'ರೂಪಾಯಿ' ಇದು ಚಿಲ್ರೆ ವಿಷ್ಯ ಅಲ್ಲಾ ಗುರು ಎಂದ ಕೃಷಿ
Recommended Video

ಕನ್ನಡದಲ್ಲಿ ಈಗ ಅನೇಕ ಸಿನಿಮಾಗಳು ಅದರ ಟೈಟಲ್ ಮೂಲಕವೇ ಗಮನ ಸೆಳೆಯುತ್ತಿವೆ. ಅದೇ ರೀತಿ ಈಗ 'ರೂಪಾಯಿ' ಇದು ಚಿಲ್ರೆ ವಿಷ್ಯ ಅಲ್ಲಾ ಗುರು ಎಂಬ ಸಿನಿಮಾ ಕೂಡ ತನ್ನ ಹೆಸರಿನ ಮೂಲಕ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆಯಾಗಿದೆ.
ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ನಟಿ ಕೃಷಿ ತಾಪಂಡ ಕೈ ನಲ್ಲಿ ಸಾಕಷ್ಟು ಸಿನಿಮಾಗಳಿವೆ ಆ ಪೈಕಿ 'ರೂಪಾಯಿ' ಸಿನಿಮಾ ಕೂಡ ಒಂದು. ಇಷ್ಟು ದಿನ ಈ ಸಿನಿಮಾದ ನಾಯಕಿ ಬಗ್ಗೆ ಗೌಪ್ಯತೆ ಕಾಪಾಡಿಕೊಂಡಿದ್ದ ಚಿತ್ರತಂಡ ಈಗ ಕೃಷಿ ಅವರನ್ನು ಆಯ್ಕೆ ಮಾಡಿದೆ. ಸಿನಿಮಾದ ಒಂದು ಪೋಸ್ಟರ್ ಮೂಲಕ ಅವರನ್ನು ಪರಿಚಯ ಮಾಡಿದೆ. ಇದೊಂದು ದುಡ್ಡಿನ ಬಗ್ಗೆ ಇರುವ ಸಿನಿಮಾವಾಗಿದ್ದು, ಕೃಷಿ ಮಧ್ಯಮ ವರ್ಗದ ಒಬ್ಬ ಹುಡುಗಿಯ ಪಾತ್ರ ಮಾಡಿದ್ದಾರೆ.

ಅಂದಹಾಗೆ, ಈ ಹಿಂದೆ 'ಅಂಬಾನಿ ದಿ ಇನ್ ವೆಸ್ಟರ್' ಎಂಬ ಕಿರುಚಿತ್ರದ ಮೂಲಕ ದೊಡ್ಡ ಹೆಸರು ಮಾಡಿದ್ದ ನಿರ್ದೇಶಕ ವಿನೋದ್ ನಾಗ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ ವಿಶೇಷ ಅಂದರೆ ಈ ಸಿನಿಮಾದ ಹೀರೋ ಕೂಡ ಅವರೇ ಆಗಿದ್ದಾರೆ. ಮಂಜುನಾಥ್ ಎಂ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.
ಇನ್ನು ಈಗಾಗಲೇ ಸಿನಿಮಾದ ಒಂದು ಪ್ರಮೋಷನ್ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. 23 ನಿಮಿಷ ವಿಡಿಯೋ ಮೂಲಕ ತಮ್ಮ ಪ್ರತಿಭೆಯನ್ನು ನಿರ್ದೇಶಕರು ಪ್ರದರ್ಶಿಸಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಬಹುಪಾಲು ಬೆಂಗಳೂರಿನಲ್ಲಿಯೇ ನಡೆಯಲಿದೆಯಂತೆ.


Click it and Unblock the Notifications











