Exclusive: ಸಪ್ತ ಸಾಗರದಾಚೆಯಿಂದ ಬಂದ 'ಭೈರತಿ ರಣಗಲ್' ನಾಯಕಿ: ಮುಂದಿನ ವಾರವೇ ಶೂಟಿಂಗ್

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ಚಿತ್ರಕ್ಕೆ ನಾಯಕಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇತ್ತೀಚೆಗೆ ನಗರದ ಬಂಡಿ ಮಹಾಂಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿಸಲಾಗಿತ್ತು. ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗ್ತಿರೋದು ವಿಶೇಷ. ಸೂಪರ್ ಹಿಟ್ 'ಮಫ್ತಿ' ಪ್ರೀಕ್ವೆಲ್ ಇದಾಗಿದ್ದು ಮತ್ತೆ ನರ್ತನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

5 ವರ್ಷಗಳ ಹಿಂದೆ ಬಂದಿದ್ದ 'ಮಫ್ತಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆ ಸಮಯದಲ್ಲೇ ಶಿವಣ್ಣ ಸೀಕ್ವೆಲ್ ಮಾಡುವ ಬಗ್ಗೆ ಮಾತನಾಡಿದ್ದರು. ನಂತರ ಅದು ಸೀಕ್ವೆಲ್ ಅಲ್ಲ ಪ್ರೀಕ್ವೆಲ್ ಅನ್ನೋದ ಖಚಿತವಾಗಿತ್ತು. ಚಿತ್ರದಲ್ಲಿ ಸೆಂಚುರಿ ಸ್ಟಾರ್ ಮಾಫಿಯಾ ಡಾನ್ ಭೈರತಿ ರಣಗಲ್ ಪಾತ್ರದಲ್ಲಿ ಅಬ್ಬರಿಸಿದ್ದರು. ರಾಕ್ಷಸನಂತಹ ಪಾತ್ರದಲ್ಲಿ ಶಿವಣ್ಣ ಹೆಚ್ಚು ಡೈಲಾಗ್‌ಗಳಿಲ್ಲದೇ ಕಣ್ಣಿನಲ್ಲೇ ನಟಿಸಿ ಕಮಾಲ್ ಮಾಡಿದ್ದರು. ಆ ಪಾತ್ರ ಪ್ರೇಕ್ಷಕರನ್ನು ಆವರಿಸಿಕೊಂಡಿತ್ತು. ಇದೀಗ 'ಭೈರತಿ ರಣಗಲ್' ಯಾರು? ಆತನ ಹಿನ್ನೆಲೆ ಏನು? ಎನ್ನುವುದನ್ನು ತೆರೆ ತರಲಾಗುತ್ತಿದೆ.

Rukmini Vasanth confirmed as female lead in Shivarajkumars Bhairathi Ranagal

ಈ ಬಾರಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಭೈರತಿ ರಣಗಲ್' ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಯಾಕಂದರೆ 'ಮಫ್ತಿ' ಚಿತ್ರವನ್ನು ಪರಿಭಾಷಿಕರು ನೋಡಿ ಮೆಚ್ಚಿಕೊಂಡಿದ್ದಾರೆ. ಯೂಟ್ಯೂಬ್‌ನಲ್ಲಿ ಹಿಂದಿ ವರ್ಷನ್ ಹಿಟ್ ಆಗಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಚಿತ್ರತಂಡ ಹೇಳಿದೆ. ಬಹಳ ಹಿಂದೆಯೇ ಈ ಕಥೆ ಸಿದ್ಧಪಡಿಸಿಕೊಂಡಿದ್ದ ನರ್ತನ್ ಈಗ ಸಿನಿಮಾ ಕೈಗೆತ್ತಿಕೊಳ್ತಿದ್ದಾರೆ.

Rukmini Vasanth confirmed as female lead in Shivarajkumars Bhairathi Ranagal

ನಾಯಕಿಯಾಗಿ ರುಕ್ಮಿಣಿ ವಸಂತ್

'ಭೈರತಿ ರಣಗಲ್' ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೀತಿದೆ, ನಾಯಕಿ ಸಿಕ್ಕ ಕೂಡಲೇ ಚಿತ್ರೀಕರಣ ಎಂದು ಚಿತ್ರತಂಡ ಹೇಳಿತ್ತು. ಇದೀಗ ಚಿತ್ರಕ್ಕೆ ನಾಯಕಿಯಾಗಿ ರುಕ್ಮಿಣಿ ವಸಂತ್ ಆಯ್ಕೆ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ಸದ್ಯ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ. 'ಮಫ್ತಿ' ಚಿತ್ರದಲ್ಲಿ ಛಾಯಾ ಸಿಂಗ್ ಶಿವಣ್ಣನ ಸಹೋದರಿಯಾಗಿ ನಟಿಸಿದ್ದರು. ಅವರು ಕೂಡ ಈ ಚಿತ್ರದಲ್ಲಿ ಇರುವ ಸಾಧ್ಯತೆಯಿದೆ. ಇನ್ನುಳಿದಂತೆ ಹಲವು ಪಾತ್ರಗಳು ಪ್ರೀಕ್ವೆಲ್‌ನಲ್ಲಿ ಮುಂದುವರೆಯಲಿದೆ.

