'ರುಸ್ತಂ'ಗೆ ಸಿಕ್ತು ಭರ್ಜರಿ ರೆಸ್ಪಾನ್ಸ್, ಯೂಟ್ಯೂಬ್ ನಲ್ಲಿ ಸಖತ್ ಸದ್ದು
ಸ್ಯಾಂಡಲ್ ವುಡ್ ನಲ್ಲಿ ಸದ್ಯ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ 'ರುಸ್ತುಂ' ಚಿತ್ರದ ಟೈಲ್ರರ್ ದೇ ಹವಾ. ಇತ್ತೀಚಿಗಷ್ಟೆ ರಿಲೀಸ್ ಆಗಿದ್ದ ಬಹು ನಿರೀಕ್ಷೆಯ 'ರುಸ್ತುಂ' ಟ್ರೈಲರ್ ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡು ಟ್ರೆಂಡಿಂಗ್ ನಲ್ಲಿದೆ. 'ರುಸ್ತುಂ'ನಲ್ಲಿ ಸೆಂಚುರಿ ಸ್ಟಾರ್ ಖಾಕಿ ತೊಟ್ಟು ಖದರ್ ತೋರಿಸಿದ್ದಾರೆ.
ಈಗಾಗಲೆ ಟ್ರೈಲರ್ 1.5 ಮಿಲಿಯನ್ ವೀಕ್ಷಣೆ ಕಂಡಿದೆ. ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ನಲ್ಲಿದೆ. 'ರುಸ್ತುಂ' ಸಾಹಸ ನಿರ್ದೇಶಕ ರವಿವರ್ಮ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. 'ರುಸ್ತುಂ' ರವಿವರ್ಮ ನಿರ್ದೇಶನದ ಚೊಚ್ಚಲ ಸಿನಿಮಾ. ಮೊದಲ ಸಿನಿಮಾದಲ್ಲೇ ಟ್ರೈಲರ್ ಮೂಲಕ ಬರವಸೆ ಮೂಡಿಸಿದ್ದಾರೆ. ಅಂದ್ಹಾಗೆ 'ರುಸ್ತುಂ' ಪಕ್ಕಾ ಆಕ್ಷನ್ ಸಿನಿಮಾ. ಟ್ರೈಲರ್ ನಲ್ಲಿ ಹೊಡಿ ಬಡಿ ದೃಶ್ಯಗಳೆ ಹೈಲೆಟ್ಸ್ ಆಗಿದೆ.
ಇನ್ನು ವಿಶೇಷ ಅಂದ್ರೆ ಶಿವಣ್ಣ ಪಂಚಿಂಗ್ ಡೈಲಾಗ್ ಗಳು ಅಭಿಮಾನಿಗಳಿಗೆ ಕಿಕ್ ಏರಿಸುತ್ತಿವೆ. "ಅರೆಸ್ಟ್ ಅಂದ್ರೆ ಅಲರ್ಜಿ, ಎನ್ ಕೌಂಟರ್ ಅಂದ್ರೆ ಎನರ್ಜಿ" ಎಂದು ಶಿವಣ್ಣ ಹೊಡೆಯುವ ಡೈಲಾಡ್ ಸಖತ್ ಟ್ರೆಂಡ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಓಬೆರಾಯ್ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿರುವ ಕನ್ನಡದ ಅಳಿಯ ಪೊಲೀಸ್ ಪಾತ್ರದಲ್ಲಿ ಮಿಂಚಿದ್ದಾರೆ.

ಈ ಹಿಂದೆ ರಿಲೀಸ್ ಆಗಿದ್ದ ಶಿವಣ್ಣ ಅಭಿನಯದ 'ಟಗರು' ಚಿತ್ರದಲ್ಲೂ ಹ್ಯಾಟ್ರಿಕ್ ಹೀರೊ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೆ ಖಾಕಿ ಧರಿಸಿ ಪೊಲೀಸ್ ಆಫೀಸರ್ ಆಗಿರುವ ಶಿವಣ್ಣ ಗನ್ ಜೊತೆಗೆ ಲಾಂಗ್ ಕೂಡ ಹಿಡಿದಿದ್ದಾರೆ. ಇನ್ನು ಶಿವರಾಜ್ ಕುಮಾರ್ ಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ನಟಿ ಮಯೂರಿ ಕೂಡ ಬಣ್ಣ ಹಚ್ಚಿದ್ದಾರೆ. ಸಾಕಷ್ಟು ವಿಶೇಷತೆಗಳಿಂದ ಗಮನ ಸೆಳೆಯುತ್ತಿರುವ 'ರುಸ್ತುಂ' ಟ್ರೈಲರ್ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದುಕೊಳ್ಳುತ್ತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ.


Click it and Unblock the Notifications











