'ಲೂಸಿಯಾ' ಹುಡುಗಿಗೆ ಎಚ್ಚರಿಕೆ ನೀಡಿದ ಸಾರಾ ಗೋವಿಂದು
ಬಹುಭಾಷಾ ನಟ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಮಾಡಿರುವ ಮೀಟೂ ಆರೋಪಕ್ಕೆ ಸಂಬಂಧಿಸದಂತೆ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ನಿರ್ಮಾಪಕ ಸಾರಾ ಗೋವಿಂದು ಪ್ರತಿಕ್ರಿಯಿಸಿದ್ದಾರೆ.
'ಶ್ರುತಿ ಹರಿಹರನ್ ಗೆ ತಲೆಕೆಟ್ಟಿದೆ. ಆಕೆ ಹುಚ್ಚಿಯಾಗಿರಬೇಕು. ಇಂಡಸ್ಟ್ರಿಯಲ್ಲಿ ತಾನು ಅಸ್ತಿತ್ವ ಕಳೆದುಕೊಳ್ಳುತ್ತಿದ್ದಾರೆ ಎಂಬ ಆತಂಕದಿಂದ ಈ ರೀತಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ' ಎಂದು ಸಾರಾ ಗೋವಿಂದು ಖಾರವಾಗಿ ಹೇಳಿದ್ದಾರೆ.
'ಶ್ರುತಿ ಹರಿಹರನ್ ಈ ಹಿಂದೆ ನಿರ್ದೇಶಕರೊಬ್ಬರ ಮೇಲೆ ಆರೋಪ ಮಾಡಿದ್ದರು. ಅಂದು ಹತ್ತು ವರ್ಷದ ಹಿಂದೆ ನಡೆದಿದ್ದ ಘಟನೆಯನ್ನ ಹೇಳಿದ್ದರು. ಆಗ ನಾನು ಶ್ರುತಿಗೆ ಖಾರವಾಗಿ ಎಚ್ಚರಿಕೆ ನೀಡಿದ್ದೆ. ಆ ವೇಳೆ ಶ್ರುತಿ ಫೋನ್ ಮಾಡಿ, ದಯವಿಟ್ಟು ಕೂಲ್ ಆಗಿ ಮಾತನಾಡಿ ಎಂದು ಮನವಿ ಮಾಡಿಕೊಂಡಿದ್ದರು. ಆಮೇಲೆ ನಾನು ಮಾತನಾಡಿದ ಬುದ್ದಿವಾದ ಹೇಳಿದ್ದೆ. ನಂತರ ಆಕೆ ಸುಮ್ಮನಾದರು ಎಂದು ಈ ಹಿಂದಿನ ಘಟನೆ ನೆನಪಿಸಿಕೊಂಡರು.

ಆದ್ರೀಗ, ಅರ್ಜುನ್ ಸರ್ಜಾ ಅಂತಹ ದೊಡ್ಡ ನಟನ ಮೇಲೆ ಆರೋಪ ಮಾಡ್ತಿರುವುದು ಸರಿಯಿಲ್ಲ. ಶಕ್ತಿ ಪ್ರಸಾದ್ ಅಂತಹ ದೊಡ್ಡ ಖಳನಟ. ಅವರ ಮಗ ಅರ್ಜುನ್ ಸರ್ಜಾ ಇಂದು ತಮಿಳುನಾಡಿನಲ್ಲಿ ದೊಡ್ಡ ಯಶಸ್ಸು ಕಂಡಿದ್ದಾರೆ. ಶ್ರುತಿ ಇಂಡಸ್ಟ್ರಿಯಲ್ಲಿ ಅಸ್ತಿತ್ವವನ್ನ ಕಳೆದುಕೊಂಡಿರಬೇಕು. ಹಾಗಾಗಿ, ತನ್ನ ಬೇಳೆ ಬೇಯಿಸಿಕೊಳ್ಳಲು ಅರ್ಜುನ್ ಸರ್ಜಾ ಮೇಲೆ ಆರೋಪ ಮಾಡಿದ್ದಾರೆ ಎಂದು ಸಾರಾ ಗೋವಿಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ವಿಸ್ಮಯ' ಚಿತ್ರದ ವೇಳೆ ಅರ್ಜುನ್ ಸರ್ಜಾ ಅವರು ನನ್ನ ಬಳಿ ಅಸಭ್ಯವಾಗಿ ವರ್ತಿಸಿದ್ದರು. ನನ್ನನ್ನು ರೆಸಾರ್ಟ್ ಗೆ ಬಾ ಎಂದು ಕರೆದಿದ್ದರು. ತಬ್ಬಿಕೊಂಡು ಅನುಚಿತವಾಗಿ ವರ್ತಿಸಿದ್ದರು ಎಂದು ದೂರಿದ್ದಾರೆ. ಕಳೆದ ವರ್ಷ ಈ ಸಿನಿಮಾ ಬಿಡುಗಡೆಯಾಗಿತ್ತು.


Click it and Unblock the Notifications











