'ರುಸ್ತುಂ' ಸಿನಿಮಾದ ಟ್ರೇಲರ್ ನೋಡುವ ಸಮಯ ಬಂತು
ಶಿವರಾಜ್ ಕುಮಾರ್ ನಟನೆಯ ಮುಂದಿನ ಸಿನಿಮಾಗಳ ಪೈಕಿ ಬಹಳ ಕುತೂಹಲ ಹುಟ್ಟಿಸಿರುವ ಚಿತ್ರ 'ರುಸ್ತುಂ'. ಈ ಸಿನಿಮಾದ ಟ್ರೇಲರ್ ನೋಡುವ ಸಮಯ ಈಗ ಬಂದಿದೆ.
'ರುಸ್ತುಂ' ಸಿನಿಮಾದ ಟ್ರೇಲರ್ ಏಪ್ರಿಲ್ 14 ಅಂದರೆ ಇದೇ ಭಾನುವಾರ ಬಿಡುಗಡೆಯಾಗುತ್ತಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಟ್ರೇಲರ್ ಅನ್ನು ನೋಡಬಹುದಾಗಿದೆ. ಈ ವಾರಾಂತ್ಯ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಟ್ರೇಲರ್ ಉಡುಗೊರೆಯಾಗಿ ಸಿಗಲಿದೆ.
ಚಿತ್ರದಲ್ಲಿ ಶಿವರಾಜ್ ಕುಮಾರ್ ಲುಕ್ ಗಮನ ಸೆಳೆದಿದೆ. ಮೇಕಿಂಗ್ ಫೋಟೋಗಳಲ್ಲಿ ಶಿವಣ್ಣ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಟ್ರೇಲರ್ ಮೇಲೆ ನಿರೀಕ್ಷೆ ಇದೆ.

ಶಿವರಾಜ್ ಕುಮಾರ್ ಗೆ ಜೋಡಿಯಾಗಿ ಶ್ರದ್ಧಾ ಶ್ರೀನಾಥ್ ಹಾಗೂ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಮಯೂರಿ ಸಹ ಚಿತ್ರದಲ್ಲಿ ಇದ್ದಾರೆ.
ಈ ಚಿತ್ರವನ್ನು ರವಿವರ್ಮ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ನಿರ್ದೇಶನದ ಸಿನಿಮಾವಾಗಿದೆ. ಜಯಣ್ಣ ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಅನೂಪ್ ಸಿಳಿನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
More from Filmibeat
English summary
Actor Shiva Rajkumar and Shraddha Srinath's 'Rustum' kannada movie railer will be releasing on april 14th. The movie is directed by Ravi Varma producing by Jayanna combines.


Click it and Unblock the Notifications











