twitter
    For Quick Alerts
    ALLOW NOTIFICATIONS  
    For Daily Alerts

    ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದ ಖ್ಯಾತ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ

    |

    ಪ್ರಧಾನಿ ನರೇಂದ್ರ ಮೋದಿ ದಕ್ಷಿಣ ಭಾರತೀಯ ಕಲಾವಿದರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಕೂಗು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೆ ಈಗ ಖ್ಯಾತ ಗಾಯಕ, ಗಾನ ಗಂಧರ್ವ ಡಾ.ಎಸ್ ಪಿ ಬಾಲಸುಬ್ರಮಣ್ಯಂ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಅಚ್ಚರಿ ಮೂಡಿಸಿದೆ. ಈ ಪೋಸ್ಟ್ ನಲ್ಲಿ ಎಸ್.ಪಿ.ಬಿ ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    'ದಕ್ಷಿಣ ಭಾರತೀಯ ಚಿತ್ರರಂಗವನ್ನು ಕಡೆಗಣಿಸಲಾಗಿದೆ': ಮೋದಿಗೆ ರಾಮ್ ಚರಣ್ ಪತ್ನಿ ಪ್ರಶ್ನೆ'ದಕ್ಷಿಣ ಭಾರತೀಯ ಚಿತ್ರರಂಗವನ್ನು ಕಡೆಗಣಿಸಲಾಗಿದೆ': ಮೋದಿಗೆ ರಾಮ್ ಚರಣ್ ಪತ್ನಿ ಪ್ರಶ್ನೆ

    ಇತ್ತೀಚಿಗೆ ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಾಲಿವುಡ್ ಸ್ಟಾರ್ಸ್ ಜೊತೆ ಸಂವಾದ ನಡೆಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಸ್ಟಾರ್ ನಟರಾದ ಆಮೀರ್ ಖಾನ್, ಶಾರುಖ್ ಖಾನ್, ರಾಜ್ ಕುಮಾರ್ ಹಿರಾನಿ, ರಣಬೀರ್ ಕಪೂರ್, ಕಂಗನಾ ರಣಾವತ್, ಸೋನಮ್ ಕಪೂರ್, ವಿಕ್ಕಿ ಕೌಸಲ್, ಅಲಿಯಾ ಭಟ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಭಾಗಿ ಮೋದಿ ಜೊತೆ ಫೋಟೋದಲ್ಲಿ ಮಿಂಚಿದ್ದರು. ಇದೆ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಎಸ್.ಪಿ.ಬಿ ಕೂಡ ಭಾಗಿಯಾಗಿದ್ದರು. ಆದ್ರೆ ಎಸ್.ಪಿ.ಬಿ ಯಾವುದೆ ಫೋಟೋಗಳಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಅಸಲಿ ಕಾರಣವೇನು ಎನ್ನುವುದನ್ನು ಎಸಿ ಪಿ ಬಿ. ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಟ್ಟಿದ್ದಾರೆ.

    ಎಸ್.ಪಿ.ಬಿ ಬೇಸರ

    ಎಸ್.ಪಿ.ಬಿ ಬೇಸರ

    ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಪಿ.ಬಿಯೂ ಭಾಗಿಯಾಗಿದ್ದರು. ಆದರೆ ಎಸ್ ಪಿ ಬಿಗೆ ಮಾತ್ರ ಮೋದಿ ಜೊತೆ ಸೆಲ್ಫಿ ತೆಗೆಸಿಕೊಳ್ಳುವ ಅವಾಕಶ ಸಿಕ್ಕಿಲ್ಲ. ಆದರೆ ಬಾಲಿವುಡ್ ಸ್ಟಾರ್ ಮಾತ್ರ ಪ್ರಧಾನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ಪಟ್ಟಿದ್ದಾರೆ. ಎಸ್.ಪಿ.ಬಿಯನ್ನು ಫೋಟೋದಿಂದ ದೂರ ಇಟ್ಟ ಅಸಲಿ ಕಾರಣವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಚ್ಚಿಡುವ ಮೂಲಕ ಖ್ಯಾತ ಗಾಯಕ ಬೇಸರ ವ್ಯಕ್ತಪಡಿಸಿದ್ದಾರೆ.

    ಅಲ್ಲಿ ನಡೆದಿದ್ದೇನು?

    ಅಲ್ಲಿ ನಡೆದಿದ್ದೇನು?

