ಕಥೆ ಕೇಳಲು ನಿರ್ದೇಶಕನ ಕಚೇರಿಗೆ ಹೋದ ನಟಿಗೆ ಆಗಿದ್ದು ಕೆಟ್ಟ ಅನುಭವ
ಮೀಟೂ ಅಭಿಯಾನ ಪರಿಚಯ ಆದ್ಮೇಲೆ ಸಿನಿಜಗತ್ತಿನ ಅನೇಕರನ್ನ ಮುಖವಾಡ ಕಳಚಿದೆ. ಅವಕಾಶದ ನೆಪದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಅನೇಕ ನಟ, ನಿರ್ದೇಶಕ, ನಿರ್ಮಾಪಕರ ಕರಾಳ ಮುಖಗಳು ಬಹಿರಂಗ ಆಗಿದೆ.
ಇದೀಗ, ಮೀಟೂ ಅಭಿಯಾನ ಬೆಂಗಾಳಿ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ಖ್ಯಾತ ನಿರ್ದೇಶಕ ಅರಿಂದಂ ಸಿಲ್ ವಿರುದ್ಧ ಟಿವಿ ನಟಿ ರೂಪಾಂಜನ ಮಿತ್ರಾ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿದ್ದಾರೆ.
ಧಾರಾವಾಹಿಯ ಕಥೆ ಹೇಳಲು ಕಚೇರಿಗೆ ಕರೆದು ತನ್ನ ಬಳಿ ಅಸಭ್ಯವಾಗಿ ವರ್ತಿಸಿದ್ದರು ಎಂಬ ಆಘಾತಕಾರಿ ಘಟನೆಯನ್ನು ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದಾರೆ. ಅಂದು ನಿರ್ದೇಶಕರ ಕಚೇರಿಯಲ್ಲಿ ಏನಾಯ್ತು?

ಕಥೆ ಹೇಳಲು ಬರ ಹೇಳಿದ್ದರು
ಆನಂದ ಬಜಾರ್ ಡಿಜಿಟಲ್ ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ರೂಪಾಂಜನ ಮಿತ್ರ ಅಂದು ಏನು ನಡೆಯಿತು ಎಂದು ಮುಕ್ತವಾಗಿ ಹೇಳಿಕೊಂಡಿದ್ದಾರೆ. ''ಭೂಮಿ ಕನ್ಯಾ ಧಾರಾವಾಹಿಯ ಸ್ಕ್ರಿಪ್ಟ್ ಓದಲು ಕೊಲ್ಕತ್ತಾ ಕಚೇರಿಗೆ ಬನ್ನಿ ಎಂದು ನಿರ್ದೇಶಕ ಅರಿಂದಂ ಸೀಲ್ ಕರೆಸುತ್ತಿದ್ದರು. ಅಂದು ದುರ್ಗಾ ಪೂಜೆಗೂ ಕೆಲವು ದಿನಗಳ ಹಿಂದೆ ಈ ಘಟನೆ ನಡೆದಿದೆ. ನಾನು ಅವರ ಆಫೀಸ್ ತಲುಪಿದಾಗ 5 ಗಂಟೆಯಾಗಿತ್ತು'' ಎಂದು ಮಾತು ಆರಂಭಿಸಿದ ನಟಿ ತಮಗೆ ಎದುರಾದ ಕೆಟ್ಟ ಅನುಭವ ಹಂಚಿಕೊಂಡಿದ್ದಾರೆ.

ಕಚೇರಿಯಲ್ಲಿ ಯಾರೂ ಇರಲಿಲ್ಲ
''ನಾನು ಆಫೀಸ್ ಗೆ ಹೋದಾಗ ಅಲ್ಲಿ ಯಾರೂ ಇರಲಿಲ್ಲ. ಆ ಕ್ಷಣ ನನ್ನಲ್ಲಿ ಆತಂಕ ಮೂಡಿತ್ತು. ಭಯ ಹೆಚ್ಚಾಗಿತ್ತು. ಸ್ಕ್ರಿಪ್ಟ್ ಬಗ್ಗೆ ಮಾತು ಆರಂಭಿಸಿದರು. ತಕ್ಷಣ ಸೀಟಿನಿಂದ ಎದ್ದು ನಿಂತ ನಿರ್ದೇಶಕ, ಮೆಲ್ಲನೆ ನನ್ನ ಹಿಂದೆ ಬಂದು ನಿಂತರು. ತಲೆ ಮತ್ತು ಬೆನ್ನ ಮೇಲೆ ಕೈಯಿಟ್ಟು ಸವರಲು ಪ್ರಾರಂಭಿಸಿದರು. ನನ್ನ ಮೇಲೆ ಅತ್ಯಾಚಾರ ನಡೆಯಬಹುದು ಎಂಬ ಭಯ ಹೆಚ್ಚಾಯಿತು. ಯಾರಾದರೂ ಬರಬಾರದೇ ಎಂಬ ಪ್ರಾರ್ಥನೆ ನನ್ನ ಮನದಲ್ಲಿ ಹೇಳಲು ಆರಂಭಿಸಿದೆ'' ಎಂದು ನಡೆದ ಘಟನೆ ವಿವರಿಸಿದರು.

ಗಟ್ಟಿಯಾಗಿ ಮಾತನಾಡಲು ಶುರು ಮಾಡಿದೆ
''ನಿರ್ದೇಶಕರ ನಡೆಯನ್ನು ನನ್ನಿಂದ ಸಹಿಸಲು ಸಾಧ್ಯವಾಗಲಿಲ್ಲ. ಇದ್ದಕ್ಕಿದ್ದಂತೆ ಸ್ಕ್ರಿಪ್ಟ್ ಬಗ್ಗೆ ಹೇಳಿ ಎಂದು ಜೋರಾಗಿ ಕೇಳಿದೆ. ಬಹುಶಃ ಆ ದೊಡ್ಡ ಧ್ವನಿ ಅವರಿಗೆ ' ಈ ಹುಡುಗಿ ಅಂತವಳಲ್ಲ' ಎಂಬ ಸಂದೇಶ ನೀಡಿತು. ತಕ್ಷಣ ಅವರು ನಿರ್ದೇಶಕರಂತೆ ಐದು ನಿಮಿಷದಲ್ಲಿ ಸ್ಕ್ರಿಪ್ಟ್ ಹೇಳಿದರು. ಅಷ್ಟೊತ್ತಿಗೆ ಅವರ ಪತ್ನಿ ಬಂದರು''

ಕುಸಿದು ಬಿದ್ದ ನಟಿ
''ನಿರ್ದೇಶಕನ ಕಚೇರಿಯಿಂದ ಮನೆಗೆ ಹೋದ್ಮೇಲೆ ಘಟನೆಯನ್ನು ನೆನೆದು ನಾನು ಕುಸಿದು ಬಿದ್ದೆ' ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. ಇಷ್ಟು ದಿನ ಯಾಕೆ ಈ ಘಟನೆ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ ಎಂದು ಕೇಳಿದ್ದಕ್ಕೆ ''ಟಿವಿ ವಾಹಿನಿ ಜೊತೆ ನಾನು ಒಪ್ಪಂದದಲ್ಲಿ ಇದ್ದ ಕಾರಣ ಮಾತನಾಡಲು ಸಾಧ್ಯವಾಗಿಲ್ಲ'' ಎಂದು ತಿಳಿಸಿದ್ದಾರೆ.

ಆರೋಪ ನಿರಾಕರಿಸಿದ ನಿರ್ದೇಶಕ
ನಟಿ ರೂಪಾಂಜನ ಆರೋಪದ ಬಗ್ಗೆ ನಿರ್ದೇಶಕ ಅರಿದಂ ಸೀಲ್ ಪ್ರತಿಕ್ರಿಯಿಸಿದ್ದು ''ಇದೊಂದು ರಾಜಕೀಯ ಪ್ರೇರಿತ ಆರೋಪ. ಆಕೆ ಇದೆಲ್ಲ ಹೇಳುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ನಾವು ಹಳೆಯ ಸ್ನೇಹಿತರು. ಅಂದು ನನ್ನು ಆಫೀಸ್ ನಿಂದ ಹೋದ್ಮೇಲೆ 'ನಾನು ನಿಮ್ಮ ಜೊತೆ ಕೆಲಸ ಮಾಡಲು ಕಾತುರದಿಂದ ಕಾಯುತ್ತಿದ್ದೇನೆ' ಎಂದು ಸಂದೇಶ ಕಳುಹಿಸಿದ್ದರು. ಆ ಮೆಸೆಜ್ ಇಂದಿಗೂ ನನ್ನ ಬಳಿ ಇದೆ. ನಾನು ಅದನ್ನು ತೋರಿಸಬಲ್ಲೆ. ಒಂದು ವೇಳೆ ನಾನು ಆಕೆಯ ಬಳಿ ಅಸಭ್ಯವಾಗಿ ವರ್ತಿಸಿದ್ದರೇ ಆಗಿದ್ದರೇ ನನ್ನೊಂದಿಗೆ ಯಾಕೆ ಮೆಸೆಜ್ ಮಾಡುತ್ತಿದ್ದಳು'' ಎಂದು ಪ್ರಶ್ನಿಸಿದ್ದಾರೆ. ಹರ್ ಹರ್ ಬಯೋಮಕೇಶ್, ಈಗಲರ್ ಚೋಕ್, ದುರ್ಗಾ ಸೊಹೇ ಮತ್ತು ಇತ್ತೀಚಿಗೆ ಮಿಟಿನ್ ಮಾಶಿ ಎಂಬ ಸಿನಿಮಾಗಳನ್ನು ಅರಿಂದಂ ಸೀಲ್ ಮಾಡಿದ್ದರು.


Click it and Unblock the Notifications











