»   » ರೀಲ್ ನಲ್ಲಿ 'ರಿಯಲ್' ಆಗಿ ಸಾ.ರಾ.ಗೋವಿಂದು, ಚಿನ್ನೇಗೌಡ್ರು ನಟನೆ

ರೀಲ್ ನಲ್ಲಿ 'ರಿಯಲ್' ಆಗಿ ಸಾ.ರಾ.ಗೋವಿಂದು, ಚಿನ್ನೇಗೌಡ್ರು ನಟನೆ

Posted By:
Subscribe to Filmibeat Kannada

ಕನ್ನಡ ಪರ ಹೋರಾಟಗಾರ, ಹಿರಿಯ ನಿರ್ಮಾಪಕ ಸಾ.ರಾ.ಗೋವಿಂದು ಪರಿಚಯ ನಿಮಗೆ ಇದ್ದೇ ಇದೆ. ಇನ್ನು ಖ್ಯಾತ ನಿರ್ಮಾಪಕ ಚಿನ್ನೇಗೌಡ್ರು ಕೂಡ ತೆರೆ ಹಿಂದೆ ಹೆಸರುವಾಸಿ. ಡಬ್ಬಿಂಗ್ ವಿಚಾರವಾಗಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದ ಟೇ.ಶಿ.ವೆಂಕಟೇಶ್ ರನ್ನ ನ್ಯೂಸ್ ಚಾನೆಲ್ ನಲ್ಲಿ ನೋಡಿರ್ತೀರಾ.

ಇದೀಗ ಈ ಮೂವರ ಬಗ್ಗೆ ನಾವು ಮಾತನಾಡುತ್ತಿರುವುದಕ್ಕೆ ಕಾರಣ 'ಟೈಟ್ಲು ಬೇಕಾ' ಸಿನಿಮಾ. ಹೊಸಬರ ಹೊಸ ಪ್ರಯತ್ನವಾಗಿರುವ 'ಟೈಟ್ಲು ಬೇಕಾ' ಚಿತ್ರದಲ್ಲಿ ಸಾ.ರಾ.ಗೋವಿಂದು, ಚಿನ್ನೇಗೌಡ್ರು ಮತ್ತು ಟೇ.ಶಿ.ವೆಂಕಟೇಶ್ ನಟಿಸಿದ್ದಾರೆ.

sa-ra-govindu-chinnegowda-te-shi-venkatesh-play-real-life-character-in-titlu-beka

ಅದು ರಿಯಲ್ ಆಗಿ ಅನ್ನೋದು ಇಂಟ್ರೆಸ್ಟಿಂಗ್ ವಿಷಯ. ನಿಜ ಜೀವನದಲ್ಲಿ ನಿರ್ಮಾಪಕರಾಗಿರುವ ಸಾ.ರಾ.ಗೋವಿಂದು ಮತ್ತು ಚಿನ್ನೇಗೌಡ್ರು 'ಟೈಟ್ಲು ಬೇಕಾ' ಚಿತ್ರದಲ್ಲಿ ಪ್ರೊಡ್ಯೂಸರ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಟೇ.ಶಿ.ವೆಂಕಟೇಶ್ ಕೂಡ ನಿರ್ದೇಶಕರಾಗಿಯೇ ಮಿಂಚಿದ್ದಾರೆ.

titlu-beka

ಹಾಗಂದ ಮಾತ್ರಕ್ಕೆ 'ಟೈಟ್ಲು ಬೇಕಾ' ಸಿನಿಮಾದೊಳಗಿನ ಸಿನಿಮಾ ಅಲ್ಲ. ಕನ್ನಡ ಚಿತ್ರರಂಗಕ್ಕೆ ಕಾಲಿಡುವ ಹೊಸಬರಿಗೆ ಬುದ್ದಿ ಹೇಳುವ ಪುಟ್ಟ ಸನ್ನಿವೇಶದಲ್ಲಿ ಸಾ.ರಾ.ಗೋವಿಂದು, ಚಿನ್ನೇಗೌಡ್ರು ಮತ್ತು ಟೇ.ಶಿ.ವೆಂಕಟೇಶ್ ಅಭಿನಯಿಸಿದ್ದಾರೆ.

ಅಂದ್ಹಾಗೆ, ನವ ಪ್ರತಿಭೆ ಆಯುಷ್, ನೇಹಾ ಪಾಟಿಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಟೈಟ್ಲು ಬೇಕಾ' ಚಿತ್ರಕ್ಕೆ ಆನಂದ್ ಆಕ್ಷನ್ ಕಟ್ ಹೇಳಿದ್ದಾರೆ. 'ಟೈಟ್ಲು ಬೇಕಾ' ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

English summary
Kannada Film Producer Sa.Ra.Govindu, Chinnegowda and Kannada Director Te.Shi.Venkatesh are roped into play their real life character in Kannada Movie 'Titlu Beka', which features Ayush, Neha Patil in the lead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada