For Quick Alerts
  ALLOW NOTIFICATIONS  
  For Daily Alerts

  ಎಸ್ ನಾರಾಯಣ್ ಗೆ ಮುಜುಗರ ತರಿಸಿದ ಪುತ್ರನ ಬೆಡ್ ರೂಮ್ ಡೈಲಾಗ್

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಮತ್ತು ನಟ ಕಲಾ ಸಾಮ್ರಾಟ್ ಎಸ್ ನಾರಾಯಣ್ ಸದ್ಯ ತಮ್ಮ ಪುತ್ರ ಪವನ್ ನಿರ್ದೇಶನ ಮಾಡುತ್ತಿರುವ ಚೊಚ್ಚಲ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮಗನ ಸಿನಿಮಾದಲ್ಲಿ ಅಪ್ಪ ನಟಿಸುತ್ತಿರುವುದು ವಿಶೇಷ.

  ಪವನ್ ನಾರಾಯಣ್ ನಿರ್ದೇಶನದ ಚೊಚ್ಚಲ ಸಿನಿಮಾಗೆ ನವಮಿ 9.9.1999 ಎಂದು ಟೈಟಲ್ ಇಡಲಾಗಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ. ಆಕ್ಷನ್ ದೃಶ್ಯ ಮತ್ತು ಹಾಡಿನ ಚಿತ್ರೀಕರಣ ಬಾಕಿಯುಳಿಸಿಕೊಂಡಿರುವ ಸಿನಿಮಾತಂಡ ಕೆಲವೇ ದಿನಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸಿ, ಪೋಸ್ಟ ಪ್ರೊಡಕ್ಷನ್ ಕೆಲಸದಲ್ಲಿ ನಿತರರಾಗಲಿದೆ.

  ಸ್ಯಾಂಡಲ್ ವುಡ್ ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರಿಗೆ ಗೌರವ ಡಾಕ್ಟರೇಟ್ಸ್ಯಾಂಡಲ್ ವುಡ್ ಕಲಾ ಸಾಮ್ರಾಟ್ ಎಸ್. ನಾರಾಯಣ್ ಅವರಿಗೆ ಗೌರವ ಡಾಕ್ಟರೇಟ್

  ಅಪ್ಪನಿಗೆ ಬೆಡ್ ರೂಮ್ ದೃಶ್ಯದ ಡೈಲಾಗ್ ವಿವರಿಸಿದ ಪುತ್ರ

  ಅಪ್ಪನಿಗೆ ಬೆಡ್ ರೂಮ್ ದೃಶ್ಯದ ಡೈಲಾಗ್ ವಿವರಿಸಿದ ಪುತ್ರ

  ಪುತ್ರ ನಿರ್ದೇಶನ ಮಾಡುತ್ತಿರುವ ಮೊದಲ ಸಿನಿಮಾದಲ್ಲಿ ಎಸ್ ನಾರಾಯಣ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಪ್ಪನಿಗೆ ಬೆಡ್ ರೂಮ್ ದೃಶ್ಯದ ಡೈಲಾಗ್ ವಿವರಿಸುತ್ತಿರುವ ಪುತ್ರ ಪವನ್ ವಿಡಿಯೋ ವೈರಲ್ ಆಗಿದೆ. ಈ ದೃಶ್ಯದಲ್ಲಿ ಬರುವ ರೊಮ್ಯಾಂಟಿಕ್ ಡೈಲಾಗ್ ಬಗ್ಗೆ ಪುತ್ರ ಪವನ್ ವಿವರಣೆ ನೀಡುತ್ತಿರುವುದನ್ನು ಕೇಳಿ ಎಸ್ ನಾರಾಯಣ್ ದಂಗಾಗಿದ್ದಾರೆ.

  ಮಗನ ಡೈಲಾಗ್ ಕೇಳಿ ದಂಗಾದ ಎಸ್ ನಾರಾಯಣ್

  ಮಗನ ಡೈಲಾಗ್ ಕೇಳಿ ದಂಗಾದ ಎಸ್ ನಾರಾಯಣ್

  ಒಬ್ಬ ಮಗ ಅಪ್ಪನಿಗೆ ಈ ರೀತಿಯ ಡೈಲಾಗ್ ಹೇಳಿಕೊಡುತ್ತಿಯಲ್ಲ, ಇದು ನ್ಯಾಯವೇ, ಧರ್ಮವೇ, ನೀತಿಯೇ ಎಂದು ಮಗನಿಗೆ ತಮಾಷೆ ಮಾಡಿದ್ದಾರೆ. ಅಪ್ಪನ ಮಾತಿಗೆ ಪವನ್, ನೀವು ಕಲಾವಿದರು ಈಗ, ನಾನು ನಿರ್ದೇಶಕ ಎಂದು ಹೇಳಿ ಬೆಡ್ ರೂಮ್ ದೃಶ್ಯ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ ನಿರ್ದೇಶಕ ಪವನ್ ನಾರಾಯಣ್.

  ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಪುತ್ರ ಈಗ ನಿರ್ದೇಶಕಖ್ಯಾತ ನಿರ್ದೇಶಕ ಎಸ್ ನಾರಾಯಣ್ ಪುತ್ರ ಈಗ ನಿರ್ದೇಶಕ

  ಯಶಸ್ ಅಭಿ ನಾಯಕ

  ಯಶಸ್ ಅಭಿ ನಾಯಕ

  ನವಮಿ 9.9.1999 ಸಿನಿಮಾದಲ್ಲಿ ನಾಯಕನಾಗಿ ಯಶಸ್ ಅಭಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮೊದಲು ಪ್ರಸೆಂಟ್ ಪ್ರಪಂಚ ಜೀರೋ ಪರ್ಸೆಂಟ್ ಲವ್ ಹಾಗೂ ಕ್ರಿಟಿಕಲ್ ಕೀರ್ತನೆಗಳು ಸಿನಿಮಾಗಳಲ್ಲಿ ನಟಿಸಿದ್ದರು. ಯಶಸ್ ಗೆ ನಾಯಕಿಯಾಗಿ ನಂದಿನಿ ಗೌಡ ಕಾಣಿಸಿಕೊಂಡಿದ್ದಾರೆ.

  ಚಿತ್ರದಲ್ಲಿದೆ ದೊಡ್ಡ ತಾರಾಬಳಗ

  ಚಿತ್ರದಲ್ಲಿದೆ ದೊಡ್ಡ ತಾರಾಬಳಗ

  ತಂದೆಯ ಗರಡಿಯಲ್ಲಿ ಬೆಳೆದಿರುವ ನಿರ್ದೇಶಕ ಪವನ್ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದು, ಚೊಚ್ಚಲ ಚಿತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ. ಚಿತ್ರದಲ್ಲಿ ಶಂಕರ್ ಅಶ್ವಥ್, ಪ್ರಕಾಶ್ ರಾವ್ ಸೇರಿದಂತೆ ಅನೇಕ ಕಲಾವಿದರಿದ್ದಾರೆ. ಚಿತ್ರಕ್ಕೆ ಗಿರಿದರ್ ದಿವಾನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

  Recommended Video

  ಸಲಾರ್ ಸಿನಿಮಾದಲ್ಲಿ ನಟಿಸಲು ಮತ್ತೊಂದು ಅವಕಾಶ ನೀಡಿದ ಪ್ರಶಾಂತ್ ನೀಲ್ | Filmibeat Kannada
  ಫಸ್ಟ್ ಲುಕ್ ರಿಲೀಸ್ ಆಗಿದೆ

  ಫಸ್ಟ್ ಲುಕ್ ರಿಲೀಸ್ ಆಗಿದೆ

  ಇತ್ತೀಚಿಗಷ್ಟೆ ಅಂದರೆ ನವರಾತ್ರಿ ಸಮಯದಲ್ಲಿ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, 9 ಜನ ನಿರ್ದೇಶಕರು ಫಸ್ಟ್ ಲುಕ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಸದ್ಯ ಬಹುತೇಕ ಚಿತ್ರೀಕರಣ ಮುಗಿಸಿರುವ ನವಮಿ 9.9.1999 ಸಿನಿಮಾ ಮುಂದಿನ ಫೆಬ್ರವರಿಯಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಎಸ್ ನಾರಾಯಣ್ ಪುತ್ರನ ಚೊಚ್ಚಲ ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲ ಕನ್ನಡ ಚಿತ್ರಪ್ರಿಯರಲ್ಲಿದೆ.

  English summary
  Director S Narayan playing important role in his son Pawan directorial movie.
  Monday, December 28, 2020, 15:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X