twitter
    For Quick Alerts
    ALLOW NOTIFICATIONS  
    For Daily Alerts

    ಎಂಜಿನಿಯರ್ ಆಗುವ ಕನಸುಕಂಡಿದ್ದ SPB ಅವರನ್ನು ಗಾಯಕರನ್ನಾಗಿ ಮಾಡಿದ್ದು ಎಸ್.ಜಾನಕಿ

    |

    16 ಭಾಷೆ, 40 ಸಾವಿರಕ್ಕು ಅಧಿಕ ಹಾಡುಗಳು, ಮೂರು ತಲೆಮಾರು, ಅನೇಕ ಪ್ರಶಸ್ತಿಗಳು, ಆಪಾರ ಗೌರವ 74 ವರ್ಷದಲ್ಲಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಗಳಿಸಿದ ಸಂಪಾದನೆ ಇದು. ಅದ್ಭುತ ಗಾಯನದ ಜೊತೆಗೆ ಉತ್ತಮ ವ್ಯಕ್ತಿತ್ವದ ಮೂಲಕ ಎಸ್ ಪಿ ಬಿ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ.

    ಎಸ್ ಪಿ ಬಿ ಇನ್ನಿಲ್ಲ ಎನ್ನುವ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಅವರ ಹಾಡುಗಳ ಮೂಲಕ ಇಂದು, ನಾಳೆ ಎಂದೆಂದಿಗೂ ಜನಮಾನಸದಲ್ಲಿ ಜೀವಂತವಾಗಿರುತ್ತಾರೆ. ಎಸ್ ಪಿ ಬಿ ಗಾಯಕರಾಗಬೇಕೆಂದು ಯಾವತ್ತು ಅಂದುಕೊಂಡವರಲ್ಲ. ಎಂಜಿನಿಯರ್ ಆಗಬೇಕು ಎನ್ನುವ ದೊಡ್ಡ ಕನಸು ಇಟ್ಟುಕೊಂಡವರು. ಆದರೆ ಎಸ್ ಪಿ ಬಿ ಅವರನ್ನು ಗಾಯಕರನ್ನಾಗಿ ಮಾಡಿದ ಕೀರ್ತಿ ಖ್ಯಾತ ಗಾಯಕಿ ಎಸ್ ಜಾನಕಿ ಅವರಿಗೆ ಸಲ್ಲುತ್ತದೆ. ಮುಂದೆ ಓದಿ..

    ಎಸ್‌ಪಿ ಬಾಲಸುಬ್ರಹ್ಮಣ್ಯಂ ಬಗ್ಗೆ ಹೆಚ್ಚು ಮಂದಿಗೆ ಗೊತ್ತಿರದ ಸಂಗತಿಗಳುಎಸ್‌ಪಿ ಬಾಲಸುಬ್ರಹ್ಮಣ್ಯಂ ಬಗ್ಗೆ ಹೆಚ್ಚು ಮಂದಿಗೆ ಗೊತ್ತಿರದ ಸಂಗತಿಗಳು

    ಜಾನಕಿ ಅವರಿಗೆ ಧನ್ಯವಾದ ತಿಳಿಸಿದ್ದ ಎಸ್ ಪಿ ಬಿ

    ಜಾನಕಿ ಅವರಿಗೆ ಧನ್ಯವಾದ ತಿಳಿಸಿದ್ದ ಎಸ್ ಪಿ ಬಿ

    ಈ ಬಗ್ಗೆ ಸಂದರ್ಶವೊಂದರಲ್ಲಿ ಮಾತನಾಡಿರುವ ಎಸ್ ಪಿ ಬಿ 'ನಾನು ಜಾನಕಿ ಅವರಿಗೆ ಧನ್ಯವಾಗಳನ್ನು ಹೇಳುತ್ತೇನೆ. ನಾನು ಯಾವತ್ತು ಗಾಯಕನಾಗಬೇಕೆಂದು ಕನಸು ಕಂಡಿಲ್ಲ. ಎಂಜಿನಿಯರ್ ಆಗಬೇಕೆಂದು ಬಯಸಿದ್ದೆ. ಆದರೆ ಜಾನಕಿ ಅವರು ಗಾಯಕರನ್ನಾಗಿ ಮಾಡಿದರು' ಎಂದು ಹೇಳಿದ್ದಾರೆ.

    ಎಸ್ ಪಿ ಬಿ ಬಗ್ಗೆ ಹಂಸಲೇಖ ಬಾವುಕ ಮಾತು

    ಎಸ್ ಪಿ ಬಿ ಬಗ್ಗೆ ಹಂಸಲೇಖ ಬಾವುಕ ಮಾತು

    ಈ ಬಗ್ಗೆ ನಾದಬ್ರಹ್ಮ ಹಂಸಲೇಖ ಸಹ ಮಾತನಾಡಿದ್ದಾರೆ. ಎಸ್ ಪಿ ಬಿ ನಿಧನದ ಸುದ್ದಿ ಕೇಳಿ ಆಘಾತಗೊಂಡಿರುವ ಹಂಸಲೇಖ ಅವರು ಎಸ್ ಪಿ ಬಿ ಜೊತೆಗಿನ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ ಎಸ್ ಪಿ ಬಿ ಮತ್ತು ಜಾನಕಿ ಅವರ ಬಾಂಧವ್ಯದ ಬಗ್ಗೆಯೂ ವಿವಿರಿಸಿದ್ದಾರೆ.

