twitter
    For Quick Alerts
    ALLOW NOTIFICATIONS  
    For Daily Alerts

    ಅಮೆರಿಕಾಗೆ ಹೋಗದೇ 'ಕಾಂತಾರ'ಕ್ಕೆ ಬಂದಿದ್ಯಾಕೆ ನಟಿ ಸಪ್ತಮಿ ಗೌಡ? ಅಪ್ಪ ಬಿಚ್ಚಿಟ್ಟ ಸತ್ಯ ಏನು?

    |

    ಭಾರತೀಯ ಚಿತ್ರರಂಗದಲ್ಲೀಗ 'ಕಾಂತಾರ' ಚಿತ್ರದ್ದೇ ಚರ್ಚೆ ಜೋರಾಗಿದೆ. ಪರಭಾಷಿಕರು ಕೂಡ ರಿಷಬ್ ಶೆಟ್ಟಿ ಸಿನಿಮಾ ಬಗ್ಗೆಯೇ ಮಾತನಾಡುತ್ತಿದ್ದಾರೆ. ಕಳೆದ 3 ವಾರಗಳಲ್ಲಿ ಬಿಡುಗಡೆಯಾದ ಬೇರೆಲ್ಲಾ ಸಿನಿಮಾಗಳನ್ನು ಹಿಂದಿಕ್ಕಿ ಸಿನಿಮಾ ಸದ್ದು ಮಾಡ್ತಿದೆ. ಎಲ್ಲಾ ವಿಭಾಗದಲ್ಲೂ ಸಿನಿಮಾ ಸೂಪರ್ ಎನಿಸಿಕೊಂಡಿದೆ. ನಟನೆಯಲ್ಲಿ ರಿಷಬ್ ಶೆಟ್ಟಿ ಅಬ್ಬರಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಗಮನ ಸೆಳೆದಿದ್ದಾರೆ.

    ನಿರ್ದೇಶಕ, ನಟ ರಿಷಬ್ ಶೆಟ್ಟಿ ತಮ್ಮ ಕಥೆಗೆ ಒಪ್ಪುವಂತಹ ಕಲಾವಿದರನ್ನೇ ಆಯ್ಕೆ ಮಾಡಿಕೊಂಡು ಗೆದ್ದಿದ್ದಾರೆ. ಕಿಶೋರ್, ಅಚ್ಯುತ್‌ಕುಮಾರ್ ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರಗಳನ್ನು ಸೊಗಸಾಗಿ ನಿಭಾಯಿಸಿದ್ದಾರೆ. ಇನ್ನು ನಾಯಕಿ ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಅಭಿನಯವೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುತ್ತದೆ. ಆಡಿಷನ್ ಮಾಡಿ ರಿಷಬ್ ಶೆಟ್ಟಿ ಈ ಪಾತ್ರಕ್ಕೆ ಸಪ್ತಮಿ ಗೌಡ ಅವರನ್ನು ಆಯ್ಕೆ ಮಾಡಿದ್ದರು. ಸಿಕ್ಕ ಅವಕಾಶವನ್ನು ಆಕೆ ಉತ್ತಮವಾಗಿ ಬಳಸಿಕೊಂಡಿದ್ದು, ಶಿವನಿಗೆ ತಕ್ಕ ಲೀಲಾ ಆಗಿ ಮೋಡಿ ಮಾಡಿದ್ದಾರೆ. ಫಾರೆಸ್ಟ್ ಗಾರ್ಡ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

    ರಿಷಬ್ ಶೆಟ್ಟಿಯ 'ರುದ್ರ ಪ್ರಯಾಗ' ಸಿನಿಮಾ ಏನಾಯ್ತು? ಮತ್ತೆ ಶುರುವಾಗುತ್ತಾ?ರಿಷಬ್ ಶೆಟ್ಟಿಯ 'ರುದ್ರ ಪ್ರಯಾಗ' ಸಿನಿಮಾ ಏನಾಯ್ತು? ಮತ್ತೆ ಶುರುವಾಗುತ್ತಾ?

