For Quick Alerts
  ALLOW NOTIFICATIONS  
  For Daily Alerts

  ಚಿತ್ರರಂಗದವರಿಗೆ ಕೋವಿಡ್ ಲಸಿಕೆ ಒದಗಿಸಲು ಕೆಎಫ್‌ಸಿಸಿ ನಿಯೋಗದ ಮನವಿ

  |

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ನಾಗಣ್ಣ, ನಿರ್ಮಾಪಕ ಸಾರಾ ಗೋವಿಂದು, ಖಜಾಂಚಿ ವೆಂಕಟೇಶ್ ಅವರ ನಿಯೋಗ ಇಂದು (ಮೇ 17) ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿದೆ.

  ಚಿತ್ರರಂಗದವರಿಗೆ ಕೋವಿಡ್ ಲಸಿಕೆ ಒದಗಿಸಿ ಎಂದು ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಸುಧಾಕರ್ ಅವರನ್ನು ಭೇಟಿ ಮಾಡಿರುವ ಫೋಟೋಗಳು ಫಿಲ್ಮಿಬೀಟ್‌ಗೆ ಲಭ್ಯವಾಗಿದೆ.

  18 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಚಿತ್ರರಂಗದಿಂದ ಈಗಾಗಲೇ ಕೆಲವು ಸ್ಟಾರ್ ಕಲಾವಿದರು ಲಸಿಕೆ ಪಡೆದುಕೊಂಡಿದ್ದಾರೆ.

  ಇದೀಗ, ನಿರ್ದೇಶಕ, ನಿರ್ಮಾಪಕ, ಕಾರ್ಮಿಕರ ಹಾಗೂ ಇತರೆ ಕಲಾವಿದರಿಗಾಗಿ ಪ್ರತ್ಯೇಕವಾಗಿ ಕೋವಿಡ್ ಲಸಿಕೆ ನೀಡುವ ಬಗ್ಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

  ಕಿಚ್ಚ ಸರ್ ನನ್ನ ಆಯಸ್ಸೆಲ್ಲಾ‌ ನಿಮಗಿರಲಿ ಎಂದು ಕಣ್ಣೀರಿಟ್ಟ ಮಹಿಳೆ | Filmibeat Kannada

  'ಮದಗಜ' ಚಿತ್ರದ ನಾಯಕ ಶ್ರೀಮುರಳಿ, ನಟಿ ಆಶಿಕಾ ರಂಗನಾಥ್, ನಿರ್ದೇಶಕ ಮಹೇಶ್ ಕುಮಾರ್ ಕೋವಿಡ್ ಲಸಿಕೆ ಪಡೆದಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ನಟಿ ರಮ್ಯಾಕೃಷ್ಣ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಹಲವು ಸಿನಿಮಾ ಕಲಾವಿದರು ಲಸಿಕೆ ಹಾಕಿಸಿಕೊಂಡಿದ್ದಾರೆ.

  English summary
  Sa Ra Govindu, Naganna, Saffire Venkatesh and KM Veeresh met Minister sudhakar and requested to give COVID vaccination for film industry members.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X