twitter
    For Quick Alerts
    ALLOW NOTIFICATIONS  
    For Daily Alerts

    'ಸಾಹೋ' ಸ್ವಂತ ಚಿತ್ರವಲ್ಲ: ಫ್ರೆಂಚ್ ಭಾಷೆಯಿಂದ ಕದ್ದ ಮಾಲು

    |

    Recommended Video

    Saaho movie : ಸಾಹೂ ಫ್ರೆಂಚ್ ಭಾಷೆಯಿಂದ ಕದ್ದ ಮಾಲು

    'ಬಾಹುಬಲಿ' ನಂತರ ಪ್ರಭಾಸ್ ನಟಿಸಿದ ಚಿತ್ರ 'ಸಾಹೋ' ಜನರ ಮನಸ್ಸು ಗೆಲ್ಲುವಲ್ಲಿ ಸೋಲು ಕಂಡಿದೆ. ನಿರೀಕ್ಷಿಸಿದಂತೆ ಸಿನಿಮಾ ಬಂದಿಲ್ಲ, ವಿಡಿಯೋ ಗೇಮ್ ಮಾಡಿದಂತಿದೆ ಎಂದು ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

    ಹಾಗಿದ್ದರೂ ಕಲೆಕ್ಷನ್ ನಲ್ಲಿ ಹಿಂದೆ ಬೀಳದ ಸಾಹೋ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡ್ತಿದೆ. ಹೀಗಿರುವಾಗ ಸಾಹೋ ಸ್ವಮೇಕ್ ಚಿತ್ರವಲ್ಲ ಎಂಬ ಅಚ್ಚರಿ ವಿಷಯ ಬಹಿರಂಗವಾಗಿದೆ. ಫ್ರೆಂಚ್ ಚಿತ್ರದಿಂದ ಕಾಪಿ ಮಾಡಲಾಗಿದೆ ಎಂಬ ಆರೋಪಕ್ಕೆ ಪ್ರಭಾಸ್ ಚಿತ್ರ ಗುರಿಯಾಗಿದೆ.

    Saaho Day 1 Collection: ಅವೆಂಜರ್ ಉಡೀಸ್, ಬಾಹುಬಲಿ ಮುಟ್ಟದ ಸಾಹೋSaaho Day 1 Collection: ಅವೆಂಜರ್ ಉಡೀಸ್, ಬಾಹುಬಲಿ ಮುಟ್ಟದ ಸಾಹೋ

    ಸ್ವತಃ ಫ್ರೆಂಚ್ ಚಿತ್ರದ ನಿರ್ದೇಶಕರೇ ಈ ವಿಷಯವನ್ನ ಪ್ರಸ್ತಾಪಿಸಿದ್ದು, ಸಾಹೋ ಡೈರೆಕ್ಟರ್ ವಿರುದ್ಧ ಆರೋಪ ಮಾಡಿದ್ದಾರೆ. ಇಂತಹ ಸಿನಿಮಾ ಮಾಡಿ ಚಿತ್ರರಂಗಕ್ಕೆ ಯಾಕೆ ಅಪಮಾನ ಮಾಡುತ್ತೀರಾ ಎಂದು ಛೀಮಾರಿ ಹಾಕಿದ್ದಾರೆ. ಅಷ್ಟಕ್ಕೂ, ಆ ಫ್ರೆಂಚ್ ಸಿನಿಮಾ ಯಾವುದು? ಮುಂದೆ ಓದಿ....

    ಸಾಹೋ ಸ್ವಮೇಕ್ ಚಿತ್ರವಲ್ಲ

    ಸಾಹೋ ಸ್ವಮೇಕ್ ಚಿತ್ರವಲ್ಲ

    'ಸಾಹೋ ಸಿನಿಮಾ ಕದ್ದ ಚಿತ್ರ' ಎಂದು ಫ್ರೆಂಚ್ ನಿರ್ದೇಶಕ ಜೆರೋಮ್ ಸಲ್ಲೆ ಆರೋಪಿಸಿದ್ದಾರೆ. 2008ರಲ್ಲಿ ತೆರೆಕಂಡಿದ್ದ 'ಲಾರ್ಗೊ ವಿಂಚ್' ಚಿತ್ರವನ್ನ ರೀಮೇಕ್ ಮಾಡಿದ್ದಾರೆ ಎಂದು ಜೆರೋಮ್ ಸಲ್ಲೆ ಸಾಹೋ ಡೈರೆಕ್ಟರ್ ವಿರುದ್ಧ ದೂರಿದ್ದಾರೆ.

