ಬಾಲಿವುಡ್‌ಗೆ ಜಿಗಿದ ರುಕ್ಮಿಣಿ ವಸಂತ್, ರಶ್ಮಿಕಾ, ಶ್ರೀಲೀಲಾ ಹಾದಿಯಲ್ಲಿ ಕಾಂತಾರದ ಕನಕವತಿ-ಹೊಸ ಅಧ್ಯಾಯದ ಬಗ್ಗೆ ಮಾತು
ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಅದರಲ್ಲಿಯೂ ಕನ್ನಡದ ಹಲವು ನಾಯಕಿಯರಿಗೆ ಪರಭಾಷೆಯಲ್ಲಿ ಈಗ ಡಿಮ್ಯಾಂಡ್ ಇದೆ. ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಅವರನ್ನು ಬಾಲಿವುಡ್ ಬಿಗಿದಪ್ಪಿಕೊಂಡಿದ್ದರೆ ಆಶಿಕಾ ರಂಗನಾಥ್ .. ಮೇಘಾ ಶೆಟ್ಟಿ .. ಸದ್ಯ ತೆಲುಗು ಮತ್ತು ತಮಿಳಿನಲ್ಲಿ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ರಚಿತಾ ರಾಮ್ ಕೂಡ ಒಂದು ಕಾಲು ಕಾಲಿವುಡ್‌ನಲ್ಲಿ ಇಟ್ಟಿದ್ದಾರೆ. ಸಪ್ತಮಿ ಗೌಡ ಹಿಂದಿ ಮತ್ತು ತೆಲುಗು ಚಿತ್ರರಂಗವನ್ನು ಒಂದು ರೌಂಡ್ ಹಾಕಿಕೊಂಡು ಮರಳಿ ಕನ್ನಡಕ್ಕೆ ಬಂದಿದ್ದಾರೆ. ಇನ್ನೂ ರುಕ್ಮಿಣಿ ವಸಂತ್ ಅವರ ಹವಾ ಸದ್ಯ ದೇಶದೆಲ್ಲೆಡೆ ಇದೆ. ''ಕಾಂತಾರ''ದ ಕನಕವತಿಯಾಗುವ ಮುನ್ನವೇ ತೆಲುಗು ಮತ್ತು ತಮಿಳು ಚಿತ್ರರಂಗವನ್ನು ಪ್ರವೇಶ ಮಾಡಿದ್ದ ರುಕ್ಮಿಣಿ ವಸಂತ್ ಅವರಿಗೆ ಈಗ ಚಿನ್ನದಂತಹ ಬೇಡಿಕೆ ಇದೆ. ಆ ಭಾಷೆ ಈ ಭಾಷೆ ಎನ್ನದೇ ಹಲವರು ''ಕಾಂತಾರ''ದ ಈ ರಾಣಿ ಕನಕವತಿ ಹೆಸರನ್ನೇ ಕನವರಿಸುತ್ತಿದ್ದಾರೆ.

ಈ ಹಿನ್ನೆಲೆ ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಅವರಂತೆಯೇ ಎಲ್ಲಿ ರುಕ್ಮಿಣಿ ವಸಂತ್ ಕೂಡ ಪರ್ಮನೆಂಟ್ ಆಗಿ ಪರಭಾಷೆಯ ಪಾಲಾಗುತ್ತಾರೆ ಎನ್ನುವ ಭಯ ಇವರ ಕನ್ನಡದ ಅಭಿಮಾನಿಗಳಲ್ಲಿ ಇತ್ತು. ಆದರೆ.. ದುರಾದೃಷ್ಟವಶಾತ್ ಈ ಭಯ ನಿಜವಾಗುವ ಎಲ್ಲ ಲಕ್ಷಣ ಸದ್ಯ ಕಂಡು ಬರುತ್ತಿವೆ. ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ನಂತರ ರುಕ್ಮಿಣಿ ವಸಂತ್ ಕೂಡ ಬಾಲಿವುಡ್‌ನಲ್ಲಿ ಬಿಡಾರ ಹೂಡುವ ಸಾಧ್ಯತೆಗಳು ಹೆಚ್ಚಾಗಿವೆ. ಖುದ್ದು ರುಕ್ಮಿಣಿ ವಸಂತ್ ಇಂತಹದ್ದೊಂದು ಸುಳಿವು ನೀಡಿದ್ದಾರೆ.
ಈ ಕುರಿತು ''ಹಿಂದೂಸ್ತಾನ್ ಟೈಮ್ಸ್''ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರುಕ್ಮಿಣಿ ವಸಂತ್, ಹಲವರ ಜೊತೆ ಮಾತುಕತೆಗಳು ನಡೆಯುತ್ತಿವೆ, ನಾನಂತೂ ತುಂಬಾ ತುಂಬಾ ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ.
ಮುಂದುವರೆದು ತಮ್ಮ ಹಿಂದಿ ಜ್ಞಾನದ ಕುರಿತು ಕೂಡ ಮಾತನಾಡಿರುವ ರುಕ್ಮಿಣಿ ವಸಂತ್, ಬಾಲ್ಯದಿಂದಲೂ ಹಿಂದಿ ನನಗೆ ಪರಿಚಿತವಾದ ಭಾಷೆ, ಚಿಕ್ಕ ವಯಸ್ಸಿನಿಂದಲೂ ನಾನು ಹಿಂದಿ ಬಲ್ಲೆ, ಹಿಂದಿ ಚಿತ್ರಗಳನ್ನು ನಾನು ನೋಡುತ್ತಲೇ ಇರುತ್ತೇನೆ ಎಂದು ಹೇಳಿದ್ದಾರೆ.
ನನ್ನ ತಂದೆ ಸೇನೆಯಲ್ಲಿದ್ದರು. ಅಲ್ಲಿ ಪ್ರತಿಯೊಂದು ಕಂಟೋನ್ಮೆಂಟ್ ಅನ್ನು ಇನ್ನೊಂದಕ್ಕೆ ಸಂಪರ್ಕಿಸಲು ಹಿಂದಿ ಭಾಷೆಯನ್ನೇ ಬಳಸುತ್ತಿದ್ದರು, ನನ್ನ ತಂದೆಯ ಈ ಹಿನ್ನೆಲೆಯಿಂದ ಬಹುಶಃ ಹಿಂದಿ ನನ್ನ ಮೇಲೆ ಪ್ರಭಾವ ಬೀರಿರಬಹುದು ಎಂದು ಹೇಳಿರುವ ರುಕ್ಮಿಣಿ ವಸಂತ್, ಆದರೆ ನನಗೆ ಇಲ್ಲಿಯವರೆಗೆ ಈ ಭಾಷೆಯಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿಲ್ಲ, ನನ್ನ ಸಾಮರ್ಥ್ಯವನ್ನು ನಾನು ಸಂಪೂರ್ಣ ಬಳಸಲು ಉತ್ಸುಕಳಾಗಿದ್ದೇನೆ ಎಂದು ಹೇಳಿದ್ದಾರೆ. ಆ ದೇವರ ದಯೆ ನನ್ನ ಮೇಲೆ ಇದ್ದರೆ, ಶೀಘ್ರದಲ್ಲಿಯೇ ಇದು ಕೂಡ ಸಾಧ್ಯವಾಗಲಿದೆ ಎಂದಿದ್ದಾರೆ. ಈ ಮೂಲಕ ಹಿಂದಿಯಲ್ಲಿ ಅವಕಾಶಗಳ ಹೆಬ್ಬಾಗಿಲು ತೆರೆದಿರುವುದನ್ನು ರುಕ್ಮಿಣಿ ವಸಂತ್ ಖಚಿತ ಪಡಿಸಿದ್ದಾರೆ.

ಅಂದ್ಹಾಗೇ ರುಕ್ಮಿಣಿ ವಸಂತ್ ಅವರಿಗೆ ಈಗ 29 ವರ್ಷ. ಕನ್ನಡದ ''ಬೀರ್‌ಬಲ್'' ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶ ಮಾಡಿದ ರುಕ್ಮಿಣಿ ವಸಂತ್ ಸದ್ಯ ಆರು ವರ್ಷಗಳನ್ನು ಪೂರೈಸಿದ್ದಾರೆ. ಈ ಆರು ವರ್ಷಗಳಲ್ಲಿ ಮೂರು ಭಾಷೆಗಳಲ್ಲಿ ಅಭಿನಯಿಸಿದ್ದಾರೆ. ಈಗ ಬಾಲಿವುಡ್‌ಗೆ ವಲಸೆ ಹೋಗುತ್ತಿದ್ದಾರೆ. ಕನ್ನಡದಲ್ಲಿ ಯಶ್ ಅಭಿನಯದ ''ಟಾಕ್ಸಿಕ್'' ಹೊರತು ಪಡಿಸಿದರೆ ಬೇರೆ ಯಾವ ಚಿತ್ರಗಳನ್ನು ಕೂಡ ರುಕ್ಮಿಣಿ ವಸಂತ್ ಒಪ್ಪಿಕೊಂಡಿಲ್ಲ. ಸದ್ಯ ರುಕ್ಮಿಣಿ ವಸಂತ್ ಅವರ ಬೇಡಿಕೆಯನ್ನು ಗಮನಿಸಿದರೆ ಒಪ್ಪಿಕೊಳ್ಳುವ ಲಕ್ಷಣಗಳು ಕೂಡ ಕಂಡು ಬರುತ್ತಿಲ್ಲ. ಮುಂಬರುವ ದಿನಗಳಲ್ಲಿ ರುಕ್ಮಿಣಿ ವಸಂತ್ ಕನ್ನಡ ಚಿತ್ರವನ್ನು ಒಪ್ಪಿಕೊಳ್ಳುತ್ತಾರಾ..? ಅಥವಾ ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಅವರಂತೆಯೇ ಕನ್ನಡ ಮರೆತು ಪರಭಾಷೆಯಲ್ಲಿಯೇ ಸೆಟ್ಲ್ ಆಗ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











