For Quick Alerts
  ALLOW NOTIFICATIONS  
  For Daily Alerts

  ಯಶ್ ಮುಂದಿನ ಸಿನಿಮಾ ನಿರ್ದೇಶಕರು ಯಾರು? ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ರಾಕಿಂಗ್ ಸ್ಟಾರ್?

  |

  ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ ಚಾಪ್ಟರ್ 2'ಅನ್ನು ಅಕ್ಟೋಬರ್ 23ರಂದು ತೆರೆಗೆ ತರಲು ಚಿತ್ರತಂಡ ಉದ್ದೇಶಿಸಿದೆ. ಆದರೆ ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಚಿತ್ರೀಕರಣ ಚಟುವಟಿಕೆಗಳಿಗೆ ಅಡ್ಡಿಯಾಗಿತ್ತು. ನಿರೀಕ್ಷೆಯಂತೆ ನಡೆದಿದ್ದರೆ ಈ ವೇಳೆಗೆ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭವಾಗಬೇಕಿತ್ತು. ಈಗ ಅದೆಲ್ಲವೂ ನನೆಗುದಿಗೆ ಬಿದ್ದಿದೆ. ಕಡೇ ಪಕ್ಷ ಟ್ರೇಲರ್ ಆದರೂ ಬಿಡುಗಡೆ ಮಾಡಿ ಎಂಬ ಅಭಿಮಾನಿಗಳ ಬೇಡಿಕೆಗೂ ನಿರಾಶೆಯ ಪ್ರತಿಕ್ರಿಯೆ ಸಿಕ್ಕಿದೆ.

  ರುದ್ರ್ ಜೊತೆಗೆ ಹೇಗೆ ಕಾಲ ಕಳೆಯುತ್ತಿದ್ದಾರೆ ಗೊತ್ತಾ ಗ್ಲಾಮ್ ಮಾ | Filmibeat Kannada

  ಈ ನಡುವೆ ಯಶ್ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಇಬ್ಬರು ನಿರ್ದೇಶಕರ ಸಿನಿಮಾದ ಸುತ್ತ ಯಶ್ ಹೆಸರು ಕೇಳಿಬರುತ್ತಿದೆ. ಈ ಎರಡೂ ಸಿನಿಮಾಗಳು ಕೂಡ 'ಕೆಜಿಎಫ್'ನಂತೆಯೇ ಕುತೂಹಲಕಾರಿ ಕಥೆ ಹೊಂದಿದ್ದು, ಪ್ಯಾನ್ ಇಂಡಿಯಾ ಸಿನಿಮಾಗಳಾಗಿರಲಿವೆ ಎನ್ನಲಾಗುತ್ತಿದೆ. ಮುಂದೆ ಓದಿ..

  ಯಶ್ ಹೊಸ ಸಿನಿಮಾಗೆ ದಕ್ಷಿಣ ಭಾರತದ ಸ್ಟಾರ್ ನಟಿ ನಾಯಕಿ? ಯಶ್ ಹೊಸ ಸಿನಿಮಾಗೆ ದಕ್ಷಿಣ ಭಾರತದ ಸ್ಟಾರ್ ನಟಿ ನಾಯಕಿ?

  ಮಫ್ತಿ ನಿರ್ದೇಶಕರ ಚಿತ್ರ

  ಮಫ್ತಿ ನಿರ್ದೇಶಕರ ಚಿತ್ರ

  ಶಿವರಾಜ್ ಕುಮಾರ್, ಮುರಳಿ ನಟನೆಯ 'ಮಫ್ತಿ' ಚಿತ್ರ ನಿರ್ದೇಶಿಸಿದ್ದ ನರ್ತನ್ ಅವರ ಮುಂದಿನ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಸುದ್ದಿ ಈ ಹಿಂದಿನಿಂದಲೂ ಹರಿದಾಡುತ್ತಿದೆ. 'ಮಾಸ್ಟರ್ ಪೀಸ್' ಚಿತ್ರದ ವೇಳೆ ಯಶ್ ಮತ್ತು ನರ್ತನ್ ಜತೆಯಾಗಿ ಕೆಲಸ ಮಾಡಿದ್ದರು. ಹೀಗಾಗಿ ಈ ಗೆಳೆತನ ಅವರ ಮುಂದಿನ ಸಿನಿಮಾಕ್ಕೆ ಮುನ್ನುಡಿ ಬರೆದಿದೆ ಎನ್ನಲಾಗಿದೆ.