    ಮಹಾತ್ಮ ಗಾಂಧಿ 150ನೇ ಜನ್ಮ ದಿನದ ಕಾರ್ಯಕ್ರಮಕ್ಕೆ ಗಾನ ಗಂಧರ್ವ, ಪದ್ಮಭೂಷಣ ಡಾ.ಎಸ್ ಪಿ ಬಾಲಸುಬ್ರಮಣ್ಯಂ ಅವರಿಗೂ ಆಹ್ವಾನ ನೀಡಲಾಗಿತ್ತು. ಕರೆಯಂತೆ ಎಸ್ ಪಿ ಬಿ ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ. ಕಾರ್ಯಕ್ರಮಕ್ಕೆ ಎಂಟ್ರಿಯಾಗುತ್ತಿದ್ದಂತೆ ಬಾಲಸುಬ್ರಮಣ್ಯಂ ಮೊಬೈಲ್ ಅನ್ನು ಸೆಕ್ಯೂರಿಟಿಯವರು ಕಿತ್ತುಕೊಂಡಿದ್ದಾರೆ. ಒಳಗೆ ಮೊಬೈಲ್ ಬಳಸುವಹಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಒಳಗೆ ನೋಡಿದೆ ಬಾಲಿವುಡ್ ಸ್ಟಾರ್ ಬಳಿ ಮೊಬೈಲ್ ಇದೆ. ಪ್ರಧಾನಿ ಜೊತೆ ಸೆಲ್ಫಿ ತೆಗೆದುಕೊಂಡು ಸಂತಸಪಡುತ್ತಿದ್ದಾರೆ. ಇದನ್ನು ನೋಡಿ ಬೇಸರಗೊಂಡ ಬಾಲಸುಬ್ರಮಣ್ಯಂ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಎಸ್ ಪಿ ಬಾಲು ಜನಪ್ರಿಯತೆಯಲ್ಲಿದೆ ಸರಳತೆಯ ಪಾಲುಎಸ್ ಪಿ ಬಾಲು ಜನಪ್ರಿಯತೆಯಲ್ಲಿದೆ ಸರಳತೆಯ ಪಾಲು

    ಎಸ್.ಪಿ.ಬಿ ಹೇಳಿದ್ದೇನು?

    ಎಸ್.ಪಿ.ಬಿ ಹೇಳಿದ್ದೇನು?

    "ರಾಮೋಜಿ ರಾವ್ ಜೀ ಅವರಿಗೆ ನಾನು ಆಭಾರಿಯಾಗಿದ್ದೇನೆ. ಅವರಿಂದ ನನಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಎಂಟ್ರಿಯಾದ ನಂತರ, ನನ್ನ ಫೋನ್ ಅನ್ನು ಭದ್ರತ ಸಿಬಂದಿ ಬಳಿಯೆ ಬಿಡುವಂತೆ ಹೇಳಿದರು. ಅದಕ್ಕಾಗಿಯೆ ಟೋಕನ್ ಕೂಡ ನೀಡಿದರು. ಆದರೆ ಅದೆ ಕಾರ್ಯಕ್ರಮದಲ್ಲಿ ಸ್ಟಾರ್ಸ್ ಪ್ರಧಾನ ಮಂತ್ರಿ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ನೋಡಿ ದಿಗ್ಭ್ರಾಂತನಾದೆ. ಇಂಥಹ ಘಟನೆಗಳು ಪ್ರಶ್ನೆ ಮಾಡುವಂತೆ ಮಾಡುತ್ತೆ" ಎಂದು ಬರೆದುಕೊಂಡಿದ್ದಾರೆ.

    'ಆಮೀರ್, ಶಾರುಖ್ ಖಾನ್ ಗಳು ಮಾತ್ರ ಚಿತ್ರರಂಗದ ಒಡೆಯರಲ್ಲ': ಮೋದಿ ವಿರುದ್ಧ ನಟ ಜಗ್ಗೇಶ್ ಬೇಸರ'ಆಮೀರ್, ಶಾರುಖ್ ಖಾನ್ ಗಳು ಮಾತ್ರ ಚಿತ್ರರಂಗದ ಒಡೆಯರಲ್ಲ': ಮೋದಿ ವಿರುದ್ಧ ನಟ ಜಗ್ಗೇಶ್ ಬೇಸರ

    ದಕ್ಷಿಣ ಭಾರತೀಯರನ್ನು ಕಡೆಗಣಿಸಲಾಗುತ್ತಿದೆ

    ದಕ್ಷಿಣ ಭಾರತೀಯರನ್ನು ಕಡೆಗಣಿಸಲಾಗುತ್ತಿದೆ

    ಈ ಕಾರ್ಯಕ್ರಮವಾದ ನಂತರ ದಕ್ಷಿಣ ಭಾರತೀಯ ಚಿತ್ರರಂಗದ ಅನೇಕ ಕಲಾವಿದರು ಬೇಸರ ಹೊರಹಾಕಿದ್ದರು. ಬಾಲಿವುಡ್ ಚಿತ್ರರಂಗಕ್ಕೆ ಸಿಕ್ಕ ಬೆಂಬಲ ಮತ್ತು ಸಹಕಾರ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಸಿಗುತ್ತಿಲ್ಲ ಎಂದು ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದರು. ರಾಮ್ ಚರಣ್ ಪತ್ನಿ ಉಪಾಸನಾ, ನಟ ಜಗ್ಗೇಶ್ ಸೇರಿದಂತೆ ಅನೇಕರು ಇದರ ವಿರುದ್ಧ ಧ್ವನಿ ಎತ್ತಿದ್ದರು.

    English summary
    Famous singer S.P Balasubrahmanyam upset with PM Narendra modi.
    Sunday, November 3, 2019, 13:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X