ಕನ್ನಡದ ಈ ನಟನನ್ನು ನಿರ್ದೇಶಕ ರಾಜಮೌಳಿ ಫಾಲೋ ಮಾಡ್ತಿದ್ದಾರೆ..!
ರಾಜಮೌಳಿ ಇಡೀ ಭಾರತದಲ್ಲಿಯೇ ಹೆಸರು ಮಾಡಿರುವ ನಿರ್ದೇಶಕ. 'ಬಾಹುಬಲಿ' ಸಿನಿಮಾ ಮಾಡಿದ ಮೇಲಂತೂ ರಾಜಮೌಳಿ ವಿಶ್ವ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದರು. ಇಂತಹ ದೊಡ್ಡ ನಿರ್ದೇಶಕ ನಟ ಕಿಚ್ಚ ಸುದೀಪ್ ಅವರನ್ನು ಫಾಲೋ ಮಾಡುತ್ತಿದ್ದಾರೆ.
ರಾಜಮೌಳಿ ಟ್ವಿಟ್ಟರ್ ನಲ್ಲಿ ನಟ ಸುದೀಪ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ವಿಶೇಷ ಅಂದರೆ ರಾಜಮೌಳಿ ಟ್ವಿಟ್ಟರ್ ಖಾತೆಯಲ್ಲಿ ಫಾಲೋ ಮಾಡುತ್ತಿರುವುದು ಕೇವಲ 18 ಜನರನ್ನು ಮಾತ್ರ. ಈ ಪೈಕಿ ಸುದೀಪ್ ಒಬ್ಬರೇ ಕನ್ನಡದ ನಟನಾಗಿದ್ದಾರೆ.

ಅಂದಹಾಗೆ, ರಾಜಮೌಳಿ ಅವರ 'ಈಗ' ಸಿನಿಮಾದಲ್ಲಿ ಸುದೀಪ್ ನಟಿಸಿದ್ದರು. ಆ ನಂತರ 'ಬಾಹುಬಲಿ' ಚಿತ್ರದ ಮೊದಲ ಭಾಗದಲ್ಲಿಯೂ ಸುದೀಪ್ ಕಾಣಿಸಿಕೊಂಡಿದ್ದರು.
English summary
Director S.S.Rajamouli Following Actor Sudeep In Twitter.


Click it and Unblock the Notifications