»   » ಹೊಸ ಬಾಳಿನ ಹೊಸಿಲಲಿ ಎಸ್ ನಾರಾಯಣ್ ಪುತ್ರಿ

ಹೊಸ ಬಾಳಿನ ಹೊಸಿಲಲಿ ಎಸ್ ನಾರಾಯಣ್ ಪುತ್ರಿ

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ ಪುತ್ರಿ ವಿದ್ಯಾ ನಿಶ್ಚಿತಾರ್ಥ ಗುರುವಾರ (ಅಕ್ಟೋಬರ್ 30) ಅದ್ದೂರಿಯಾಗಿ ನೆರವೇರಿತು. ಕನ್ನಡ ಚಿತ್ರರಂಗದ ಗಣ್ಯರು ಮದುವೆ ನಿಶ್ಚಿತಾರ್ಥಕ್ಕೆ ಆಗಮಿಸಿ ನೂತನ ಜೋಡಿಗೆ ಶುಭ ಕೋರಿದರು.

ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಎಂಎ ಸ್ನಾತಕೋತ್ತರ ಪದವಿ ಮುಗಿಸಿರುವ ವಿದ್ಯಾ ಅವರು ನಾರಾಯಣ್ ಅವರ ಏಕಮಾತ್ರ ಪುತ್ರಿ. ವಿದ್ಯಾ ಅವರ ಕೈಹಿಡಿಯುತ್ತಿರುವ ವರನ ಹೆಸರು ಶ್ರೀನಿವಾಸ್. ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿರುವ ಇವರು ಉತ್ತಮ ಕುಟುಂಬದ ಹಿನ್ನೆಲೆಯಿಂದ ಬಂದಿದ್ದು ವಿದ್ಯಾ ಅವರಿಗೆ ಅನುರೂಪದ ಜೋಡಿ.

ನಟ, ನಿರ್ದೇಶಕ, ಗೀತಸಾಹಿತಿ, ಸಂಗೀತ ನಿರ್ದೇಶಕ, ಚಿತ್ರಕಥೆ ರಚನೆ...ಹೀಗೆ ಎಲ್ಲ ವಿಭಾಗಗಳಲ್ಲೂ ತಮ ಕೈ ಚಳಕ ತೋರಿಸಿದವರು ನಾರಾಯಣ್ ಅವರು. ಚೈತ್ರದ ಪ್ರೇಮಾಂಜಲಿ ಚಿತ್ರದ ಅವರ ವೃತ್ತಿ ಬದುಕಿನಲ್ಲಿ ವಿಶೇಷ ಸ್ಥಾನಕ್ಕೆ ಪಾತ್ರವಾಗಿರುವುದು ಗೊತ್ತೇ ಇದೆ. ಸ್ಲೈಡ್ ನಲ್ಲಿ ನೋಡಿ ನಿಶ್ಚಿತಾರ್ಥದ ಫೋಟೋಗಳು.

ನಿಶ್ಚಿತಾರ್ಥದಲ್ಲಿ ಅಂಬರೀಶ್ ದಂಪತಿಗಳು

ಎಸ್ ನಾರಾಯಣ್ ಅವರ ಇಬ್ಬರು ಪುತ್ರರಾದ ಪಂಕಜ್ ಹಾಗೂ ಪವನ್ ಜೊತೆಗೆ ರೆಬೆಲ್ ಸ್ಟಾರ್ ಅಂಬರೀಶ್, ಸುಮಲತಾ ಹಾಗೂ ಎಸ್ ನಾರಾಯಣ್ ಮತ್ತವರ ಧರ್ಮಪತ್ನಿ ಭಾಗ್ಯವತಿ ಅವರನ್ನು ಕಾಣಬಹುದು.

ಶುಭಕೋರಿದ ಅನು ಪ್ರಭಾಕರ್

ಈ ಮದುವೆಗೆ ಆಗಮಿಸಿದ ಪ್ರಮುಖರಲ್ಲಿ ನಟಿ ಅನುಪ್ರಭಾಕರ್ ಸಹ ಒಬ್ಬರು. ನೂತನ ದಾಂಪತ್ಯಕ್ಕೆ ಅಡಿಯಿಡುತ್ತಿರುವ ಜೋಡಿಗೆ ಶುಭಕೋರಿದರು.

ಹಿರಿಯ ತಾರೆಗಳ ಶುಭಹಾರೈಕೆ

ನಿಶ್ಚಿತಾರ್ಥ ಸಂಭ್ರಮದಲ್ಲಿ ಹೇಮಾ ಚೌಧರಿ, ಬಿ ಸರೋಜಾದೇವಿ, ಪ್ರಮೀಳಾ ಜೋಷಾಯಿ ಕಾಣಿಸಿಕೊಂಡಿದ್ದು ಹೀಗೆ.

ಕ್ಯಾಮೆರಾ ಕಣ್ಣಿಗೆ ಸಿಕ್ಕಿದ ಉಗ್ರಂ ಸ್ಟಾರ್

'ಉಗ್ರಂ' ಸ್ಟಾರ್ ಶ್ರೀಮುರಳಿ ಅವರು ನಿಶ್ಚಿತಾರ್ಥಕ್ಕೆ ಆಗಮಿಸಿದ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಬಗೆ.

ಚೆಲುವಿನ ಚಿತ್ತಾರ ಜೋಡಿ

ವಿದ್ಯಾ ಮತ್ತು ಶ್ರೀನಿವಾಸ್ ಅವರನ್ನು ನೋಡಿದರೆ ಇಬ್ಬರದ್ದೂ ಚೆಲುವಿನ ಚಿತ್ತಾರದ ಜೋಡಿ ಅನ್ನಿಸುತ್ತದೆ ಅಲ್ಲವೇ?

ನಿಶ್ಚಿತಾರ್ಥಕ್ಕೆ ಅಗಮಿಸಿದ ಕೆ ಮಂಜು

ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೆ ಮಂಜು ಹಾಗೂ ಸಿನಿಮಾ ಛಾಯಾಗ್ರಾಹಕ ಕೆಎಂ ವೀರೇಶ್ ಅವರನ್ನು ಚಿತ್ರದಲ್ಲಿ ಕಾಣಬಹುದು.

ಶುಭಕೋರಿದ ಡಾ.ರಾಜ್ ಕುಟುಂಬ

ಗೀತಾ ಶಿವರಾಜ್ ಕುಮಾರ್, ಮಂಗಳಾ ರಾಘವೇಂದ್ರ ರಾಜ್ ಕುಮಾರ್, ರಾಘಣ್ಣ ಜೊತೆ ಎಸ್ ನಾರಾಯಣ್.

ಚಿನ್ನೇಗೌಡ ದಂಪತಿಗಳಿಂದ ಶುಭಹಾರೈಕೆ

ನೂತನ ಜೋಡಿಗೆ ಶುಭಕೋರಿದ ಶ್ರೀಮುರಳಿ ಮತ್ತವರ ತಂದೆ ಚಿನ್ನೇಗೌಡ.

English summary
Kannada actor, director, writer, producer, lyricist and music composer S Narayan's daughter Vidya gets engaged to Srinivas on 30th October, 2014. Narayan's daughter Vidhya engagement held with Srinivas, who is running an educational institution.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada