ಮೆಗಾಸ್ಟಾರ್ ಚಿರು ಕುಟುಂಬಕ್ಕೆ ಅಳಿಯನಾಗ್ತಾರಂತೆ 'ಬಾಹುಬಲಿ' ಪ್ರಭಾಸ್.!

By Bharath Kumar

ಸಾಮಾಜಿಕ ಜಾಲತಾಣದಲ್ಲಿ ಈ ವರ್ಷ ಹೆಚ್ಚು ಸುದ್ದಿ ಮಾಡಿದ ವಿಷ್ಯಗಳಲ್ಲಿ ನಟ ಪ್ರಭಾಸ್ ಮದುವೆ ಸುದ್ದಿ ಬಹುತೇಕ ಮೊದಲ ಸ್ಥಾನದಲ್ಲಿರುತ್ತೆ. ಇಷ್ಟು ದಿನ ಅನುಷ್ಕಾ ಶೆಟ್ಟಿ ಜೊತೆ ಪ್ರಭಾಸ್ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಚರ್ಚೆಯಾಗುತ್ತಿತ್ತು. ಆದ್ರೀಗ, ಪ್ರಭಾಸ್ ಮದುವೆ ಆಗಲಿರುವ ಹುಡುಗಿ ಬಗ್ಗೆ ನಿರೀಕ್ಷೆನೇ ಮಾಡಿರದ ಬ್ರೇಕಿಂಗ್ ನ್ಯೂಸ್ ಬಹಿರಂಗವಾಗಿದೆ.

ಹೌದು, ಪ್ರಭಾಸ್ ಮದುವೆ ಆಗಲಿರುವ ಹುಡುಗಿ ಮೆಗಾಸ್ಟಾರ್ ಚಿರಂಜೀವಿ ಅವರ ಕುಟುಂಬದಲ್ಲಿದ್ದಾಳಂತೆ. ಚಿರು ಕುಟುಂಬಕ್ಕೆ 'ಬಾಹುಬಲಿ' ಪ್ರಭಾಸ್ ಅಳಿಯನಾಗ್ತಾರಂತೆ. ಈ ಸುದ್ದಿ ಕೇಳಿ ನಿಮಗೆ ಎಷ್ಟು ಆಶ್ಚರ್ಯವಾಗುತ್ತಿದೆಯೋ ಅಷ್ಟೇ ಶಾಕ್ ನಮಗೂ ಆಗಿತ್ತು.

ಅಷ್ಟಕ್ಕೂ, ಈ ಸುದ್ದಿ ನಿಜನಾ? ಚಿರಂಜೀವಿ ಫ್ಯಾಮಿಲಿಯಲ್ಲಿ ಪ್ರಭಾಸ್ ಅವರನ್ನ ಮದುವೆ ಆಗುವಂತಹ ಹುಡುಗಿ ಯಾರಿದ್ದಾರೆ? ಈ ಎಲ್ಲ ಕುತೂಹಲಗಳಿಗೂ ಉತ್ತರ ಇಲ್ಲಿದೆ ನೋಡಿ.....

ಪ್ರಭಾಸ್ ಜೊತೆ ನಿಹಾರಿಕ ಮದುವೆ.!

ಪ್ರಭಾಸ್ ಜೊತೆ ನಿಹಾರಿಕ ಮದುವೆ.!

'ಬಾಹುಬಲಿ' ಪ್ರಭಾಸ್ ಜೊತೆ ಚಿರು ಫ್ಯಾಮಿಲಿಯ ನಿಹಾರಿಕ ಅವರ ಮದುವೆ ನಡೆಯಲಿದೆ ಎಂಬ ಸುದ್ದಿಗಳು ಕಳೆದ ಎರಡ್ಮೂರು ದಿನದಿಂದ ಫೇಸ್ ಬುಕ್, ಟ್ವಿಟ್ಟರ್, ವೆಬ್ ಸೈಟ್ ಗಳಲ್ಲಿ ಗಿರಿಗಿಟ್ಲೆ ಹೊಡಿತಿದೆ.

ಯಾರು ಈ ನಿಹಾರಿಕ?

ಯಾರು ಈ ನಿಹಾರಿಕ?

