ಹೀರೋ ಆಗಿ ಲಾಂಚ್ ಆದ ಎಸ್ ನಾರಾಯಣ್ ಎರಡನೇ ಪುತ್ರ ಪವನ್
ನಿರ್ದೇಶಕ ಎಸ್ ನಾರಾಯಣ್ ಮೊದಲ ಮಗ ಪಂಕಜ್ ಈಗಾಗಲೇ ಸಿನಿಮಾ ಮಾಡುತ್ತಿದ್ದಾರೆ. ಇದೀಗ ಅವರ ಎರಡನೇ ಮಗ ಪವನ್ ಕೂಡ ಚಿತ್ರರಂಗ ಪ್ರವೇಶ ಮಾಡಿದ್ದಾರೆ.
ಪವನ್ ನಾರಾಯಣ್ ಹೀರೋ ಆಗಿ ಲಾಂಚ್ ಆಗಿದ್ದಾರೆ. ಅವರ ಮೊದಲ ಸಿನಿಮಾ ಇಂದು (ಡಿಸೆಂಬರ್ 2) ಲಾಂಚ್ ಆಗಿದೆ. ಪವನ್ ಮೊದಲ ಸಿನಿಮಾಗೆ 'ಮುತ್ತು ರತ್ನ' ಎಂದು ಶೀರ್ಷಿಕೆ ಇಡಲಾಗಿದೆ. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಸಿನಿಮಾ ಶುಭಾರಂಭವಾಗಿದೆ.
ನಟ ಶ್ರೀಮುರಳಿ ಹಾಗೂ ನಟಿ, ಸಂಸದೆ ಸುಮಲತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪವನ್ ನಾರಾಯಣ್ ರಿಗೆ ಶುಭ ಹಾರೈಸಿದರು. ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ವಿಶ್ ಮಾಡಿದರು.

'ಮುತ್ತು ರತ್ನ' ಸಿನಿಮಾವನ್ನು ಶ್ರೀಕಾಂತ್ ಹುಣಸೂರು ನಿರ್ದೇಶನ ಮಾಡುತ್ತಿದ್ದಾರೆ. ಅಂಜನಾ ಗೌಡ ನಾಯಕಿ ಆಗಿದ್ದಾರೆ. ಇದು ನೈಜ ಘಟನೆ ಆಧಾರಿತ ಸಿನಿಮಾವಾಗಿದೆ. ಪವನ್ ಗೆ ತಕ್ಕ ಕಥೆಯನ್ನು ಶ್ರೀಕಾಂತ್ ಹುಣಸೂರು ಸಿದ್ಧ ಮಾಡಿಕೊಂಡಿದ್ದಾರಂತೆ.
ತಂದೆಯೇ ದೊಡ್ಡ ನಿರ್ದೇಶಕ ಆಗಿರುವ ಕಾರಣ ಪವನ್ ಚಿತ್ರರಂಗದ ಬಗ್ಗೆ ತಿಳಿದುಕೊಂಡಿದ್ದಾರೆ. ತಂದೆಯ ಜೊತೆಗೆ 'ದಕ್ಷ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಅಂದಹಾಗೆ, 2015ರಲ್ಲಿಯೇ ಪವನ್ ಚಿತ್ರರಂಗಕ್ಕೆ ಬರುತ್ತಾರೆ ಎನ್ನುವ ಸುದ್ದಿ ಇತ್ತು. ಈ ಸಿನಿಮಾವನ್ನು ಆರ್ ಚಂದ್ರು ನಿರ್ದೇಶನ ಮಾಡುತ್ತಾರೆ ಎಂದು ಹೇಳಲಾಗಿತ್ತು. ಆದರೆ, ನಾಲ್ಕು ವರ್ಷಗಳ ನಂತರ ಪವನ್ ಇಂಡಸ್ಟ್ರಿಗೆ ಬಂದಿದ್ದಾರೆ.


Click it and Unblock the Notifications