ಬಹುಬೇಡಿಕೆಯ ನಟಿ

4 ವರ್ಷಗಳ ಹಿಂದೆ ಬಂದ 'ಬೀರ್‌ಬಲ್' ಸಿನಿಮಾ ಮೂಲಕ ರುಕ್ಮಿಣಿ ವಸಂತ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಇದೀಗ ರಕ್ಷಿತ್ ಶೆಟ್ಟಿ ಜೋಡಿಯಾಗಿ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ನಟಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿರುವ 'ಬಾನ ದಾರಿಯಲ್ಲಿ' ಸಿನಿಮಾ ಕೂಡ ರಿಲೀಸ್‌ಗೆ ರೆಡಿಯಾಗಿದೆ. ಇನ್ನು ಶ್ರೀಮುರಳಿ ನಟನೆಯ 'ಬಘೀರ' ಚಿತ್ರದಲ್ಲೂ ಆಕೆ ಬಣ್ಣ ಹಚ್ಚಿದ್ದಾರೆ. ಇದೀಗ 'ಭೈರತಿ ರಣಗಲ್' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

ರುಕ್ಮಿಣಿಗೆ ಲಕ್ಕಿ ಚಾನ್ಸ್

'ಭೈರತಿ ರಣಗಲ್' ಸಿನಿಮಾ ಕ್ರೇಜ್ ಹೇಗಿದೆ ಅನ್ನೋದು ಗೊತ್ತೇಯಿದೆ. ಇಂತಾದೊಂದು ಚಿತ್ರದಲ್ಲಿ ರುಕ್ಮಿಣಿ ವಸಂತ್ ಅವಕಾಶ ಗಿಟ್ಟಿಸಿಕೊಂಡಿರೋದು ವಿಶೇಷ. ಮುಖ್ಯವಾಗಿ ಶಿವಣ್ಣನ ಜೋಡಿಯಾಗಿ ಈ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ. ಆಕೆಯ ಪಾತ್ರಕ್ಕೆ ಬಹಳ ಮಹತ್ವ ಇದ್ದು ಅಭಿನಯಕ್ಕೆ ಹೆಚ್ಚಿನ ಅವಕಾಶ ಇದೆ.

ಮುಂದಿನ ವಾರವೇ ಶೂಟಿಂಗ್

ಬಹಳ ದಿನಗಳಿಂದ 'ಭೈರತಿ ರಣಗಲ್' ಚಿತ್ರೀಕರಣಕ್ಕೆ ಸಿದ್ಧತೆ ನಡೀತಿದೆ. ಶಿವರಾತ್ರಿ ಸಂಭ್ರಮದಲ್ಲಿ ಸಿನಿಮಾ ಘೋಷಣೆಯಾಗಿತ್ತು. ಕಳೆದ ವಾರ ಮುಹೂರ್ತ ನೇರವೇರಿಸಲಾಗಿತ್ತು. ಜೂನ್ 10 ಅಥವಾ 15ರ ಸುಮಾರಿಗೆ ಚಿತ್ರೀಕರಣ ಆರಂಭಿಸುವ ಪ್ರಯತ್ನ ನಡೀತಿದೆ. ಇತ್ತೀಚೆಗೆ ಸಿನಿಮಾ ಮುಹೂರ್ತ ಸಮಾರಂಭಕ್ಕೂ ಬ್ಲ್ಯಾಕ್ ಅಂಡ್ ಬ್ಲ್ಯಾಕ್‌ ಕಾಸ್ಟ್ಯೂಮ್‌ನಲ್ಲಿ ಶಿವಣ್ಣ ಭೈರತಿ ರಣಗಲ್ ಗೆಟಪ್‌ನಲ್ಲೇ ಬಂದಿದ್ದರು. ಆದಷ್ಟ ಬೇಗ ಮತ್ತೆ ಶೂಟಿಂಗ್ ಅಖಾಡಕ್ಕೆ ರಣಗಲ್ ಎಂಟ್ರಿ ಆಗಲಿದೆ.

More from Filmibeat

English summary
Rukmini Vasanth confirmed as female lead in Shivarajkumar's Bhairathi Ranagal. This movie is to be a prequel to the super hit film Mufti. Narhan Directed film shooting to kick start soon. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X