ಅಂದ್ಹಾಗೆ, ಪ್ರಭಾಸ್ ಮದುವೆ ಆಗಲಿದ್ದಾರೆ ಎನ್ನಲಾಗಿದ್ದ ಈ ನಿಹಾರಿಕ ಮೆಗಾಸ್ಟಾರ್ ಪುತ್ರಿ. ಅರ್ಥಾತ್ ಚಿರಂಜೀವಿ ಅವರ ಸಹೋದರ ನಾಗೇಂದ್ರ ಬಾಬು ಅವರ ಸುಪುತ್ರಿ. ನಟ ವರುಣ್ ತೇಜ ಅವರ ಸಹೋದರಿ.

ನಟಿ ಕಮ್ ನಿರೂಪಕಿ ನಿಹಾರಿಕ

ನಟಿ ಕಮ್ ನಿರೂಪಕಿ ನಿಹಾರಿಕ

ಟಿವಿ ನಿರೂಪಕಿ ಆಗಿ ಕೆಲಸ ಮಾಡುತ್ತಿದ್ದ ನಿಹಾರಿಕ, ನಂತರ ಸಿನಿಮಾಗಳಲ್ಲು ನಟಿಸಿದರು. 2016ರಲ್ಲಿ ತೆರೆಕಂಡ 'ಒಕ ಮನಸು' ಚಿತ್ರದ ಮೂಲಕ ಬಣ್ಣದ ಹಚ್ಚಿದ ನಿಹಾರಿಕ ಸದ್ಯ 'ಹ್ಯಾಪಿ ವೆಡ್ಡಿಂಗ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಇದೆಲ್ಲಾ ಬರಿ ವದಂತಿ

ಇದೆಲ್ಲಾ ಬರಿ ವದಂತಿ

ಪ್ರಭಾಸ್ ಮತ್ತು ನಿಹಾರಿಕ ಮದುವೆ ಬಗ್ಗೆ ನಟ ಕೃಷ್ಣಂರಾಜು ಅವರು ಚಿರಂಜೀವಿ ಅವರ ಜೊತೆ ಮಾತನಾಡಿದ್ದರು. ಹಾಗಾಗಿ, ಚಿರು ಕೂಡ ಸಹೋದರ ನಾಗೇಂದ್ರ ಬಾಬು ಜೊತೆ ಈ ಬಗ್ಗೆ ಸಮಾಲೋಚನೆ ನಡೆಸಿದ್ದರು ಎಂಬ ಅಂತೆ-ಕಂತೆಗಳು ಹೆಚ್ಚು ಸುದ್ದಿಯಾಗಿದೆ. ಆದ್ರೆ, ಇದೆಲ್ಲಾ ಸುಳ್ಳು ಸುದ್ದಿ ಸ್ವತಃ ಮೆಗಾಸ್ಟಾರ್ ಹೇಳಿದ್ದಾರೆ ಎನ್ನಲಾಗಿದೆ.

ಚಿರಂಜೀವಿ ಪ್ರತಿಕ್ರಿಯೆ

ಚಿರಂಜೀವಿ ಪ್ರತಿಕ್ರಿಯೆ

ಪ್ರಭಾಸ್ ಮತ್ತು ನಿಹಾರಿಕ ಮದುವೆ ಸುದ್ದಿಗೆ ಸಂಬಂಧಿಸಿದಂತೆ ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಚಿರಂಜೀವಿ ''ಇದೆಲ್ಲಾ ಸುಳ್ಳು. ನಾನು ಮತ್ತು ಕೃಷ್ಣಂರಾಜು ಈ ಬಗ್ಗೆ ಮಾತನಾಡಿಲ್ಲ. ನಾಗಬಾಬು ಜೊತೆನೂ ಮಾತನಾಡಿಲ್ಲ. ಇದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಂಡಿರುವ ಸುದ್ದಿಯಷ್ಟೇ'' ಎಂದು ತಿಳಿಸಿದ್ದಾರೆ ಎಂದು ಯೂಟ್ಯೂಬ್ ಹಾಗೂ ಕೆಲವು ತೆಲುಗು ವೆಬ್ ಸೈಟ್ ಗಳಲ್ಲಿ ವರದಿಯಾಗಿದೆ.

More from Filmibeat

English summary
A strong rumor that has now gone viral on social media networks is that Mega actress Naga Babu's daughter Niharika is getting married to Prabhas.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X