ಶಿವಣ್ಣ ಮತ್ತು ಉಪೇಂದ್ರ ಜೊತೆಯೇ ಬರ್ತಿದ್ದಾರೆ ಚಿರು ಸರ್ಜಾ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಟ್ಟಿಗೆ ಚಿತ್ರಮಂದಿರಕ್ಕೆ ಬರ್ತಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ 'ರುಸ್ತುಂ' ಸಿನಿಮಾ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಐ ಲವ್ ಯೂ' ಸಿನಿಮಾ ಒಂದೆ ದಿನ ತೆರೆಗೆ ಬರುತ್ತಿದೆ.
ವಿಶೇಷ ಅಂದ್ರೆ ಅದೇ ದಿನ ಮತ್ತೋರ್ವ ನಟ ಚಿರಂಜೀವಿ ಸರ್ಜಾ ಅಭಿನಯದ 'ಸಿಂಗ' ಸಿನಿಮಾ ಕೂಡ ತೆರೆಗೆ ಬರುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈಗಾಗಲೆ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ 'ಸಿಂಗ' ಜೂನ್ 14ಕ್ಕೆ ರಿಲೀಸ್ ಮಾಡುವ ಪ್ಲಾನ್ ಮಾಡಲಾಗಿದೆಯಂತೆ.
'ಅಮ್ಮ ಐ ಲವ್ ಯೂ' ಸಿನಿಮಾದ ನಂತರ ಚಿರು 'ಸಿಂಗ' ಚಿತ್ರದ ಮೂಲಕ ತೆರೆಮೇಲೆ ಬರುತ್ತಿದ್ದಾರೆ. ಆಕ್ಷನ್, ಲವ್ ಜೊತೆಗೆ ಅಮ್ಮ ಮಗನ ಸೆಂಟಿಮೆಂಟ್ ಈ ಚಿತ್ರದ ಹೈಲೆಟ್. ಈಗಾಗಲೆ ತಾಯಂದಿರ ದಿನಾಚರಣೆ ಪ್ರಯುಕ್ತ ಅಮ್ಮ ಮತ್ತು ಮಗನ ನಡುವಿನ ಒಂದು ಹಾಡನ್ನು ರಿಲೀಸ್ ಮಾಡಲಾಗಿದೆ. ಚಿರು ಸರ್ಜಾಗೆ ತಾಯಿಯಾಗಿ ನಟಿ ತಾರಾ ಕಾಣಿಸಿಕೊಂಡಿದ್ದಾರೆ.

ವಿಜಯ್ ಕಿರಣ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿಂಗ' ಚಿತ್ರಕ್ಕೆ ನಿರ್ಮಾಪಕ ಉದಯ್ ಕೆ ಮೆಹ್ತಾ ಬಂಡವಾಳ ಹೂಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ 'ಸಿಂಗ', 'ರುಸ್ತುಂ' ಮತ್ತು 'ಐ ಲವ್ ಯೂ' ಸಿನಿಮಾ ಜೊತೆಯೆ ಎಂಟ್ರಿ ಕೊಡುವ ಸಾಧ್ಯತೆ ಇದೆ. ಒಂದು ವೇಳೆ ಚಿತ್ರತಂಡದ ಪ್ಲಾನ್ ಪ್ರಕಾರವೆ ಚಿತ್ರ ಜೂನ್ 14ಕ್ಕೆ ತೆರೆಗೆ ಬಂದರೆ, ಮುಂದಿನ ತಿಂಗಳು ಬಾಕ್ಸ್ ಆಫೀಸ್ ವಾರ್ ಪಕ್ಕ ಅಂತಿದೆ ಗಾಂಧಿನಗರ. ಈ ಮೂರು ಸಿನಿಮಾಗಳು ಚಿತ್ರಾಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ ಸಿನಿಮಾಗಳಿವೆ. ಹಾಗಾಗಿ ಚಿತ್ರಾಭಿಮಾನಿಗಳಿಗೆ ಜೂನ್ 14 ತುಂಬಾನೆ ವಿಶೇಷವಾದ ದಿನವಾಗಿದೆ.


Click it and Unblock the Notifications











