ಮಾಜಿ ಸಿಎಂ ಸದಾನಂದಗೌಡ ಆಕ್ಟಿಂಗ್ ಸುದ್ದಿ ಠುಸ್

'ಚೆಲ್ಲಾಪಿಲ್ಲಿ' ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಬಂದ ಹಿನ್ನೆಲೆಯಲ್ಲಿ ಮಾಧ್ಯಮ ಮಿತ್ರರು ಅವರನ್ನು ಸಂಪರ್ಕಿಸಿದಾಗ, ತಮಗೆ ಚಿತ್ರದಲ್ಲಿ ಅಭಿನಯಿಸುವಂತೆ ಆಫರ್ ಬಂದಿದ್ದು ನಿಜ. ಆದರೆ ತಾವು ಯಾವುದೆ ಚಿತ್ರವನ್ನು ಒಪ್ಪಿಕೊಂಡಿಲ್ಲ ಎಂದರು.
ತಾವು ಈಗಾಗಲೆ ರಾಜಕಾರಣದಲ್ಲಿದ್ದುಕೊಂಡೇ ಸಾಕಷ್ಟು ಆಕ್ಟಿಂಗ್ ಮಾಡಿದ್ದೇನೆ. ಸಿನೆಮಾದಲ್ಲಿ ಆಕ್ಟಿಂಗ್ ಮಾಡುವ ಯಾವುದೇ ಇರಾದೆ ನನಗಿಲ್ಲ. 'ಚೆಲ್ಲಾಪಿಲ್ಲಿ' ಚಿತ್ರದ ಉದ್ಘಾಟನೆಗೆ ಹೋಗಿದ್ದು ನಿಜ. ಆದರೆ ಆ ಚಿತ್ರದಲ್ಲಿ ತಾವು ಯಾವುದೇ ಪಾತ್ರವನ್ನು ಪೋಷಿಸುತ್ತಿಲ್ಲ ಎಂದರು.
ಸಾಯಿಕೃಷ್ಣ ಕುಡ್ಲ ನಿರ್ದೇಶನದ ಚಿತ್ರ ಇದಾಗಿದ್ದು ಮುಖ್ಯಭೂಮಿಕೆಯಲ್ಲಿ ವಿಜಯ ರಾಘವೇಂದ್ರ ಹಾಗೂ ಐಶ್ವರ್ಯಾ ನಾಗ್ ಇದ್ದಾರೆ. ಈ ಚಿತ್ರದಲ್ಲಿ ಸದಾನಂದಗೌಡ ಅವರು ಅತಿಥಿ ಪಾತ್ರ ಪೋಷಿಸಲಿದ್ದಾರೆ ಎನ್ನಲಾಗಿತ್ತು.
ಶಿನೆಸಿಟಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸುದೀಶ್ ಭಂಡಾರಿ, ಸುಕೇಶ್ ಭಂಡಾರಿ ನಿರ್ಮಿಸುತ್ತಿರುವ ಚಿತ್ರವಿದು. ಈ ಚಿತ್ರ ಔಟ್ ಅಂಡ್ ಔಟ್ ಮನರಂಜನಾತ್ಮಕವಾಗಿರುತ್ತದೆ. "Laughter is the best Medicine" ಎಂಬ ಆಂಗ್ಲ ನಾಣ್ಣುಡಿಗೆ ಅನ್ವರ್ಥವಾಗಿ ಈ ಚಿತ್ರವನ್ನು ತೆರೆಗೆ ತರುತ್ತಿರುವುದಾಗಿ ನಿರ್ದೇಶಕರ ತಿಳಿಸಿದ್ದರು. (ಒನ್ಇಂಡಿಯಾ ಕನ್ನಡ)


Click it and Unblock the Notifications











