'ಸಾಹೋ' ಚೆನ್ನಾಗಿಲ್ಲ ಅಂತಾರೆ: 5 ದಿನದ ಕಲೆಕ್ಷನ್ ನೋಡಿದ್ರೆ ಧೂಳೆಬ್ಬಿಸಿದೆ
Recommended Video
ಪ್ರಭಾಸ್ ಮತ್ತು ಶ್ರದ್ಧಾ ಕಪೂರ್ ನಟಿಸಿರುವ ಸಾಹೋ ಸಿನಿಮಾ ಕಳೆದ ವಾರ ತೆರೆಕಂಡಿದೆ. ಮೊದಲ ದಿನದಿಂದಲೂ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ನಿರೀಕ್ಷೆಯಂತೆ ಇಲ್ಲ, ಸಾಹೋ ಹೇಳಿಕೊಳ್ಳುವಂತಿಲ್ಲ ಎಂದು ಪ್ರೇಕ್ಷಕರು ಅಭಿಪ್ರಾಯ ಹೊರಹಾಕಿದ್ದಾರೆ.
ಆದರೆ ಕಲೆಕ್ಷನ್ ಮೇಲೆ ಇದು ಯಾವುದೇ ಪರಿಣಾಮ ಬೀರಿಲ್ಲ. ಮೊದಲ ದಿನದಿಂದಲೂ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುತ್ತಿರುವ ಸಾಹೋ ಐದು ದಿನದಲ್ಲಿ ದಾಖಲೆಯ ಗಳಿಕೆ ಕಂಡಿದೆ.
ಸೌತ್ ಇಂಡಿಯಾದಲ್ಲಿ ಮಾತ್ರವಲ್ಲ ಆ ಕಡೆ ಬಾಲಿವುಡ್ ನಲ್ಲಿ ಸಾಹೋ ರೆಕಾರ್ಡ್ ಗಳನ್ನ ಧೂಳಿಪಟ ಮಾಡಿದೆ. ಹಾಗಿದ್ರೆ, ಐದು ದಿನದಲ್ಲಿ ಸಾಹೋ ಗಳಿಸಿದ್ದೆಷ್ಟು?

ಹಿಂದಿಯಲ್ಲಿ ನೂರು ಕೋಟಿ
'ಸಾಹೋ' ಸಿನಿಮಾ ಬರ ಹಿಂದಿಯಲ್ಲಿ ಮಾತ್ರ ನೂರು ಕೋಟಿ ಗಳಿಕೆ ಕಂಡಿದೆ. ಈ ಮೂಲಕ ಪ್ರಭಾಸ್ ಅಭಿನಯದ ಮೂರನೇ ಹಿಂದಿ ಚಿತ್ರ ಈ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಐದು ದಿನದಲ್ಲಿ 102 ಕೋಟಿ ಬಾಚಿಕೊಂಡಿದೆ. ಈ ಬಗ್ಗೆ ಖ್ಯಾತ ಸಿನಿಮಾ ವಿಶ್ಲೇಷಕ ಟ್ವೀಟ್ ಮಾಡಿದ್ದಾರೆ.

ಐದು ದಿನದಲ್ಲಿ 350 ಕೋಟಿ
ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಿದ್ದ ಸಾಹೋ ಸಿನಿಮಾ 350 ಕೊಟಿ ಬಜೆಟ್ ನಲ್ಲಿ ತಯಾರಾಗಿತ್ತು. ಜಗತ್ತಿನಾದ್ಯಂತ ತೆರೆಕಂಡಿದ್ದ ಈ ಚಿತ್ರ ಮೊದಲ ಐದು ದಿನದಲ್ಲಿ 350 ಕೋಟಿ ಕಲೆಕ್ಷನ್ ಮಾಡಿದೆ ಎಂದು ಸ್ವತಃ ನಿರ್ಮಾಪಕ ಸಂಸ್ಥೆ ಯುವಿ ಕ್ರಿಯೇಷನ್ಸ್ ಅಧಿಕೃತವಾಗಿ ಟ್ವೀಟ್ ಮಾಡಿದೆ.

ವರ್ಷದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ
ಈ ವರ್ಷ ಬಿಡುಗಡೆಯಾದ ಚಿತ್ರಗಳ ಪೈಕಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಸಾಹೋ. ಇದಕ್ಕೂ ಮುಂಚೆ ಹಿಂದಿಯ ಕಬೀರ್ ಸಿಂಗ್ 278 ಕೋಟಿ, ಭಾರತ್ 211 ಕೋಟಿ, ಅಕ್ಷಯ್ ಕುಮಾರ್ ಅವರ ಮಿಷನ್ ಮಂಗಲ್ 188 ಕೋಟಿ ಗಳಿಸಿದ್ದೆ ದಾಖಲೆ. ಈಗ ಸಾಹೋ 350 ಕೋಟಿ ಕಲೆಕ್ಷನ್ ಮಾಡಿದೆ.

'ಬಾಹುಬಲಿ' ದಾಖಲೆ ಮುಟ್ಟುತ್ತಾ?
'ಬಾಹುಬಲಿ ದಿ ಬಿಗಿನಿಂಗ್' 650 ಕೋಟಿ ಹಾಗೂ 'ಬಾಹುಬಲಿ ದಿ ಕನ್ ಕ್ಲೂಷನ್' 1800 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ. ಸಾಹೋ ಸಿನಿಮಾದ ವೇಗ ನೋಡಿದ್ರೆ ಬಾಹುಬಲಿ ಮೊದಲ ಭಾಗದ ದಾಖಲೆ ಬ್ರೇಕ್ ಮಾಡುತ್ತಾ ಎಂಬ ಕುತೂಹಲ ಹುಟ್ಟಿಕೊಂಡಿದೆ.


Click it and Unblock the Notifications











