4 ವರ್ಷಗಳ ನಂತರ ಬೆಳ್ಳಿಪರದೆ ಮೇಲೆ ಎಸ್ ನಾರಾಯಣ್ ನಟನೆ

ನಿರ್ದೇಶಕ ಎಸ್ ನಾರಾಯಣ್ ಆಗಾಗ ಕ್ಯಾಮರಾ ಮುಂದೆ ಬಂದು ನಟನೆಯನ್ನು ಮಾಡುತ್ತಾರೆ. ಅವರು ಮಾಡಿದ ಎಷ್ಟೋ ಸಣ್ಣ ಸಣ್ಣ ಪಾತ್ರಗಳು ಸಿಕ್ಕಾಪಟ್ಟೆ ಮಜಾ ನೀಡಿದೆ. ಇತ್ತೀಚಿಗೆ ನಾರಾಯಣ್ ನಟನೆ ಕಡೆ ಗಮನ ನೀಡುವುದನ್ನು ಕಡಿಮೆ ಮಾಡಿದ್ದರು.

ತಮ್ಮ ನಿರ್ದೇಶನದ ಸಿನಿಮಾಗಳನ್ನು ಸಣ್ಣ ಪಾತ್ರ ಮಾಡುತ್ತಿದ್ದ ಎಸ್ ನಾರಾಯಣ್ ಸದ್ಯಕ್ಕೆ ನಟನೆಯಿಂದ ದೂರ ಸರಿದಿದ್ದರು. 4 ವರ್ಷಗಳಿಂದ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ನಾಲ್ಕು ವರ್ಷಗಳ ಹಿಂದೆ ಸುಮನಾ ಕಿತ್ತೂರು ನಿರ್ದೇಶನದ 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.

ಇದೀಗ 'ಓಲ್ಡ್ ಮಂಕ್' ಚಿತ್ರದಲ್ಲಿ ಎಸ್ ನಾರಾಯಣ್ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಶ್ರೀನಿ ನಾಯಕನಾಗಿದ್ದಾರೆ. ಜೊತೆಗೆ ಅವರೇ ನಿರ್ದೇಶಕ ಕೂಡ ಮಾಡುತ್ತಿದ್ದಾರೆ.

S Narayan Will Be Playing Father Role In Old Monk Movie

ಇತ್ತೀಚಿಗಷ್ಟೆ ನಾಯಕಿಯ ಆಯ್ಕೆ ಆಗಿದ್ದು, ಅತಿಥಿ ಪ್ರಭುದೇವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 'ರಂಗನಾಯಕಿ' ನಂತರ ಮತ್ತೆ ಶ್ರೀನಿ ಹಾಗೂ ಅತಿಥಿ ಒಂದಾಗಿದ್ದಾರೆ. ಚಿತ್ರದ ತಾರಬಹಳ ಹೆಚ್ಚಾಗಿದ್ದು, ಎಸ್ ನಾರಾಯಣ್ ತಂಡವನ್ನು ಸೇರಿಕೊಂಡಿದ್ದಾರೆ.

S Narayan Will Be Playing Father Role In Old Monk Movie

ಸಿನಿಮಾದ ಟೈಟಲ್ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸುದ್ದಿ ಮಾಡುತ್ತಿದೆ. ಚಿತ್ರದ ಕಥಾ ವಸ್ತು ಕುತೂಹಲ ಹುಟ್ಟುಹಾಕಿದೆ.

More from Filmibeat

English summary
Director S narayan will be playing father role in 'Old Monk' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X