    ಲಾಕ್‌ಡೌನ್ ಆಗದೇ ಹೋಗಿದ್ದರೆ ಸಪ್ತಮಿ ಗೌಡ ಈಗ ಅಮೆರಿಕಾದಲ್ಲಿ ಇರುತ್ತಿದ್ದರು. 'ಕಾಂತಾರ' ಚಿತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿರಲಿಲ್ಲ ಎನಿಸುತ್ತದೆ. ಹೌದು ಈ ವಿಚಾರವನ್ನು ಖುದ್ದು ಸಪ್ತಮಿ ಗೌಡ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ ಉಮೇಶ್ ಹೇಳಿದ್ದಾರೆ. ಮಗಳು ಚಿತ್ರರಂಗಕ್ಕೆ ಬಂದಿದ್ದೇಗೆ? ಈ ಚಿತ್ರಕ್ಕೆ ಆಯ್ಕೆ ಆಗಿದ್ದು ಹೇಗೆ? ಎನ್ನುವುದನ್ನು ಗೌರೀಶ್ ಅಕ್ಕಿ ಸ್ಟುಡಿಯೋ ಯೂಟ್ಯೂಬ್‌ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

    ಲೀಲಾ ಪಾತ್ರಕ್ಕೆ ಸಪ್ತಮಿ ಆಯ್ಕೆ ಆಗಿದ್ದು

    ಲೀಲಾ ಪಾತ್ರಕ್ಕೆ ಸಪ್ತಮಿ ಆಯ್ಕೆ ಆಗಿದ್ದು

    'ಕಾಂತಾರ' ಚಿತ್ರಕ್ಕೆ ಮಗಳು ಸಪ್ತಮಿ ಗೌಡ ಆಯ್ಕೆ ಆಗಿದ್ದು ಹೇಗೆ ಎನ್ನುವುದನ್ನು ಎಸ್.ಕೆ ಉಮೇಶ್ ಹೇಳಿದ್ದಾರೆ. "ಈ ವಿಷಯದ ಬಗ್ಗೆ ನನಗೇನು ಗೊತ್ತಿರಲಿಲ್ಲ. ಚಿತ್ರತಂಡದವರೇ ಕರೆಸಿ ಮಾತನಾಡಿಸಿದ್ದಾರೆ. ನಂತರ ನನ್ನ ಪತ್ನಿ ಹೇಳಿದ್ಲು, ಈ ರೀತಿ ಕರಿತ್ತಿದ್ದಾರೆ, ರಾಜರಾಜೇಶ್ವರಿ ನಗರದಲ್ಲಿ ಆಫೀಸ್‌ ಎಂದರು. ಹೋಗಿ ಬರೋಕೆ ಹೇಳಿದೆ. ಲುಕ್ ಟೆಸ್ಟ್ ಎಲ್ಲಾ ಆಗಿತ್ತು. ನಂತರ ಒಂದು ದಿನ ಕುಂದಾಪುರದಲ್ಲಿ ಮುಹೂರ್ತ ಮಾಡಿದ್ದರು. ಅಂದು ಚಿತ್ರದ ನಾಯಕಿ ಸಪ್ತಮಿ ಗೌಡ ಎಂದು ಘೋಷಿಸಿದರು."

    'ಕಾಂತಾರ' ನೋಡಿ ರಿಪೋರ್ಟರ್ ರೀತಿ ಪ್ರೇಕ್ಷಕರ ರಿವ್ಯೂ ಕೇಳಿದ ನಟಿ: ಇದು ತುಳುನಾಡಿದ ಹೆಮ್ಮೆ ಎಂದ ಬೆಡಗಿ!'ಕಾಂತಾರ' ನೋಡಿ ರಿಪೋರ್ಟರ್ ರೀತಿ ಪ್ರೇಕ್ಷಕರ ರಿವ್ಯೂ ಕೇಳಿದ ನಟಿ: ಇದು ತುಳುನಾಡಿದ ಹೆಮ್ಮೆ ಎಂದ ಬೆಡಗಿ!

