twitter
    For Quick Alerts
    ALLOW NOTIFICATIONS  
    For Daily Alerts

    ಜೀವನದಲ್ಲಿ ಯಾವಾಗಲೂ 'ಪಾಸಿಟಿವ್' ಆಗಿರಲು ಸಾಧ್ಯವೇ?: ನೋಡಿ 'ಪಾಸಿಟಿವ್' ಕಿರುಚಿತ್ರ

    |

    ಎಲ್ಲರೂ ಯಾವಾಗಲೂ ಪಾಸಿಟಿವ್ ಆಗಿರಬೇಕು ಎನ್ನುವಾಗಲೇ ನೆಗೆಟಿವ್ ಸಂಗತಿಯೊಂದು ನಮ್ಮ ಬದುಕಿನೊಳಗೆ ಬಂದಿದೆ. ಆ ನೆಗೆಟಿವ್ ವಿಚಾರವು ನಮ್ಮಲ್ಲಿಯೂ ನೆಗೆಟಿವ್ ಆಗಿರಬೇಕು ಎನ್ನುವುದು ಎಲ್ಲರ ಬಯಕೆ. ಹಾಗೆಯೇ ಪಾಸಿಟಿವ್ ಎಂಬುದು ಕಿವಿಯೊಳಗೆ ಬಿದ್ದರೆ ಮೈ ಒಂದು ಕ್ಷಣ ನಡುಗುತ್ತದೆ. ಜೀವನದಲ್ಲಿ ಪಾಸಿಟಿವ್ ಬೇಕೋ ಅಥವಾ ನೆಗೆಟಿವ್ ಬೇಕೋ ಎಂಬ ಆಯ್ಕೆ ಶುರುವಾಗಿದೆ.

    ಇಂತಹದೇ ವಸ್ತುವನ್ನಿಟ್ಟುಕೊಂಡ ಕಿರುಚಿತ್ರವೊಂದು ಗಮನ ಸೆಳೆಯುತ್ತಿದೆ. 'ಪಾಸಿಟಿವ್' ಎಂಬ ಶೀರ್ಷಿಕೆಯ ಈ ಕಿರುಚಿತ್ರ, 'ಡೇಲಿ ಹಂಟ್' ಲಾಕ್ ಡೌನ್ ಅವಧಿಯಲ್ಲಿ ಆಯೋಜಿಸಿದ್ದ 'ಲಾಕ್ ಡೌನ್ ಶಾರ್ಟ್ ಫಿಲಂ ಸ್ಪರ್ಧೆ'ಯಲ್ಲಿ ರನ್ನರ್ ಅಪ್ ಆಗಿದೆ.

    ಕೇವಲ 1.51 ನಿಮಿಷದ ಅವಧಿಯ ಈ ಕಿರುಚಿತ್ರವನ್ನು ಚಂದನ್ ಕೇಶವ್ ನಿರ್ದೇಶಿಸಿ, ನಟಿಸಿ ಸಿದ್ಧಪಡಿಸಿದ್ದಾರೆ. ಅವರೊಂದಿಗೆ ಪ್ರಭು ಎಂ.ಕೆ. ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.

    Runners Up In Daily Hunts Lockdown Short Film Festival Positive

    ಮನೆಯಲ್ಲಿ ಇಬ್ಬರು ಇಸ್ಪೀಡ್ ಆಡುತ್ತಿದ್ದಾರೆ. ಜೀವನದಲ್ಲಿ ಯಶಸ್ಸು ಸಿಗಬೇಕೆಂದರೆ ನಾವು ಅನುಸರಿಸಬೇಕಾದ ಒಂದೇ ಒಂದು ಸಂಗತಿಯೆಂದರೆ ಅದು ನಕಾರಾತ್ಮಕ ಆಲೋಚನೆಯ ಜನರನ್ನು ದೂರ ಇರಿಸುವುದು ಮತ್ತು ಪಾಸಿಟಿವ್ ಜನರ ಜತೆ ಸಮಯ ಕಳೆಯುವುದು ಎನ್ನುವುದು ಒಬ್ಬಾತನ ಸಲಹೆ.

