50 ಲಕ್ಷ ಗೆಲ್ಲುವ ಮುನ್ನ ಡ್ರೋನ್ ಪ್ರತಾಪ್ ಮೇಲೆ 35 ಲಕ್ಷ ಮೋಸದ ಆರೋಪ

ಡ್ರೋನ್ ಪ್ರತಾಪ್ ಎಲ್ಲೇ ಇದ್ದರೂ ಸುದ್ದಿ ಆಗುತ್ತಿರುತ್ತಾರೆ. ಸದ್ಯ ಬಿಗ್‌ಬಾಸ್ ಮನೆಯೊಳಗೆ ಫಿನಾಲೆ ತಲುಪಿ ಗಮನ ಸೆಳೆದಿದ್ದಾರೆ. ಮತ್ತೊಂದು ಕಡೆ ಹೊರಗಡೆ ಪ್ರತಾಪ್ ಮೇಲೆ ಆರೋಪಗಳ ಸುರಿಮಳೆ ಆಗುತ್ತಿದೆ. ಸದ್ಯ ಪ್ರತಾಪ್ ವಿರುದ್ಧ ಡಾ. ಪ್ರಯಾಗ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ.

ನಾನು ಯುವ ವಿಜ್ಞಾನಿ, ಡ್ರೋನ್ ತಯಾರಿಕೆಯಲ್ಲಿ ಅಪಾರವಾದ ಜ್ಞಾನ ಇದೆ ಎಂದು ಹೇಳಿಕೊಂಡು ಪ್ರತಾಪ್ ಬಹಳ ಸುದ್ದಿಯಾಗಿದ್ದರು. ಹೋದಲ್ಲಿ ಬಂದಲ್ಲಿ ವೇದಿಕೆ ಏರಿ ತಮ್ಮ ಡ್ರೋನ್‌ಗಳ ಬಗ್ಗೆ ತಮ್ಮ ನೈಪುಣ್ಯತೆಯನ್ನು ಸಾರಿ ಸಾರಿ ಹೇಳಿದ್ದರು. ಸಾಕಷ್ಟು ಜನ ಇದನ್ನು ನಿಜ ಎಂದು ನಂಬಿದ್ದರು. ಕೆಲವರು ನಂಬಿ ಮೋಸ ಹೋಗಿದ್ದರು. ಬಳಿಕ ಆತ ಹೇಳಿದ್ದೆಲ್ಲಾ ಸುಳ್ಳು ಎನ್ನುವುದು ಗೊತ್ತಾಗಿತ್ತು. ಆದರೂ ಸಹ ಪ್ರತಾಪ್ ತಾನು ಡ್ರೋನ್ ಪರಿಣತ ಅಂತಲೇ ಬಿಂಬಿಸಿಕೊಳ್ಳುತ್ತಿದ್ದಾರೆ.

 Rs 35 lakhs cheating allegations on bigg boss Drone Prathap

ಡ್ರೋನ್‌ಗಳ ವಿಚಾರದಿಂದ ಹೀಗೆ ಜನಪ್ರಿಯತೆ ಗಳಿಸಿದ ಪ್ರತಾಪ್ ಬಳಿಕ ಬಿಗ್‌ಬಾಸ್‌ ಶೋಗೆ ಹೋಗುವ ಅವಕಾಶ ಪಡೆದಿದ್ದರು. ಒಂದೆರಡು ವಾರ ಮನೆಯಲ್ಲಿ ಇರುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಖುದ್ದು ಪ್ರಾತಪ್ ಇದೇ ಲೆಕ್ಕಾಚಾರದಲ್ಲಿದ್ದರು. ಅಚ್ಚರಿ ಎನ್ನುವಂತೆ ಆಡಿ ಪ್ರತಾಪ್ ಈಗ ಫಿನಾಲೆ ತಲುಪಿದ್ದಾರೆ. ಪ್ರತಾಪ್ ಜೊತೆಗೆ ಸಂಗೀತಾ, ವಿಜಯ್, ಕಾರ್ತಿಕ್, ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತು ಫೈನಲ್ ಹಂತಕ್ಕೆ ತಲುಪಿದ್ದಾರೆ.

ಭಾನುವಾರವೇ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಪ್ರತಾಪ್ ಟ್ರೋಫಿ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಂಡಿದ್ದಾರೆ ಎನ್ನುವ ಚರ್ಚೆ ನಡೀತಿದೆ. ಕೆಲವರು ಪ್ರತಾಪ್ ಗೆಲ್ಲುವುದು ಪಕ್ಕಾ ಎನ್ನುತ್ತಿದ್ದಾರೆ. ಇದರ ಬೆನ್ನಲ್ಲೇ ಪ್ರತಾಪ್ ಮೇಲೆ 35 ಲಕ್ಷ ರೂ. ಮೋಸದ ಆರೋಪ ಕೇಳಿಬಂದಿದೆ. ಪುಣೆಯ ಕ್ಯಾಸ್ಪರ್ ಡ್ರೊನೊಟಿಕ್ಸ್ ಸಂಸ್ಥೆಯ ಸಿಇಓ ಸಾರಂಗ್ ಮಾನೆ ಇದೀಗ ಡ್ರೋನ್ ಪ್ರತಾಪ್ ಮೇಲೆ ಆರೋಪ ಮಾಡಿದ್ದಾರೆ.