  'KGF-2' ಟೀಸರ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ: ಚಿತ್ರತಂಡ ಹೇಳಿದ್ದೇನು?'KGF-2' ಟೀಸರ್ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆ: ಚಿತ್ರತಂಡ ಹೇಳಿದ್ದೇನು?

  ಬೈರತಿ ರಣಗಲ್ ಸಿನಿಮಾ

  ಬೈರತಿ ರಣಗಲ್ ಸಿನಿಮಾ

  'ಮಫ್ತಿ' ಚಿತ್ರದ ತಮಿಳು ಅವತರಣಿಕೆಯನ್ನು ಸ್ವತಃ ನರ್ತನ್ ನಿರ್ದೇಶಿಸುತ್ತಿದ್ದಾರೆ. ಅದನ್ನು ಮುಗಿಸಿದ ನಂತರ ಅವರು ಶಿವರಾಜ್ ಕುಮಾರ್ ಅವರಿಗೆ 'ಬೈರತಿ ರಣಗಲ್' ಸಿನಿಮಾ ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಮಫ್ತಿ ಚಿತ್ರದ ಮುಂದುವರಿದ ಭಾಗವಾಗಿ ಇದು ಇರಲಿದ್ದು, ಸ್ವತಃ ಶಿವಣ್ಣ ಅವರೇ ನಿರ್ಮಾಣ ಮಾಡುವ ಉದ್ದೇಶ ಹೊಂದಿದ್ದಾರೆ. ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಕೂಡ ಇದರಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಯಶ್ ಮತ್ತು ನರ್ತನ್ ಸಿನಿಮಾ ಸೆಟ್ಟೇರುವುದು ಒಂದು ವರ್ಷ ತಡವಾಗಬಹುದು.

  ಜನ ಗಣ ಮನದ ಚರ್ಚೆ

  ಜನ ಗಣ ಮನದ ಚರ್ಚೆ

  ತೆಲುಗಿನ ನಿರ್ದೇಶಕ ಪುರಿ ಜಗನ್ನಾಥ್ ಅವರ 'ಜನ ಗಣ ಮನ' ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ ಎನ್ನಲಾಗಿತ್ತು. ಕೆಜಿಎಫ್ ಮುಗಿದ ಬಳಿಕವೇ ಆ ಚಿತ್ರದ ಬಗ್ಗೆ ಯೋಚಿಸುವುದಾಗಿ ಯಶ್ ಹೇಳಿದ್ದರು. ಈ ನಡುವೆ ಯಶ್ ಸಿನಿಮಾ ತಿರಸ್ಕರಿಸಿದ್ದಾರೆ ಎಂಬ ಮಾತೂ ಕೇಳಿಬಂದಿತ್ತು. ಕೆಜಿಎಫ್ 2 ಅಂತಿಮ ಹಂತಕ್ಕೆ ಬರುತ್ತಿದ್ದಂತೆ ಈ ಚಿತ್ರದ ಚರ್ಚೆ ಮತ್ತೆ ಶುರುವಾಗಿದೆ.

  ಯಶ್ ಒಬ್ಬ ಅದ್ಭುತ ವ್ಯಕ್ತಿ ಎಂದು ಹೊಗಳಿದ ಬಾಲಿವುಡ್ ತಾರೆ ರವೀನಾ ಟಂಡನ್ಯಶ್ ಒಬ್ಬ ಅದ್ಭುತ ವ್ಯಕ್ತಿ ಎಂದು ಹೊಗಳಿದ ಬಾಲಿವುಡ್ ತಾರೆ ರವೀನಾ ಟಂಡನ್

  ತಮನ್ನಾ ನಾಯಕಿ?

  ತಮನ್ನಾ ನಾಯಕಿ?

  ಪುರಿ ಜಗನ್ನಾಥ್ ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಸುದ್ದಿ ಪುನಃ ಮುನ್ನೆಲೆಗೆ ಬಂದಿದೆ. ಈ ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸ ಶುರುವಾಗಿದೆ. ನಾಯಕಿಯಾಗಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಇಬ್ಬರು ನಿರ್ದೇಶಕರ ಸಿನಿಮಾಗಳ ಕುರಿತು ಅಧಿಕೃತ ಹೇಳಿಕೆ ಹೊರಬಂದಿಲ್ಲ.

  English summary
  Rumours around Yash's next movie as he will act in Mufti director Narthan or in Puri Jaganadh's next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X