For Quick Alerts
  ALLOW NOTIFICATIONS  
  For Daily Alerts

  ಮೇಘನಾ ಜೊತೆಗೆ ಹಸೆಮಣೆ ಏರಿದ ಅನೂಪ್ ಸಾ.ರಾ. ಗೋವಿಂದು

  By Naveen
  |
  ಮೇಘನಾ ಜೊತೆಗೆ ಹಸೆಮಣೆ ಏರಿದ ಅನೂಪ್ ಸಾ.ರಾ. ಗೋವಿಂದು | Oneindia Kannada

  ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ. ಗೋವಿಂದು ಅವರ ಪುತ್ರ ಅನೂಪ್ ಸಾ.ರಾ. ಗೋವಿಂದು ಅವರ ವಿವಾಹ ಇಂದು ಅದ್ದೂರಿಯಾಗಿ ನೆರವೇರಿದೆ. ಇಂದು ಯಲಹಂಕದ ಇಬಿಸು ಕನ್ವೆಷನಲ್ ಹಾಲ್‌ನಲ್ಲಿ ವಿವಾಹ ಮಹೋತ್ಸವ ಜರುಗಿದೆ.

  ಮೇಘನಾ ಜೊತೆಗೆ ಅನೂಪ್ ಸಾ.ರಾ. ಗೋವಿಂದು ಹಸೆಮಣೆ ಏರಿದ್ದಾರೆ. ಇಂದು ಬೆಳ್ಳಗೆ 10.15 ರ ಶುಭ ಮೇಷ ಲಗ್ನದಲ್ಲಿ ಮುಹೂರ್ತ ಕಾರ್ಯಕ್ರಮ ನಡೆದಿದೆ. ತಿರುಪತಿ ಶೈಲಿಯ ಮಂಟಪದ ಅಡಿಯಲ್ಲಿ ಅನೂಪ್, ಮೇಘನಾ ಅವರಿಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ನವ ದಂಪತಿ ಚಿತ್ರರಂಗ ಅನೇಕ ಗಣ್ಯರು ಬಂದು ಶುಭ ಹಾರೈಸಿದ್ದಾರೆ.

  ಅನುಪ್ ಸಾ.ರಾ.ಗೋವಿಂದು ಗೋಲ್ಡನ್ ಬಣ್ಣದ ಶೇರ್ವಾನಿ ತೊಟ್ಟಿದ್ದು, ಕ್ರೀಮ್‌ ಮತ್ತು ಪಿಂಕ್ ಬಣ್ಣದ ಬಾರ್ಡರ್ ಸೀರೆಯಲ್ಲಿ ಮೇಘನಾ ಮಿಂಚಿದರು. ಅಂದಹಾಗೆ, ನಿನ್ನೆ ಅನೂಪ್ ಸಾ.ರಾ. ಗೋವಿಂದು ಮತ್ತು ಮೇಘನಾ ಅವರ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ನಟ ಪುನೀತ್ ರಾಜ್ ಕುಮಾರ್, ರಮೇಶ್, ಮಾಲಾಶ್ರೀ, ಪ್ರೇಮಾ, ದೇವರಾಜ್, ನಿರ್ದೇಶಕ ಭಾರ್ಗವ ಸೇರಿದಂತೆ ಸಿನಿಮಾ ರಂಗದ ಸಾಕಷ್ಟು ಮಹನೀಯರುಗಳು ಆಗಮಿಸಿದ್ದರು.

  ಅಂದಹಾಗೆ, ಅನೂಪ್ ಸಾ.ರಾ. ಗೋವಿಂದು ಮತ್ತು ಮೇಘನಾ ಆರತಕ್ಷತೆಯ ಫೋಟೋಗಳು ಇಲ್ಲಿದೆ ನೋಡಿ...

  English summary
  Karnataka Film Chamber Of Commerce president Sa Ra Govindu son Anup Sa Ra Govindu and Manasa have tied the knot in Bengaluru Today (February 19).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X