8 ತಿಂಗಳ ಹಿಂದೆ ಪ್ರತಾಪ್‌ಗೆ ಸಾರಂಗ್ 35 ಲಕ್ಷದ 75 ಸಾವಿರ ರೂ. ಹಣ ನೀಡಿ 9 ಡ್ರೋನ್ ನೀಡಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ತಡವಾಗಿ ಡ್ರೋನ್‌ಗಳನ್ನು ಪ್ರತಾಪ್ ತಲುಪಿಸಿದ್ದಾರೆ. 9 ಡ್ರೋನ್‌ ನೀಡುವಂತೆ ಒಪ್ಪಂದ ಆಗಿದ್ದರು ಮೊದಲು 2 ಬಳಿಕ ಮತ್ತಷ್ಟು ತಡಮಾಡಿ ಮತ್ತೆರಡು ಡ್ರೋನ್‌ಗಳನ್ನು ವಿತರಿಸಿದ್ದರು.

 Rs 35 lakhs cheating allegations on bigg boss Drone Prathap

ಸದ್ಯ ಪ್ರತಾಪ್ ಕಳುಹಿಸಿದ್ದ 4 ಡ್ರೋನ್‌ಗಳು ಕೆಲಸ ಮಾಡುತ್ತಿಲ್ಲ. ಅವುಗಳ ಕ್ಯಾಲಿಟಿ ಸರಿಯಿಲ್ಲ. ಬ್ಯಾಟರಿ ಸರಿಯಿಲ್ಲ ಎಂದು ಸಾರಂಗ್ ಮಾನೆ ಆರೋಪಿಸಿದ್ದಾರೆ. ಡ್ರೋನ್ ಹಾರುವ ವೇಳೆಗೆ ಕೆಳಗೆ ಬಿದ್ದು ಹೋಯಿತು. ಪ್ರತಾಪ್‌ನ ಡ್ರೋನಾರ್ಕ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ಜೊತೆ ಸಾರಂಗ್ ಬ್ಯುಸಿನೆಸ್ ಪಾರ್ಟ್‌ನರ್ ಆಗಿದ್ದರು.

ರೈತರಿಂದ ಪಡೆದ ಅಡ್ವಾನ್ಸ್ ಹಾಗೂ ಬ್ಯಾಂಕ್‌ನಿಂದ ಸಾಲ ಪಡೆದು ಪ್ರತಾಪ್‌ಗೆ ಹಣ ನೀಡಿದ್ದೆವು. ಆದರೆ ಪ್ರತಾಪ್ ಕೊಟ್ಟಿರು ಡ್ರೋನ್‌ಗಳು ಉತ್ತಮ ಗುಣಮಟ್ಟದ್ದಲ್ಲ. ಡ್ರೋನ್ ಬಿಡಿ ಭಾಗಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ಪ್ರತಾಪ್, ಧುಲೆಯಿಂದ ಪರಿಣತರನ್ನು ಕರೆಸಿ ಡ್ರೋನ್‌ಗಳನ್ನು ಸಿದ್ಧಪಡಿಸಿ ಕೊಡುತ್ತಾರೆ. ಆತನಿಗೆ ಡ್ರೋನ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಎಂದು ತಮಗೆ ಅನ್ನಿಸಿರುವುದಾಗಿ ಸಾರಂಗ್ ಟಿವಿ9 ವಾಹಿನಿಗೆ ಮಾಹಿತಿ ನೀಡಿದ್ದಾರೆ.

ಡ್ರೋನ್‌ಗಳನ್ನು ಪಡೆಯಲು ಮಾಡಿದ ಸಾಲ, ಬಡ್ಡಿ ಎಲ್ಲಾ ಸೇರಿ ನಮಗೆ ಒಟ್ಟು 83 ಲಕ್ಷ ಖರ್ಚಾಗಿರುವುದಾಗಿ ಸಾರಂಗ್ ಮಾನೆ ಹೇಳಿದ್ದಾರೆ. ಭಾನುವಾರ ರಾತ್ರಿಯೇ ಬಿಗ್‌ಬಾಸ್ ಫಿನಾಲೆ ಮುಗಿಸಿ ಪ್ರತಾಪ್ ಮನೆಯಿಂದ ಹೊರ ಬರಲಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Pune company cheating allegations on Drone Prathap;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X