ಸುದೀಪ್ 'ಪೈಲ್ವಾನ್' ಚಿತ್ರದ ಬಿಡುಗಡೆಗಿದ್ದ ಆತಂಕ ಮಾಯ.!

Recommended Video

Pailvan Movie: ಸುದೀಪ್ ಚಿತ್ರದ ಬಿಡುಗಡೆಗಿದ್ದ ಆತಂಕ ಮಾಯ.!

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ಬರುತ್ತೆ ಎನ್ನಲಾಗಿತ್ತು. ನಂತರ ಅದೇ ದಿನಾಂಕದಲ್ಲಿ ದರ್ಶನ್ ಕುರುಕ್ಷೇತ್ರ ಬರುವುದಾಗಿ ಘೋಷಣೆ ಆಯ್ತು. ಬಳಿಕ ಪೈಲ್ವಾನ್ ಸಿನಿಮಾ ಎರಡು ವಾರ ಮುಂದಕ್ಕೆ ಹೋಗುವ ನಿರ್ಧಾರಕ್ಕೆ ಬಂತು.

ಆಗಸ್ಟ್ 8 ರಿಂದ ಆಗಸ್ಟ 29ಕ್ಕೆ ಮುಂದಕ್ಕೆ ಹೋಗಿದ್ದ ಪೈಲ್ವಾನ್ ಚಿತ್ರಕ್ಕೆ ಅಲ್ಲಿಯೂ ಆತಂಕ ಎದುರಾಯ್ತು. ಆಗಸ್ಟ್ 8ಕ್ಕೆ ಬಂದಿದ್ದರೇ ಒಂದು ಕಡೆ ಕುರುಕ್ಷೇತ್ರ ಇನ್ನೊಂದು ಕಡೆ ಪ್ರಭಾಸ್ ಅಭಿನಯದ ಸಾಹೋ ಚಿತ್ರಗಳ ಜೊತೆ ಫೈಟ್ ಎದುರಿಸಬೇಕಿತ್ತು.

ಈ ಸಹವಾಸವೇ ಬೇಡ ಎಂದು ಮುಂದಕ್ಕೆ ಹೋದ ಪೈಲ್ವಾನ್ ಗೆ ಮತ್ತೆ ಸಾಹೋ ಸಿನಿಮಾ ಆತಂಕ ನೀಡಿತ್ತು. ಯಾಕಂದ್ರೆ, ಆಗಸ್ಟ್ 15ಕ್ಕೆ ಘೋಷಿಸಿಕೊಂಡಿದ್ದ ಸಾಹೋ ಆಗಸ್ಟ್ 29ಕ್ಕೆ ಬರುವ ನಿರ್ಧಾರ ಮಾಡಿತ್ತು. ಇದೀಗ, ಸಾಹೋ ಬಿಡುಗಡೆ ಮತ್ತಷ್ಟು ಮುಂದಕ್ಕೆ ಹೋಗಿದೆ ಎನ್ನಲಾಗಿದೆ.

Saaho release date postponed again

ಸದ್ಯದ ಮಾಹಿತಿ ಪ್ರಕಾರ, ಸಾಹೋ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬರಲು ಸಜ್ಜಾಗುತ್ತಿದೆಯಂತೆ. ಹೀಗಾಗಿ, ಸುದೀಪ್ ಪೈಲ್ವಾನ್ ಈ ಹಿಂದೆ ನಿರ್ಧರಿಸಿರುವಂತೆ ಆಗಸ್ಟ್ 29ಕ್ಕೆ ಬರಬಹುದು. ಬಾಕ್ಸ್ ಆಫೀಸ್ ನಲ್ಲಿ ಫೈಟ್ ಆಗಬಹುದು ಎಂಬ ಲೆಕ್ಕಾಚಾರದಿಂದ ರಿಲೀಫ್ ಆಗಬಹುದು.

ಸದ್ಯಕ್ಕೆ ಈ ಎರಡು ಚಿತ್ರಗಳು ಅಧಿಕೃತವಾಗಿ ಬಿಡುಗಡೆ ದಿನಾಂಕ ಪ್ರಕಟ ಮಾಡಿಲ್ಲ. ಆದರೂ, ಇಂತಹದೊಂದು ನಿರ್ಧಾರ ಮಾಡಲಾಗಿದೆ ಎಂದು ಸಿನಿವಲಯದಲ್ಲಿ ಕೇಳಿಬಂದಿದೆ.

More from Filmibeat

English summary
iccha sudeep starrer pailwaan movie is set to release on august 29th. according to tollywood buzz prabhas starrer saaho also ready to release on same date. now, lateste report says saaho release postpone agian.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X