    ಎಸ್ ಪಿ ಬಿಯನ್ನು ಗುರುತಿಸಿದ್ದು ಎಸ್ ಜಾನಕಿ

    ಎಸ್ ಪಿ ಬಿಯನ್ನು ಗುರುತಿಸಿದ್ದು ಎಸ್ ಜಾನಕಿ

    ಇಂದು ಈ ಸುದ್ದಿ ಕೇಳಿ ಜಾನಕಿತಾಯಿ ಎಷ್ಟು ಕಣ್ಣೀರಿಡುತ್ತಿದ್ದಾರೊ ಗೊತ್ತಿಲ್ಲ. ಅವರ ನೋವಿನ ಮುಂದೆ ನಮ್ಮ ನೋವು ಏನಲ್ಲ ಎಂದು ಹಂಸಲೇಖ ಹೇಳಿದ್ದಾರೆ. ಎಸ್ ಪಿ ಬಿ ಅವರನ್ನು ಮೊದಲು ಗುರುತಿಸಿದ್ದು ಎಸ್ ಜಾನಕಿ ಅವರು ಎಂದಿದ್ದಾರೆ. "ಹೈದರಾಬಾದ್ ನ ಯಾವುದೊ ಹಾಡಿನ ಸ್ಪರ್ಧೆಯಲ್ಲಿ ಮಹೇಂದ್ರ ಕಪೂರ್ ಎನ್ನುವ ಗಾಯಕ ಮೊದಲ ಸ್ಥಾನ ಪಡೆದರು. ಎಸ್ ಪಿ ಬಿ 2 ಅಥವಾ 3ನೇ ಸ್ಥಾನ ಪಡೆಯುತ್ತಾರೆ. ಆ ಶೋನಲ್ಲಿ ಜಾನಕಿ ಅವರು ಜಡ್ಜ್ ಆಗಿದ್ದರು."

    ಅವರ ಕಣ್ಣ ಮುಂದೆ ಸಾವನ್ನು ನೋಡಬೇಕಾಯಿತು

    ಅವರ ಕಣ್ಣ ಮುಂದೆ ಸಾವನ್ನು ನೋಡಬೇಕಾಯಿತು

    "ಆದರೆ ನಂ,1 ಆದರವನ್ನು ಬಿಟ್ಟು ಜಾನಕಿ ಅವರು ನಂತರದ ಸ್ಥಾನ ಪಡೆದವರನ್ನು ಕರೆದು ಅವಕಾಶ ಕೊಡೋಣ ಎಂದು ಎಸ್ ಪಿ ಬಿಯನ್ನು ಕರೆದು ಅವರಿಗೆ ಹಾಡುವ ಎಲ್ಲಾ ಅನುಕೂಲ ಮಾಡಿಕೊಟ್ಟು, ವೇದಿಕೆಗೆ ಕರೆದುಕೊಂಡು ಬಂದರು. ಕಣ್ಣೆದಿರು ಬೆಳೆದು, ಬೆನ್ನುತಟ್ಟಿದ ಹುಡುಗ ಎತ್ತರಕ್ಕೆ ಬೆಳೆದಿದ್ದನ್ನು ನೋಡಿದರು, ಚರಿತ್ರೆ ಆದರು, ಅದನ್ನು ಮೀರಿದ್ರು ಆದರೀಗ ಅವರ ಸಾವನ್ನು ಕಣ್ಣೆದುರು ನೋಡಬೇಕಾಯಿತು" ಎಂದು ಹಂಸಲೇಖ ಹೇಳಿದ್ದಾರೆ.

    Recommended Video

    SP Balasubramanyam : ಇದು SPB ಹಾಡಿದ ಕೊನೆಯ ಹಾಡು | Oneindia Filmibeat
    ಎಸ್ ಪಿ ಬಿ-ಎಸ್ ಜಾನಕಿ ಕಾಂಬಿನೇಷನ ಹಾಡುಗಳು ಸೂಪರ್ ಹಿಟ್

    ಎಸ್ ಪಿ ಬಿ-ಎಸ್ ಜಾನಕಿ ಕಾಂಬಿನೇಷನ ಹಾಡುಗಳು ಸೂಪರ್ ಹಿಟ್

    ಎಸ್ ಪಿ ಬಿ ಮತ್ತು ಎಸ್ ಜಾನಕಿ ಅವರ ಕಾಂಬಿನೇಷನ್ ಹಾಡುಗಳು ಸೂಪರ್ ಹಿಟ್ ಆಗಿವೆ. ಇಬ್ಬರು ಒಟ್ಟಿಗೆ ಅನೇಕ ಹಾಡುಗಳನ್ನು ಹಾಡಿದ್ದಾರೆ. ಜಾನಕಿ ಅವರ ಬಗ್ಗೆ ಎಸ್ ಪಿ ಬಿಗೆ ವಿಶೇಷವಾದ ಗೌರವ. ಇತ್ತೀಚಿಗೆ ಎಸ್ ಜಾನಕಿ ಆಸ್ಪತ್ರೆಗೆ ದಾಖಲಾದಾಗಲು ಜಾನಕಿ ಅವರ ಆರೋಗ್ಯದ ಬಗ್ಗೆ ಹರಿದಾಡುತ್ತಿದ್ದ ವದಂತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಜಾನಕಿ ಅವರು ಮಗನಂತೆ ನೋಡಿಕೊಂಡಿದ್ದಾರೆ ಎಂದು ಎಸ್ ಪಿ ಬಿ ಹೇಳುತ್ತಿದ್ದರು.

    English summary
    SP Balasubramanyam Passes Away: S Janaki Gave First Singing Chance to SP Balasubrahmanyam.
    Saturday, September 26, 2020, 9:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X