ಸೊಸೆ ತಂದ ದೌರ್ಭಾಗ್ಯ ; ಎಸ್.ನಾರಾಯಣ್ ಕುಟುಂಬದ ವಿರುದ್ಧ ವರದಕ್ಷಣೆ ಕೇಸ್,ಅವಳು ನಮ್ಮ ಮಗಳಲ್ಲ ಎಂದ ಪವಿತ್ರಾ ತಂದೆ

ವರದಕ್ಷಿಣೆ ನಮ್ಮ ಸಮಾಜದಲ್ಲಿ ಬೇರೂರಿರುವ ಪಿಡುಗು. ಈ ಪಿಡುಗು ನಿರ್ಮೂಲನೆ ಮಾಡಲು ನಾನಾ ಪ್ರಯತ್ನಗಳನ್ನು ಮಾಡಿದರು ಕೂಡ ಇವತ್ತು ಕೂಡ ಚಾಲ್ತಿಯಲ್ಲಿರುವುದು ದುರದೃಷ್ಟಕರ. 1961ರಲ್ಲಿಯೇ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಬದಲಾದ ಈ ಕಾಲದಲ್ಲಿಯೂ ಕೂಡ ವರದಕ್ಷಿಣೆ ಕಿರುಕುಳ ಅದರಿಂದ ಆದ ಸಾವು-ನೋವು ಕುರಿತು ಸುದ್ದಿಗಳನ್ನು ನಾವು ನೀವು ನೋಡುತ್ತಲೇ ಇರುತ್ತೇವೆ.

ಆದರೆ.. ಈಗೀಗ ಕೆಲವರಿಗೆ ಇದೇ ವರದಕ್ಷಿಣೆ ಬ್ರಹ್ಮಾಸ್ತ್ರವಾಗಿದೆ. ಸುಳ್ಳು ಸುಳ್ಳೇ ಈ ವರದಕ್ಷಿಣೆಯ ಕೇಸನ್ನು ಹಲವರು ಜಡಿಯಲು ಶುರು ಮಾಡಿದ್ದಾರೆ. ವರದಕ್ಷಿಣೆ ಕಿರುಕುಳದ ಜೊತೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ದಾಖಲಿಸುತ್ತಿದ್ದಾರೆ. ಸಾಮಾನ್ಯವಾಗಿ ವರದಕ್ಷಿಣೆ ಕಿರುಕುಳ (498ಎ)ದ ದೂರು ದಾಖಲಿಸುವ ಮಹಿಳೆಯರು ಕೌಟುಂಬಿಕ ದೌರ್ಜನ್ಯ(506) ಕಾಯ್ದೆಗಳ ಅಡಿ ದೂರು ದಾಖಲಿಸುತ್ತಾರೆ. ಪತಿ ಮಾತ್ರವಲ್ಲದೆ ಇಡೀ ಕುಟುಂಬವನ್ನೇ ಜೈಲಿಗೆ ಕಳುಹಿಸುವ ಉದ್ದೇಶದಿಂದ ಹಲವರು ಈ ತಪ್ಪು ದಾರಿಯನ್ನು ತುಳಿಯುತ್ತಿದ್ದಾರೆ.

s-narayan-dowry-case-takes-bizarre-turn-daughter-in-law-pavithras-father-turns-against-his-daughter

ಈ ಸಾಲಿನಲ್ಲಿ ಕನ್ನಡ ಚಿತ್ರರಂಗದ ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರ ಸೊಸೆ ಪವಿತ್ರಾ ಕೂಡ ಇದ್ದಾರಾ ಎನ್ನುವ ಅನುಮಾನ ಸದ್ಯ ಹಲವರನ್ನು ಕಾಡುತ್ತಿದೆ. ಹೌದು, ಎಸ್ ನಾರಾಯಣ್ ಅವರ ಮನೆಯ ವಿಚಾರ ಬೀದಿಗೆ ಬಂದಿರುವುದು ಎಲ್ಲರಿಗೆ ಗೊತ್ತಿರುವಂತಹದ್ದೇ. ಮನೆಯಿಂದ ಹೊರ ಬಂದ 14 ತಿಂಗಳ ನಂತರ ಎಸ್ ನಾರಾಯಣ್ ಅವರ ಸೊಸೆ ಪವಿತ್ರಾ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಾರೆ. ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ದೂರನ್ನು ಕೂಡ ದಾಖಲಿಸಿದ್ದಾರೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಎಸ್. ನಾರಾಯಣ್ ಕಳೆದ ಎರಡು ದಿನಗಳಿಂದ ಮಾಧ್ಯಮದವರಿಗೆ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ʻನಾನು ಹೆಣ್ಣುಮಗಳ ತಂದೆ, ನನ್ನ ಮನೆಯಲ್ಲಿ ವರದಕ್ಷಿಣೆ ಕೇಳೋದು ಸಾಧ್ಯವೇ? ಎಂಬ ಪ್ರಶ್ನೆ ಕೇಳುತ್ತಿದ್ಧಾರೆ. ತಮ್ಮ ಮನದ ನೋವನ್ನು ಹೊರ ಹಾಕುತ್ತಿದ್ದಾರೆ. ಇದರ ನಡುವೆ ಇದೀಗ ಪವಿತ್ರಾ ಅವರ ತಂದೆಯೇ ತಮ್ಮ ಮಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ. ಆಕ್ರೋಶ ಹೊರ ಹಾಕಿದ್ದಾರೆ.

