ಹೊಸವರ್ಷಕ್ಕೆ ಶಿವಣ್ಣನ ಹೊಸ ಸಿನಿಮಾ: ಆಕ್ಷನ್ ಕಟ್ ಹೇಳೋದು ದಿನಕರ್ ತೂಗುದೀಪ

ವಯಸ್ಸು 61 ಆದರೂ ಕೂಡ ನಟ ಶಿವರಾಜ್​ಕುಮಾರ್​ ಸ್ಯಾಂಡಲ್‌ವುಡ್‌ನಲ್ಲಿ ಸಕತ್ ಆಕ್ಟಿವ್ ಆಗಿರುವ ನಟ. ಈ ವರ್ಷದ ಎಜನಿಕಾಂತ್ ನಟನೆಯ ಜೈಲರ್ ಮೂಲಕ ತಮಿಳಿ ಸೇರಿದಂತೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಇದಲ್ಲದೇ 'ಘೋಸ್ಟ್' ಚಿತ್ರದ ಮೂಲಕ ತಾವು ಒರಿಜಿನಲ್ ಗ್ಯಾಂಗ್‌ಸ್ಟಾರ್ ಎಂಬುದನ್ನು ಸಾಬೀತು ಮಾಡಿದ್ದಾರೆ.

ಈಗ ಹೊಸ ವರ್ಷಕ್ಕೆ ಮತ್ತೊಂದು ವಿಭಿನ್ನ ಕತೆಯ ಸಿನಿಮಾ ಮೂಲಕ ಅಭಿಮಾಣಿಗಳಿಗೆ ಸರ್‌ಪ್ರೈಸ್ ನೀಡಲಿದ್ದಾರೆ. ಹೊಸ ಸಿನಿಮಾದ ವಿಶೇಷತೆ ಏನೆಂದರೇ ಇದಕ್ಕೆ ನಿರ್ದೇಶಕ ದಿನಕರ್​ ತೂಗುದೀಪ ಆಕ್ಷನ್ ಕಟ್ ಹೇಳಲಿದ್ದಾರೆ. ಸಾರಥಿ, ಜೊತೆ ಜೊತೆಯಲಿ, ನವಗ್ರಹ ಸೇರಿದಂತೆ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ನೀಡಿರುವ ದಿನಕರ್​ ತೂಗುದೀಪ ಅವರು ಶಿವಣ್ಣನಿಗೆ ನಿರ್ದೇಶನ ನೀಡಲಿದ್ದಾರೆ. ಇದು ಸಾಕಷ್ಟು ನಿರೀಕ್ಷೆ ಮೂಡಿಸಿದೆ.

 Saarathi Director Dinakar Thoogudeepa to Direct Shivarajkumars New Movie

ಶಿವಣ್ಣನ ಸಿನಿಮಾಗೆ ದಿನಕರ್​ ಆಕ್ಷನ್ ಕಟ್

ಸದಾ ಉತ್ಸಾಹದ ಚಿಲುಮೆಯಂತಿರುವ ಖ್ಯಾತ ನಟ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಲಿರುವ ನೂತನ ಚಿತ್ರ ಹೊಸವರ್ಷಕ್ಕೆ ಘೋಷಣೆಯಾಗಲಿದೆ. ಹೆಸರಾಂತ ನಿರ್ದೇಶಕ ದಿನಕರ್ ತೂಗುದೀಪ ಆಕ್ಷನ್ ಕಟ್ ಹೇಳಲಿರುವ ಹೆಸರಿಡದ ಸಿನಿಮಾಕ್ಕೆ, ಬಿಂದ್ಯಾ ಮೂವೀಸ್ ಲಾಂಛನದಲ್ಲಿ ಆರ್ ಕೇಶವ್ ಹಾಗೂ ಬಿ.ಎಸ್ ಸುಧೀಂದ್ರ ಬಂಡವಾಳ ಹೂಡುತ್ತಿದ್ದಾರೆ.