    ಆದರೆ ಎಲ್ಲ ಬಗೆಯ ಪಾಸಿಟಿವ್‌ಗಳೂ ಒಳ್ಳೆಯದಲ್ಲ. ಪಾಸಿಟಿವ್ ಎನ್ನುವುದು ತನ್ನಲ್ಲಿಯೂ ಭೀತಿ ಹುಟ್ಟಿಸುತ್ತದೆ ಎನ್ನುವುದು ಎದುರಿಗೆ ಕುಳಿತ ವ್ಯಕ್ತಿ, ಸೀನುವ ಮೂಲಕ ಕೊರೊನಾ ವೈರಸ್ ಪಾಸಿಟಿವ್ ಬಂದಿರುವ ಅನುಮಾನ ಹಂಚಿಕೊಂಡಾಗ ಅರಿವಾಗುತ್ತದೆ.

    ಒಂದು ನಿಮಿಷದಷ್ಟು ಅವಧಿಯಲ್ಲಿಯೇ ಸೂಕ್ಷ್ಮ ಸಂಗತಿಯೊಂದನ್ನು ಈ ಕಿರುಚಿತ್ರದಲ್ಲಿ ಹೇಳಿದ್ದಾರೆ ಚಂದನ್ ಕೇಶವ್. ಸೂರ್ಯನಾರಾಯಣ್ ನೀಡಿರುವ ಹಿನ್ನೆಲೆ ಸಂಗೀತ ಕಿರುಚಿತ್ರದ ಆಶಯಕ್ಕೆ ಪೂರಕವಾದ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿದೆ.

    ಟ್ರೋಲ್ ಹೈದ ಪೇಜಿನ ಹೈದ ಸ್ಟುಡಿಯೋಸ್ ಈ ಲಾಕ್ ಡೌನ್ ಶಾರ್ಟ್ ಮೂವಿ ಸ್ಪರ್ಧೆ ಆಯೋಜಿಸಿತ್ತು. ಮೂರು ನಿಮಿಷಕ್ಕಿಂತ ಕಡಿಮೆ ಅವಧಿಯ ಚಿತ್ರಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮನೆಯ ಒಳಗೇ ಕಿರುಚಿತ್ರ ತಯಾರಿಸುವುದು ಕಡ್ಡಾಯವಾಗಿತ್ತು.

    250 ರೂ ಪ್ರವೇಶ ಶುಲ್ಕದೊಂದಿಗೆ 50ಕ್ಕೂ ಹೆಚ್ಚು ಕಿರುಚಿತ್ರಗಳು ಸ್ಪರ್ಧೆಗೆ ಬಂದಿದ್ದವು. ತೀರ್ಪುಗಾರರಾಗಿದ್ದ ನಿರ್ದೇಶಕರಾದ ಎಂ.ಜಿ. ಶ್ರೀನಿವಾಸ್, ಅನೂಪ್ ಆಂಥೋನಿ ಮತ್ತು ಅರ್ಜುನ್ ಕುಮಾರ್ ಅವುಗಳಲ್ಲಿ ಉತ್ತಮವಾದುದ್ದನ್ನು ಆಯ್ಕೆ ಮಾಡಿದ್ದರು.

    ಮೊದಲ ಬಹುಮಾನ ಪಡೆದುಕೊಂಡ ತಂಡಕ್ಕೆ 10,000 ರೂ ನಗದು ಪ್ರಕಟಿಸಲಾಗಿತ್ತು. ರೆಡ್ ಲೈನ್ ಎಂಬ ಕಿರುಚಿತ್ರ ಮೊದಲ ಸ್ಥಾನ ಪಡೆದುಕೊಂಡಿತು.

    English summary
    Daily Hunt has organized short film festival during lock down period. Here is all about the runners up short film Positive.
    Sunday, June 7, 2020, 9:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X