳಿಗೆ ತಮ್ಮ ಫೋಟೋಗಳಿಗೆ ಆಟೋಗ್ರಾಫ್ ನೀಡುತ್ತಿದ್ದದ್ದು ವಿಶೇಷವಾಗಿತ್ತು. ಛಾಯಚಿತ್ರಗಳ ಮಾರಾಟದಿಂದ ಬಂದ ಹಣ ವನ್ಯಜೀವಿ ಸಂರಕ್ಷಣಾ ನಿಧಿಗೆ ಬಳಕೆಯಾಗಲಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜನೆಗೊಂಡಿತ್ತು.

  English summary
  Rs 3.75 lakh collected in Kannada Actor Darshan wildlife photography exhibition which happened in Mysuru from March 1st to March 3rd at Sandesh The Prince Hotel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X