ರಾಜ್ ಕಿಡ್ನಾಪ್ ಪ್ರಕರಣದ ತೀರ್ಪು : ಸಾರಾ ಗೋವಿಂದು ಪ್ರತಿಕ್ರಿಯೆ
Recommended Video

ನಟ ಸಾರ್ವಭೌಮ ಡಾ ರಾಜ್ ಕುಮಾರ್ ಅವರ ಅಪಹರಣ ಪ್ರಕರಣದ ತೀರ್ಪು ಬಂದಿದ್ದು, ತಮಿಳುನಾಡಿನ ಈರೋಡ್ ಜಿಲ್ಲಾ ನ್ಯಾಯಾಲಯ 9 ಆರೋಪಿಗಳನ್ನು ಈ ಪ್ರಕರಣದಿಂದ ಖುಲಾಸೆಗೊಳಿಸುವಂತೆ ಆದೇಶ ನೀಡಿದೆ.
ಈ ತೀರ್ಪಿನ ಬಗ್ಗೆ ಈಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ರಾಜ್ ಕುಟುಂಬದ ಆಪ್ತ ಸಾರಾ ಗೋವಿಂದು ಪ್ರಕ್ರಿಯೆ ನೀಡಿದ್ದಾರೆ. ಈ ತೀರ್ಪು ನನಗೆ ಸಮಾಧಾನ ನೀಡಿಲ್ಲ ಎಂದು ಹೇಳಿದ್ದಾರೆ.
ಅಂದಹಾಗೆ, ಸೂಕ್ತ ಸಾಕ್ಷ್ಯ ಆಧಾರ ಇಲ್ಲದ ಕಾರಣ ಕಿಡ್ನಾಪ್ ಆರೋಪವನ್ನು ಸಾಬೀತು ಮಾಡಲು ಸಾಧ್ಯ ಆಗಿಲ್ಲ. ಇನ್ನು ರಾಜ್ ಕುಮಾರ್ ಕಿಡ್ನಾಪ್ ತೀರ್ಪಿನ ಬಗ್ಗೆ ಸಾ ರಾ ಗೋವಿಂದು ನೀಡಿರುವ ಹೇಳಿಕೆ ಮುಂದಿದೆ ಓದಿ...

ಅವರಿಗೆ ಶಿಕ್ಷೆ ಆಗುತ್ತದೆ ಎಂದುಕೊಂಡಿದ್ದೆ
''ತೀರ್ಪಿನ ಬಗ್ಗೆ ನನಗೆ ಎಲ್ಲೋ ಒಂದು ಕಡೆ ಸಮಾಧಾನ ಇಲ್ಲ. ಆದರೂ ನ್ಯಾಯಾಲಯ ಕೊಟ್ಟ ತೀರ್ಪಿಗೆ ತಲೆ ಬಾಗಬೇಕಿದೆ. ನಾನು ಅವರಿಗೆ ಶಿಕ್ಷೆ ಆಗುತ್ತದೆ ಎಂದುಕೊಂಡಿದ್ದೆ. ಸರಿಯಾದ ಮಾಹಿತಿ ಹಾಗೂ ಸಾಕ್ಷಿ ನೀಡದೆ ಇರುವ ಕಾರಣ ಈ ರೀತಿ ತೀರ್ಪು ಬಂದಿರಬಹುದು'' - ಸಾ ರಾ ಗೋವಿಂದು, ಫಿಲ್ಮ್ ಚೆಂಬರ್ ಮಾಜಿ ಅಧ್ಯಕ್ಷ.

18 ವರ್ಷ ತೆಗೆದುಕೊಂಡು ಈ ತೀರ್ಪು ನೀಡಿದ್ದಾರೆ
''18 ವರ್ಷ ತೆಗೆದುಕೊಂಡು ಈ ತೀರ್ಪು ನೀಡಿದ್ದಾರೆ. ಈ ರೀತಿ ತೀರ್ಪು ಬಂದರೆ ಯಾರಿಗೂ ಭಯ ಇರುವುದಿಲ್ಲ. ಕೆಟ್ಟ ಕೆಲಸ ಮಾಡುವವರು ನಮ್ಮ ಕೇಸ್ ಕೂಡ ಖುಲಾಸೆ ಆಗುತ್ತದೆ ಎಂದು ತಿಳಿಯುತ್ತಾರೆ. ಅಂತಹ ಭಾವನೆಗಳ ಜನರಲ್ಲಿ ಮೂಡುತ್ತದೆ.'' - ಸಾ ರಾ ಗೋವಿಂದು, ಫಿಲ್ಮ್ ಚೆಂಬರ್ ಮಾಜಿ ಅಧ್ಯಕ್ಷ.

ಅನಿವಾರ್ಯವಾಗಿ ಒಪ್ಪಬೇಕಿದೆ
''ಈರೋಡ್ ಜಿಲ್ಲಾ ನ್ಯಾಯಾಲಯದಿಂದ ಬಂದಿರುವ ತೀರ್ಪು ಸಮಾಧಾನ ನೀಡಿಲ್ಲ. ಆಗಿದ್ದರೂ ಅನಿವಾರ್ಯವಾಗಿ ಅದನ್ನು ಒಪ್ಪಬೇಕಿದೆ. ನಾವು ಸಂವಿಧಾನದ ಪ್ರಕಾರ ಬದುಕುವ ಜನರು. ಹಾಗಾಗಿ ಈ ತೀರ್ಪಿಗೆ ನಾನು ತಲೆಬಾಗುತ್ತೇನೆ.'' - ಸಾ ರಾ ಗೋವಿಂದು, ಫಿಲ್ಮ್ ಚೆಂಬರ್ ಮಾಜಿ ಅಧ್ಯಕ್ಷ.

ಆರೋಪಿಗಳಿಗೆ ಬಿಡುಗಡೆಯ ಭಾಗ್ಯ
2000 ರಲ್ಲಿ ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದ್ದ. ಆದರೆ, ಅದರ ವಿಚಾರಣೆ 11 ವರ್ಷಗಳ ಬಳಿಕ ಅಂದರೆ 2011 ರಲ್ಲಿ ಶುರು ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಮಂದಿಗಳ ಮೇಲೆ ಆರೋಪ ಇತ್ತು. 13 ಆರೋಪಿಗಳಲ್ಲಿ ವೀರಪ್ಪನ್, ಸೇತುಕುಳಿ ಗೋವಿಂದನ್ ಸೇರಿದಂತೆ 4 ಮಂದಿ ನಿಧನ ಹೊಂದಿದ್ದಾರೆ. ಉಳಿದವರಿಗೆ ಈಗ ಬಿಡುಗಡೆಯ ಭಾಗ್ಯ ಸಿಕ್ಕಿದೆ.


Click it and Unblock the Notifications











