Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಒಟ್ಟಿಗೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡ್ತಿದ್ದಾರೆ ಶಿವರಾಜ್ ಕುಮಾರ್ ಮತ್ತು ಉಪೇಂದ್ರ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಒಟ್ಟಿಗೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.12 ವರ್ಷದ ನಂತರ ಈ ಜೋಡಿ ಒಟ್ಟಿಗೆ ಬರುತ್ತಿದ್ದಾರೆ. ಇಬ್ಬರು ಸ್ಟಾರ್ ನಟರು ಒಟ್ಟಿಗೆ ಎಂಟ್ರಿ ಕೊಡ್ತಿದ್ದಾರೆ ಅಂತ ಅಭಿಮಾನಿಗಳು ಸಂತಸ ಪಡುವಂತಿಲ್ಲ. ಯಾಕಂದ್ರೆ ಈ ಬಾರಿ ಬೇರೆ ಬೇರೆ ಸಿನಿಮಾ ಮೂಲಕ ಒಂದೆ ದಿನ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
'ಪ್ರೀತ್ಸೆ' ಮತ್ತು 'ಲವ ಕುಶ' ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದ ಈ ಜೋಡಿ ನಂತರ ಮತ್ತೆ ಒಂದಾಗಿರಲ್ಲಿಲ್ಲ. ಆದ್ರೀಗ ಒಂದೇ ದಿನ ಬರ್ತಿದ್ದಾರೆ. ಅಂದ್ಹಾಗೆ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ 'ರುಸ್ತುಂ' ಸಿನಿಮಾ ಮತ್ತು ಉಪೇಂದ್ರ ಅಭಿನಯದ 'ಐ ಲವ್ ಯೂ' ಸಿನಿಮಾ ಒಂದೇ ದಿನ ತರೆಗೆ ಬರುತ್ತಿದೆ.
ಕಾಲೇಜಿನಲ್ಲಿ ಓದುತ್ತಿದ್ದಾಗಲೇ 'ಆ ನಟ'ನ ಅಭಿಮಾನಿಯಂತೆ ಪ್ರೇಮಾ
ಈಗಾಗಲೆ ರಿಯಲ್ ಸ್ಟಾರ್ ಅಭಿನಯದ ಐ ಲವ್ ಯು ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದರೆ ಜೊತೆಗೆ 'ರುಸ್ತುಂ' ಕೂಡ ತೆರೆಗೆ ಬರಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಮುಂದೆ ಓದಿ..

ಜೂನ್ ನಲ್ಲಿ ಒಟ್ಟಿಗೆ ಬರ್ತಿದ್ದಾರೆ ಶಿವಣ್ಣ-ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಐ ಲವ್ ಯೂ' ಸಿನಿಮಾ ಜೂನ್ 14ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಅದೇ ದಿನ ಜೂನ್ 14ಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಸಿನಿಮಾ ಕೂಡ ತೆರೆಗೆ ಬರಲು ರೆಡಿಯಾಗಿದೆಯಂತೆ. ಈ ಬಗ್ಗೆ ಅಧಿಕೃತವಾಗಿ ಚಿತ್ರತಂಡ ಇನ್ನು ಅನೌನ್ಸ್ ಮಾಡಿಲ್ಲ. ಆದ್ರೆ ಜೂನ್ 14ಕ್ಕೆ ರಿಲೀಸ್ 'ರುಸ್ತುಂ' ರಿಲೀಸ್ ಆಗುವುದು ಪಕ್ಕಾ ಅಂತಿವೆ ಮೂಲಗಳು.
ಕನ್ನಡಕ್ಕೆ ಡಬ್ ಆಗಿದ್ದ ತಮಿಳು ಸಿನಿಮಾ ರಿಮೇಕ್ ನಲ್ಲಿ ಶಿವರಾಜ್ ಕುಮಾರ್?