    Sahoo Review: ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚುSahoo Review: ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು

    ಲಾರ್ಗೊ ವಿಂಚ್ ಚಿತ್ರದ ಫ್ರೀಮೆಕ್

    ಲಾರ್ಗೊ ವಿಂಚ್ ಚಿತ್ರದ ಫ್ರೀಮೆಕ್

    ಈ ಬಗ್ಗೆ ಟ್ವಿಟ್ಟರ್ ನಲ್ಲಿ ಕಾಮೆಂಟ್ ಮಾಡಿರುವ ಜೆರೋಮ್ ''ಲಾರ್ಗೊ ವಿಂಚ್ ಚಿತ್ರದ ಫ್ರೀಮೆಕ್ ಇದ್ದಂತೆ. ಆದರೂ ಅದಕ್ಕಿಂತಲೂ ಕೆಟ್ಟದಾಗಿ ಸಿನಿಮಾ ಮಾಡಲಾಗಿದೆ. ತೆಲುಗು ನಿರ್ದೇಶಕರೇ ನನ್ನ ಕೆಲಸವನ್ನ ಕಾಪಿ ಮಾಡ್ತೀರಾ, ಅದನ್ನಾದರೂ ಸರಿಯಾಗಿ ಮಾಡಿ'' ಎಂದು ವ್ಯಂಗ್ಯ ಮಾಡಿದ್ದಾರೆ.

    Saaho Twitter Review: ಪ್ರಭಾಸ್ ಇಷ್ಟ, ಸಾಹೋ ನೋಡೋಕೆ ಕಷ್ಟSaaho Twitter Review: ಪ್ರಭಾಸ್ ಇಷ್ಟ, ಸಾಹೋ ನೋಡೋಕೆ ಕಷ್ಟ

    ನನಗೆ ಭಾರತದಲ್ಲಿ ಭವಿಷ್ಯವಿದೆ

    ನನಗೆ ಭಾರತದಲ್ಲಿ ಭವಿಷ್ಯವಿದೆ

    ''ನನ್ನ ವೃತ್ತಿ ಜೀವನಕ್ಕೆ ಭಾರತದಲ್ಲಿ ಒಳ್ಳೆಯ ಭವಿಷ್ಯ ಎಂದು ಭಾವಿಸುತ್ತೇನೆ'' ಎಂದು ಹೇಳುವ ಮೂಲಕ ಸಾಹೋ ಸಿನಿಮಾ ಬಗ್ಗೆ ಟೀಕೆ ಮಾಡಿದ್ದಾರೆ. ಅಂದ್ಹಾಗೆ, ಲಾರ್ಗೊ ವಿಂಚ್ ಸಿನಿಮಾ ಎರಡು ಭಾಗಗಳಾಗಿ ಬಿಡುಗಡೆಯಾಗಿದೆ. 2008ರಲ್ಲಿ ಮೊದಲ ಭಾಗ ಹಾಗೂ 2011ರಲ್ಲಿ ಎರಡನೇ ಭಾಗ ಬಂದಿತ್ತು.

    ಅಜ್ಞಾತವಾಸಿ ಮೇಲೂ ಇದೇ ಆರೋಪ

    ಅಜ್ಞಾತವಾಸಿ ಮೇಲೂ ಇದೇ ಆರೋಪ

    ಅಂದ್ಹಾಗೆ, ಜೆರೋಮ್ ಸಲ್ಲೆ ತೆಲುಗು ಚಿತ್ರದ ಮೇಲೆ ಇಂತಹ ಆರೋಪ ಮಾಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಪವನ್ ಕಲ್ಯಾಣ್ ಅಭಿನಯಿಸಿದ್ದ 'ಅಜ್ಞಾತವಾಸಿ' ಚಿತ್ರವೂ ಫ್ರೆಂಚ್ ಚಿತ್ರದಿಂದ ಕಾಪಿ ಮಾಡಲಾಗಿದೆ ಎಂದು ದೂರಿದ್ದರು.

    English summary
    Prabhas and Shraddha kapoor starrer saaho is not a swamake film. filmmaker Jerome Salle accused saaho copy from french movie.
    Tuesday, September 3, 2019, 15:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X