    ಪಾತ್ರಕ್ಕೆ ಸಪ್ತಮಿ ಗೌಡ ತಯಾರಿ

    ಪಾತ್ರಕ್ಕೆ ಸಪ್ತಮಿ ಗೌಡ ತಯಾರಿ

    "ಫಾರೆಸ್ಟ್ ಗಾರ್ಡ್ ಪಾತ್ರ ಮಾಡುವುದು ಅಷ್ಟು ಸುಲಭ ಅಲ್ಲ. ಅದಕ್ಕೆ ತಯಾರಿ ಬೇಕು. ನಾವು ಹಳ್ಳಿಯಿಂದ ಬಂದವರು ನಮಗೆ ಗೊತ್ತಾಗುತ್ತದೆ. ಆಕೆ ಇಲ್ಲೇ ಹುಟ್ಟಿ ಬೆಳೆದವಳು. ಅಲ್ಲಿನ ಶೈಲಿಯ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಅಲ್ಲಿನ ಭಾಷೆಯನ್ನು ಕಲಿಯಬೇಕು. ಆ ಬಾಡಿ ಲಾಂಗ್ವೇಜ್ ಬೇಕು, ಇದೆಲ್ಲ ಕಷ್ಟದ ಕೆಲಸ. ಅದನ್ನೆಲ್ಲಾ ತಿಳಿದುಕೊಂಡಳು. ನಟಿಸುತ್ತಾ ನಟಿಸುತ್ತಾ ಕಲಿತುಕೊಂಡಿದ್ದಾಳೆ. ನಾನು ಆಗಾಗ್ಗೆ ರಿಷಬ್ ಶೆಟ್ಟಿ ಅವರನ್ನು ಕೇಳುತ್ತಿದ್ದೆ. ಚೆನ್ನಾಗಿ ಮಾಡುತ್ತಿದ್ದಾರೆ. ಆಕೆಗೆ ಹೇಳಬೇಡಿ ಎಂದು ರಿಷಬ್ ಶೆಟ್ಟಿ ಹೇಳಿದ್ದರು".

    ಸಪ್ತಮಿ ಗೌಡ ಚಿತ್ರರಂಗಕ್ಕೆ ಬಂದಿದ್ದೇಗೆ?

    ಸಪ್ತಮಿ ಗೌಡ ಚಿತ್ರರಂಗಕ್ಕೆ ಬಂದಿದ್ದೇಗೆ?

    "ಆಕೆ ಈಜುಪಟು ಆಗಿದ್ದಳು. ಚಿಕ್ಕಂದಿನಿಂದಲೂ ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿಭಾಗವಹಿಸುತ್ತಿದ್ದಳು. ಬಹಳ ಗಟ್ಟಿ ಇದ್ದಳು. ಸಾಕಷ್ಟು ಸ್ಪರ್ಧೆಗಳಲ್ಲಿ ಪ್ರಶಸ್ತಿ ಗೆದ್ದಿದ್ದಳು. ಮೆಂಟಲಿ ಸ್ಟ್ರಾಂಗ್ ಎಂದುಕೊಂಡಿದ್ದೆ. ಕ್ರೈಂ ಕಥೆಗಳನ್ನು ಕೇಳಲು ಸಾಕಷ್ಟು ಜನ ಚಿತ್ರರಂಗದವರು ನಮ್ಮ ಮನೆಗೆ ಬರುತ್ತಿರುತ್ತಾರೆ. ಅದೇ ರೀತಿ ನಿರ್ದೇಶಕ ಸೂರಿ ಬರುತ್ತಿದ್ದರು. ಹೀಗೆ ಚರ್ಚೆ ಮಾಡುವಾಗ ಕುತೂಹಲದಿಂದ ಕೇಳಿಸಿಕೊಳ್ಳುತ್ತಿದ್ದಳು. ಆಕೆಯನ್ನು ಡಾಕ್ಟರ್ ಮಾಡುವ ಆಸೆ ಇತ್ತು. ಆದರೆ ಅದು ಇಷ್ಟ ಇಲ್ಲ ನಾನು ಇಂಜಿನಿಯರಿಂಗ್ ಮಾಡ್ತೀನಿ ಎಂದಳು. ಇಂಜಿನಿಯರ್‌ ಮುಗಿದ ನಂತರ ಅಕ್ಸೆಂಚರ್‌ನಲ್ಲಿ ಕೆಲಸ ಸಿಕ್ಕಿತ್ತು. ಅದೇ ಸಮಯದಲ್ಲಿ ಸೂರಿ 'ಪಾಪ್‌ಕಾರ್ನ್‌ ಮಂಕಿಟೈಗರ್' ಸಿನಿಮಾದಲ್ಲಿ ನಟಿಸುವಂತೆ ಕೇಳಿದ್ದರು. ನಾನು ಓಕೆ ಎಂದೆ. ಲುಕ್‌ ಟೆಸ್ಟ್ ಆಗಿ ಸೆಲೆಕ್ಟ್ ಆಗಿದ್ದಳು"