ಲವ ಕುಶ ನಂತರ ಒಟ್ಟಿಗೆ ಬರುತ್ತಿದ್ದಾರೆ
2000ರಲ್ಲಿ ತೆರೆ ಕಂಡ ಸೂಪರ್ ಹಿಟ್ 'ಪ್ರೀತ್ಸೆ' ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಸಿನಿಮಾ 'ಪ್ರೀತ್ಸೆ'. ಬಾಲಿವುಡ್ ನ 'ಢರ್' ಸಿನಿಮಾದ ರಿಮೇಕ್ ಪ್ರೀತ್ಸೆ. ಚಿತ್ರದಲ್ಲಿ ಸೂರ್ಯ-ಚಂದ್ರರಾಗಿ ಮಿಂಚಿದ್ದರು ಶಿವಣ್ಣ ಮತ್ತು ಉಪ್ಪಿ. ಆ ನಂತರ ಈ ಜೋಡಿ ಲವ ಕುಶ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ನಂತರ ಇಬ್ಬರನ್ನು ಒಟ್ಟಿಗೆ ತೆರೆಮೇಲೆ ನೋಡುವ ಭಾಗ್ಯ ಅಭಿಮಾನಿಗಳಿಗೆ ಬಂದಿಲ್ಲ. ಆದ್ರೀಗ 12 ವರ್ಷದ ನಂತರ ಇಬ್ಬರನ್ನು ಒಂದೇ ದಿನ ಚಿತ್ರಮಂದಿರದಲ್ಲಿ ನೋಡುವ ಅವಕಾಶ ದೊರಕಿದೆ.

ಎರಡು ವರ್ಷದ ನಂತರ ತೆರೆಮೇಲೆ ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳ ಮುಂದೆ ಬರದೆ ಸುಮಾರು ಎರಡು ವರ್ಷಗಳೆ ಆಗಿವೆ. ಈಗ 'ಐ ಲವ್ ಯೂ' ಸಿನಿಮಾ ಮೂಲಕ ಜೂನ್ 14ಕ್ಕೆ ಚಿತ್ರಮಂದಿರಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಸುಮಾರು ವರ್ಷದಿಂದ ಪ್ರಜಾಕೀಯದಲ್ಲಿ ಬ್ಯುಸಿ ಇದ್ದ ಉಪೇಂದ್ರ ಈಗ 'ಐ ಲವ್ ಯೂ' ಅಂತ ಹೇಳುತ್ತಿದ್ದಾರೆ. ಆರ್ ಚಂದ್ರು ನಿರ್ದಶನದಲ್ಲಿ ಮೂಡಿ ಬಂದಿರುವ ಐ ಲವ್ ಯೂ' ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಕರುನಾಡ ಚಕ್ರವರ್ತಿ, ಅಭಿನಯ ಚಕ್ರವರ್ತಿ ಬಳಿಕ ಮತ್ತೊಬ್ಬ 'ಚಕ್ರವರ್ತಿ'!

ರವಿ ವರ್ಮ ನಿರ್ದೇಶನದ ಮೊದಲ ಸಿನಿಮಾ
'ರುಸ್ತುಂ' ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ಮೊದಲ ಸಿನಿಮಾ. ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಖಾಕಿ ತೊಟ್ಟು ಖದರ್ ತೋರಿಸಿದ್ದಾರೆ. ವಿಶೇಷ ಅಂದ್ರೆ ಬಾಲಿವುಡ್ ನಟ ವಿವೇಕ್ ಓಬೆರಾಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೆ ಟ್ರೈಲರ್ ಮೂಲಕ ಸದ್ದು ಮಾಡುತ್ತಿರುವ 'ರುಸ್ತುಂ' ಜುನ್ 14ಕ್ಕೆ ತೆರೆಗೆ ಬರಲು ಸಜ್ಜಾಗಿದೆ. ಅಂದ್ಹಾಗೆ ಚಿತ್ರದಲ್ಲಿ ಶಿವಣ್ಣಿಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಳ್ಳುತ್ತಿದ್ದಾರೆ.

ಜೂನ್ 14 ರಚಿತಾ ರಾಮ್ ಗೆ ವಿಶೇಷ ದಿನ
ಜೂನ್ 14 ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ತುಂಬಾ ವಿಶೇಷವಾದ ದಿನ. ಯಾಕಂದ್ರೆ ರಚಿತಾ ಅಭಿನಯದ 'ಐ ಲವ್ ಯೂ' ಸಿನಿಮಾ ರಿಲೀಸ್ ಆಗುತ್ತಿದೆ. ಜೊತೆಗೆ 'ರುಸ್ತುಂ' ಸಿನಿಮಾದಲ್ಲೂ ರಚ್ಚು ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ. ಎರಡು ಸಿನಿಮಾಗಳು ಒಂದೆ ದಿನ ತೆರೆಗೆ ಬರುತ್ತಿರುವುದು ರಚಿತಾ ಅಭಿಮಾನಿಗಳಿಗೆ ಸಂತಸದ ವಿಚಾರ.