»   » ಮತ್ತೆ ಸುದ್ದಿಯಾದ ಕನ್ನಡದ ನಟಿ ಪವಿತ್ರ ಗೌಡ

ಮತ್ತೆ ಸುದ್ದಿಯಾದ ಕನ್ನಡದ ನಟಿ ಪವಿತ್ರ ಗೌಡ

Posted By:
Subscribe to Filmibeat Kannada
ನಟಿ ಪವಿತ್ರ ಗೌಡ ಮತ್ತೆ ಸುದ್ದಿಯಲ್ಲಿದ್ದಾರೆ | Filmibeat kannada

ಕನ್ನಡದ ನಟಿ ಪವಿತ್ರ ಗೌಡ ಈಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಕಾರಣ ಅವರ ಹೊಸ ಸಿನಿಮಾ ಇದೇ ತಿಂಗಳು ಬಿಡುಗಡೆಯಾಗುತ್ತಿದೆ. ಪವಿತ್ರ ಗೌಡ ಅಭಿನಯಿಸಿರುವ 'ಸಾಗುವ ದಾರಿಯಲಿ' ಸಿನಿಮಾ ಏಪ್ರಿಲ್ ನಲ್ಲಿ ತೆರೆಗೆ ಬರುತ್ತಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು ಅವರ ಪುತ್ರ ಅನೂಪ್ ಸಾ.ರಾ.ಗೋವಿಂದು ಚಿತ್ರದ ನಾಯಕರಾಗಿದ್ದಾರೆ.

ವಾಸ್ತವವಾಗಿ ಈ ಸಿನಿಮಾ ಅನೇಕ ವರ್ಷಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ ಅಂತೂ ಸಿನಿಮಾ ಈಗ ರಿಲೀಸ್ ಆಗುತ್ತಿದೆ. 'ಸಾಗುವ ದಾರಿಯಲಿ' ಬಂದ ಎಲ್ಲ ಅಡೆತಡೆಗಳನ್ನು ಎದುರಿಸಿ ಈ ಸಿನಿಮಾ ಚಿತ್ರಮಂದಿರ ತಲುಪಿದೆ. ಶಿವಶಂಕರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಅವರ ಬದುಕಿನಲ್ಲಿ ಆದ ಘಟನೆಗಳನ್ನು ಇಟ್ಟುಕೊಂಡು ಕಥೆ ಮಾಡಿದ್ದಾರೆ. 2011 ನಡೆದ ನೈಜ ಘಟನೆಯ ಮೇಲೆ ಸಿನಿಮಾ ಸಾಗುತ್ತದೆ.

ದರ್ಶನ್ ಕುಟುಂಬದ ಜೊತೆ ಪವಿತ್ರ ಪೋಟೋ ವೈರಲ್

Saaguva Daariyalli kannada movie will releasing on April 20th

ಸೈನಿಕನ ಪಾತ್ರದಲ್ಲಿ ನಟ ದೇವರಾಜ್ ಕಾಣಿಸಿಕೊಂಡಿದ್ದಾರೆ. ಸಾಧುಕೋಕಿಲ, ಬುಲೇಟ್ ಪ್ರಕಾಶ್, ರಂಗಾಯಣ ರಘು, ಮಜಾ ಟಾಕೀಸ್ ಪವನ್, ಜಹಂಗೀರ್ ಚಿತ್ರದಲ್ಲಿ ನಗಿಸಲಿದ್ದಾರೆ. ಶರಣ್ ಲೋಹಿತಾಶ್ವ ಪೊಲೀಸ್ ಪಾತ್ರವನ್ನು ನಿರ್ವಹಿಸಿದ್ದಾರೆ. 'ಸಾಗುವ ದಾರಿಯಲಿ' ಸಿನಿಮಾ ಏಪ್ರಿಲ್ 20ಕ್ಕೆ ರಾಜ್ಯಾದಂತ್ಯ ಬಿಡುಗಡೆಯಾಗುತ್ತಿದೆ.

ದರ್ಶನ್ ಮತ್ತು ಪವಿತ್ರ ಗೌಡ ಬಗ್ಗೆ ಅಚ್ಚರಿ ಬೆಳವಣಿಗೆ.! ಯಾಕ್ಹೀಗಾಯ್ತು.?

English summary
Kannada actress Pavithra Gowda and Anup Sa Ra Govindu's 'Saaguva Daariyalli' kannada movie will releasing on April 20th

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X