    ಎಂಎಸ್‌ ಓದಲು ಅಮೆರಿಕಾಗೆ ಹೋಗಬೇಕಿತ್ತು

    ಎಂಎಸ್‌ ಓದಲು ಅಮೆರಿಕಾಗೆ ಹೋಗಬೇಕಿತ್ತು

    "ಪಾಪ್‌ಕಾರ್ನ್‌ ಮಂಕಿಟೈಗರ್ ಸಿನಿಮಾ ಶೂಟಿಂಗ್ ನಂತರ ಕೆಲಸಕ್ಕೆ ಹೋಗುತ್ತಿದ್ದಳು. 6 ತಿಂಗಳ ನಂತರ ಪಪ್ಪಾ ಒಂದೇ ಕಡೆ ಕೂತು ಕೆಲಸ ಮಾಡುವುದು ಕಷ್ಟ, ಎಂಎಸ್‌ ಮಾಡ್ತೀನಿ ಎಂದಳು. ಅಮೆರಿಕಾಗೆ ಹೋಗಿ ಎಂಎಸ್ ಮಾಡೋಕೆ ಪರೀಕ್ಷೆ ಬರೆದು ಒಳ್ಳೆ ಅಂಕ ಕೂಡ ಬಂದಿತ್ತು. ವೀಸಾ ಎಲ್ಲಾ ಸಿಕ್ಕಿತ್ತು. ಅದೇ ಸಮಯದಲ್ಲಿ ಕೊರೊನಾ ಹಾವಳಿ ಶುರುವಾಗಿ ಲಾಕ್‌ಡೌನ್ ಘೋಷಣೆ ಆಯಿತು. ಇಲ್ಲದೇ ಹೋಗಿದ್ದರೆ ಆಕೆ ಅಮೆರಿಕಾಗೆ ಹೋಗಿಬಿಡುತ್ತಿದ್ದಳು. ಇಂತಹ ಸಮಯದಲ್ಲಿ ಸಾಕಷ್ಟು ಕಥೆಗಳು ಬರ್ತಿತ್ತು. ಯಾವುದು ಇಷ್ಟವಾಗಲಿಲ್ಲ. ಮೊದಲ ಚಿತ್ರಕ್ಕೆ ಸೈಮಾ ಬೆಸ್ಟ್ ಡೆಬ್ಯು ಅವಾರ್ಡ್ ಕೂಡ ಬಂದಿತ್ತು. ನಂತರ 'ಕಾಂತಾರ' ಚಿತ್ರದ ಆಡಿಷನ್‌ ನಡೆದು ಲೀಲಾ ಪಾತ್ರದ ಅವಕಾಶ ಸಿಕ್ತು" ಎಂದು ಎಸ್.ಕೆ ಉಮೇಶ್ ಹೇಳಿದ್ದಾರೆ.

    English summary
    S K Umesh Reveals That How His daughter Sapthami Gowda Get Kantara Movie chance. Know More.
    Tuesday, October 18, 2022, 20:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X