ಈ ಕುರಿತು ''ಗ್ಯಾರಂಟಿ ನ್ಯೂಸ್‌'' ಜೊತೆ ಮಾತನಾಡಿರುವ ಪವಿತ್ರಾ ಅವರ ತಂದೆ ಶಿವಕುಮಾರ್ ನನಗೇನು ನಡೆದಿದೆ ಎನ್ನುವುದು ಗೊತ್ತಿಲ್ಲ. ಸದ್ಯ ನಾನು ಪ್ರವಾಸದಲ್ಲಿದ್ದೇನೆ ಎಂದು ಹೇಳಿದ್ದಾರೆ. ಮುಂದುವರೆದು ನಮಗೂ ಅವಳಿಗೂ ಸಂಬಂಧ ಇಲ್ಲ ಅವಳು ನಮ್ಮ ಮಗಳೇ ಅಲ್ಲ ಎಂದು ಹೇಳಿರುವ ಪವಿತ್ರಾ ಅವರ ತಂದೆ ಶಿವಕುಮಾರ್ ನಿಮಗೇನಾದರೂ ಸ್ಪಷ್ಟನೆ ಬೇಕಿದ್ದರೆ ಅವರನ್ನೇ ಕೇಳಿ ಈ ತರ ಶಿವಕುಮಾರ್ ಎನ್ನುವರು ಕರೆ ಮಾಡಿದರೆ ಹೀಗೆ ಹೇಳಿದರು ಎಂದು ಅವರಿಗೆ ಹೇಳಿ ಎಂದು ಹೇಳಿದ್ಧಾರೆ. ಫೋನ್ ರಿಸೀವ್ ಮಾಡಿದರೆ ನಿಮ್ಮ ಅದೃಷ್ಟ ಎಂದು ಹೇಳಿದ್ದಾರೆ.

s-narayan-dowry-case-takes-bizarre-turn-daughter-in-law-pavithras-father-turns-against-his-daughter

ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಅವರನ್ನೇ ಸಂಪರ್ಕಿಸಿ ಅಥವಾ ಅವರ ತಾಯಿಯನ್ನು ಸಂಪರ್ಕಿಸಿ ಎಂದು ಹೇಳಿರುವ ಶಿವಕುಮಾರ್ ಒಬ್ಬ ತಂದೆಯಾಗಿ ಮದುವೆ ಮಾಡಿಕೊಡುವುದು ನನ್ನ ಜವಾಬ್ಧಾರಿ ಆ ಜವಾಬ್ಧಾರಿಯನ್ನು ನಾನು ಪೂರೈಸಿದ್ದೇನೆ. ಮದುವೆಯಾದ ನಂತರ ತಂದೆಗೂ ಮತ್ತು ಮಗಳಿಗೂ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ ಎಂದು ಹೇಳಿದ್ಧಾರೆ.

ಇನ್ನೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗಂಡನನ್ನು ತೊರೆದು ಬರಬೇಡ ಎಂದು ತಂದೆ ತಾಯಿ ಬುದ್ದಿವಾದ ಹೇಳಿದರು ಕೂಡ ಒಪ್ಪದ ಪವಿತ್ರಾ ತಮ್ಮ ತಂದೆಯ ಮನೆಯ ಬಳಿಯೇ ಮನೆ ಮಾಡಿದ್ದರು, ಇಷ್ಟೇ ಅಲ್ಲದೇ ಒಳ್ಳೆಯ ಮಾತು ಹೇಳಿದ್ದಕ್ಕೆ ಆತ್ಮಹತ್ಯೆಯ ಬೆದರಿಕೆಯನ್ನು ಕೂಡ ಪವಿತ್ರಾ ತಮ್ಮ ಹೆತ್ತವರಿಗೆ ಹಾಕಿದ್ದರು.ಈ ಹಿನ್ನೆಲೆ ಮಗಳ ವರ್ತನೆಯಿಂದ ಬೇಸತ್ತು ಪೊಲೀಸ್ ಠಾಣೆಗೆ ಪವಿತ್ರಾ ಅವರ ತಂದೆ ಶಿವಕುಮಾರ್ ಅವರೇ ದೂರು ನೀಡಿದ್ದರು. ಮರ್ಯಾದೆಗೆ ಅಂಜಿಗೆ ಮನೆಗೆ ಕರೆದುಕೊಂಡು ಬಂದಿದ್ದರು ಎಂದು ಕೂಡ ''ಗ್ಯಾರಂಟಿ ನ್ಯೂಸ್'' ವರದಿಯನ್ನು ಮಾಡಿದೆ.

More from Filmibeat

English summary
Is the victim the culprit? In a stunning turn of events, the dowry harassment case against filmmaker S. Narayan has been upended. Discover why his daughter-in-law's own father has turned against her and what he told the police.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X