ಪಕ್ಕಾ ಮಾಸ್ ಹಾಗೂ ಕಮರ್ಷಿಯಲ್ ಕಥಾಹಂದರ ಹೊಂದಿರುವ ಈ ವಿಭಿನ್ನ ಕಥಾಹಂದರದ ಚಿತ್ರಕ್ಕೆ ಪ್ರಿಯದರ್ಶಿನಿ ರಾಮರೆಡ್ಡಿ ಕಥೆ ಬರೆದಿದ್ದಾರೆ. ಪ್ರೀ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗುತ್ತಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಯುತ್ತಿದೆ. ಮಹಾ ಶಿವರಾತ್ರಿ ಹಬ್ಬದ ವೇಳೆಗೆ ಹೊಸ ಸಿನಿಮಾದ ಶೀರ್ಷಿಕೆ ಬಿಡುಗಡೆಯಾಗಲಿದೆ.

 Saarathi Director Dinakar Thoogudeepa to Direct Shivarajkumars New Movie

ಸಾರಥಿ, ಜೊತೆ ಜೊತೆಯಲಿ, ನವಗ್ರಹ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾ ನೀಡಿರುವ ದಿನಕರ್ ತೂಗುದೀಪ ಈ ಬಾರಿ ಶಿವರಾಜಕುಮಾರ್ ಜೊತೆಗೆ ಕೈ ಜೋಡಿಸಿದ್ದಾರೆ. ಇಬ್ಬರ ಕಾಂಬಿನೇಶನ್‌ನಲ್ಲಿ ಮೂಡಿಬರಲಿರುವ ಈ ಚಿತ್ರದ ಕುರಿತು ಅಭಿಮಾನಿ ವಲಯದಲ್ಲಿ ಹಾಗೂ ಚಿತ್ರೋದ್ಯಮದಲ್ಲಿ ಸಾಕಷ್ಟು ನಿರೀಕ್ಷೆಯಿದೆ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕಳೆದ ವರ್ಷದ ಜೈಲರ್ ಮತ್ತು ಘೋಸ್ಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ತಮಿಳು ನಟ ಧನುಷ್ ಜೊತೆಗೆ ನಟಿಸಿರುವ ಬಹುನಿರೀಕ್ಷೆಯ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಪೊಂಗಲ್ ವೇಗೆ ಅಂದರೆ ಜನವರಿ 12ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.

'ಕ್ಯಾಪ್ಟನ್ ಮಿಲ್ಲರ್' ಚಿತ್ರವನ್ನು ಅರುಣ್ ಮಾಥೇಶ್ವರನ್ ನಿರ್ದೇಶಿಸಿದ್ದಾರೆ. ನಟ ಧನುಷ್ ಮತ್ತು ಶಿವರಾಜ್‌ಕುಮಾರ್ ಪ್ರಮುಖ ಪಾತ್ರದಲ್ಲಿದ್ದು, ಧನುಷ್‌ಗೆ ಜೋಡಿಯಾಗಿ ಪ್ರಿಯಾಂಕಾ ಮೋಹನನ್ ನಟಿಸಿದ್ದಾರೆ. ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಕಥೆ ಎಂದು ಟೀಸರ್ ತಿಳಿಸುತ್ತಿದೆ. ಇದೇ ಸಂದರ್ಭದಲ್ಲಿ ಶಿವಣ್ಣ ಮತ್ತು ದಿನಕರ್ ತೂಗುದೀಪ ಅವರ ಹೊಸ ಸಿನಿಮಾ ಘೋಷಣೆಯಾಗಿದೆ.

ಸದ್ಯಕ್ಕೆ ಡಾ. ಶಿವರಾಜ್ ಕುಮಾರ್ ಹ್ಯಾಟ್ರಿಕ್ ಹಿರೋದಿಂದ ಸೆಂಚುರಿ ಸ್ಟಾರ್ ಆಗಿದ್ದಾರೆ. 125 ಸಿನಿಮಾಗಳನ್ನು ಮಾಡಿರುವ ಅವರ ಕೈಯಲ್ಲಿ 10 ರಿಂದ 12 ಸಿನಿಮಾಗಳಿವೆ. ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ', ಗೀತಾ ಪಿಕ್ಚರ್ಸ್ ಲಾಂಛನದಡಿ 'ಬೈರತಿ ರಣಗಲ್', ಅರ್ಜುನ್ ಜನ್ಯ ನಿರ್ದೇಶನದ ಚಿತ್ರ, ಶಿವಣ್ಣ ಸೂರಿ ಕಾಂಬಿನೇಷನ್‌ನಲ್ಲಿ 'ಟಗರು-2' ಕೂಡ ಸುದ್ದಿಯಲ್ಲಿದೆ.

More from Filmibeat

English summary
Dinakar Thoogudeepa to Direct Shivarajkumar's new movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X