For Quick Alerts
  ALLOW NOTIFICATIONS  
  For Daily Alerts

  'ತಮಿಳ್ ರಾಕರ್ಸ್' ಅಟ್ಟಹಾಸಕ್ಕೆ 'ಸಾಹೋ' ಬಲಿ

  |

  ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಜಗತ್ತಿನಾದ್ಯಂತ ತೆರೆಕಂಡಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರೇಕ್ಷಕರು ನಿರಾಸೆಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಮೊದಲ ಶೋ ಮುಗಿಯುತ್ತಿದ್ದಂತೆ ಸಾಹೋಗೆ ಟಕ್ಕರ್ ಕೊಟ್ಟಿದ್ದಾರೆ ತಮಿಳ್ ರಾಕರ್ಸ್.

  ಹೊಸ ಸಿನಿಮಾಗಳ ಪಾಲಿಗೆ ವಿಲನ್ ಆಗಿರುವ ತಮಿಳ್ ರಾಕರ್ಸ್ ಪೈರಸಿ ವೆಬ್ ಸೈಟ್ ಸಾಹೋ ಚಿತ್ರವನ್ನ ಲೀಕ್ ಮಾಡಿದ್ದಾರೆ. ಸುಮಾರು 350 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಚಿತ್ರಕ್ಕೆ ಪೈರಸಿ ಸಂಕಷ್ಟ ಎದುರಾಗಿದೆ.

  Saaho Twitter Review: ಪ್ರಭಾಸ್ ಇಷ್ಟ, ಸಾಹೋ ನೋಡೋಕೆ ಕಷ್ಟSaaho Twitter Review: ಪ್ರಭಾಸ್ ಇಷ್ಟ, ಸಾಹೋ ನೋಡೋಕೆ ಕಷ್ಟ

  Saaho movie Public opinion | FILMIBEAT KANNADA

  ಸಿನಿಮಾಗೆ ಮಿಶ್ರಪ್ರತಿಕ್ರಿಯೆ ದೊರೆತಿದೆ. ಹೀಗಿರುವಾಗ ಸಿನಿಮಾ ಬೇರೆ ಲೀಕ್ ಆಗಿದೆ. ಹಾಗಾಗಿ, ಚಿತ್ರಮಂದಿರಕ್ಕೆ ಹೋಗುವ ಮನಸ್ಸು ಮಾಡುವುದಿಲ್ಲ ಪ್ರೇಕ್ಷಕರು. ಇದರಿಂದ ಗಳಿಕೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ.

  ಸಾಹೋ ರಿಲೀಸ್ ಆಗುತ್ತಿರುವ ವಿಶೇಷವಾಗಿ ಟ್ವೀಟ್ ಮಾಡಿದ್ದ ನಾಯಕಿ ಶ್ರದ್ಧಾ ಕಪೂರ್, ''ದೊಡ್ಡ ತೆರೆಯಲ್ಲಿ ಸಾಹೋ ಬರ್ತಿದೆ, ಪೈರಸಿಗೆ ಪ್ರೋತ್ಸಾಹ ಕೊಡಬೇಡಿ. ಚಿತ್ರಮಂದಿರಕ್ಕೆ ಬನ್ನಿ'' ಎಂದು ಮನವಿ ಮಾಡಿದ್ದರು.

  Sahoo Review: ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚುSahoo Review: ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು

  ಆದರೆ ಮೊದಲ ಶೋ ಪ್ರದರ್ಶನ ಮುಗಿಯುವಷ್ಟರಲ್ಲೇ ಸಾಹೋ ಲೀಕ್ ಆಗಿದೆ. ತಮಿಳ್ ರಾಕರ್ಸ್ ವೆಬ್ ಸೈಟ್ ಬ್ಯಾನ್ ಮಾಡಬೇಕು ಎಂದು ಅನೇಕ ಚಿತ್ರೋಧ್ಯಮಿಗಳು ಪ್ರತಿಭಟನೆ ಮಾಡಿದ್ದಾರೆ. ಅದಕ್ಕೆ ಯಾವುದೇ ರೀತಿಯ ಸ್ಪಂದನೆ ಸಿಗುತ್ತಿಲ್ಲ.

  ನಟಸಾರ್ವಭೌಮ, ಯಜಮಾನ, ಕುರುಕ್ಷೇತ್ರ ಹೀಗೆ ಕನ್ನಡದ ಹಲವು ಚಿತ್ರಗಳನ್ನ ತಮಿಳ್ ರಾಕರ್ಸ್ ಪೈರಸಿ ಮಾಡಿದ್ದಾರೆ.

  English summary
  Prabhas and Shraddha Kapoor starrer saaho full movie leaked in online. today morning saaho movie officially released in theaters.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X