ಮಾಜಿ ಸಿಎಂ ಸದಾನಂದಗೌಡ ಆಕ್ಟಿಂಗ್ ಸ್ಟೈಲ್ ನೋಡಿ
ಈಗಾಗಲೆ ರಾಜಕೀಯ ಬಣ್ಣದಲ್ಲಿ ಮಿಂದೆದ್ದಿರುವ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಅವರು ಈಗ ಸಿನಿಮಾ ಬಣ್ಣ ಹಚ್ಚಿಕೊಂಡಿದ್ದು ಗೊತ್ತೇ ಇದೆ. ಅದರ ರಾಜಕೀಯ ಬಣ್ಣ ಮಾಸಿದೆ. ಅವರ ಮುಖದಲ್ಲೀಗ ಸಿನಿಮಾದ ಹೊಸ ರಂಗಿನ ಗುಂಗು. ಬನ್ನಿ ಅದೇನು ಎಂದು ಒಮ್ಮೆ ನೋಡಿ ಬರೋಣ.
ಸದಾನಂದಗೌಡರು ಸಿನಿಮಾ ಒಂದರಲ್ಲಿ ಅಭಿನಯಿಸುತ್ತಿರುವುದು ಗೊತ್ತೇ ಇದೆ. ಆಗಾಗ ಸುದ್ದಿಯಾಗುತ್ತಿರುವ ಈ ಚಿತ್ರದ ಹೆಸರು 'ಚೆಲ್ಲಾಪಿಲ್ಲಿ'. ಈ ಚಿತ್ರದಲ್ಲಿ ಸದಾನಂದಗೌಡರು ಅತಿಥಿ ಪಾತ್ರದಲ್ಲಿ ಕಾಣಿಸುತ್ತಿದ್ದಾರೆ. ಸುದೇಶ್ ಭಂಡಾರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಾಯಿಕೃಷ್ಣ (ಕುಡ್ಲ) ನಿರ್ದೇಶನವಿದೆ.
ಇತ್ತೀಚೆಗೆ ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಮಾತಿನ ಜೋಡಣೆ (ಡಬ್ಬಿಂಗ್)ನಲ್ಲಿ ಪಾಲ್ಗೊಂಡಿದ್ದರು. ಅವರ ಡಬ್ಬಿಂಗ್ ಶೈಲಿ ಹೇಗಿದೆ ನೋಡಿ. ತಮ್ಮ ಪಾತ್ರಕ್ಕೆ ಡಬ್ಬಿಂಗ್ ಹೇಳಿ ಸಂತಸ ಪಟ್ಟರು. ಮಾತಿನ ಬಿರುಸಿಗೆ ಆಗಾಗ ಗಂಟಲು ಒಣಗುತ್ತಿತ್ತು. ಮಿನರಲ್ ವಾಟರ್ ಕುಡಿದು ದಣಿವಾರಿಸಿಕೊಂಡರು.

ಸಿಎಂ ಖದರ್ ನಲ್ಲಿ ಅರೆ ಇದೇನಿದು?
ಈಗವರು ಮಾಜಿ ಸಿಎಂ ಆದರೂ ಚಿತ್ರದಲ್ಲಿ ಅವರದು ಮುಖ್ಯಮಂತ್ರಿ ಪಾತ್ರ. ಅವರ ಹಳೆಯ ಗತ್ತು, ಗೈರತ್ತನ್ನು ಚಿತ್ರದಲ್ಲಿ ಕಾಣಬಹುದು. ಇದೇ ಚಿತ್ರಕ್ಕಾಗಿ ಈ ಹಿಂದೊಮ್ಮೆ ಮಂಗಳೂರಿನ ಸಿಟಿ ಸೆಂಟ್ರಲ್ ಮಾಲ್ ನಲ್ಲಿ ಬಣ್ಣಹಚ್ಚಿಕೊಂಡು ಕ್ಯಾಮೆರಾ ಮುಂದೆ ಡೈಲಾಗ್ ಹೊಡೆದ್ದರು.

ರೀಲೀಫ್ ಆದಂತೆ ಕಂಡ ಸದಾನಂದಗೌಡ
ತಮ್ಮ ಎಂದಿನ ರಾಜಕೀಯ ಜಂಜಾಟಗಳ ನಡುವೆ ಸ್ವಲ್ಪ ರೀಲೀಫ್ ಆದಂತೆ ಕಂಡ ಸದಾನಂದ ಗೌಡರು, ರಾಜೇಶ್ ರಾಮನಾಥ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಹೇಳಿದ್ದು ಹೀಗೆ.

ವಿಜಯ ರಾಘವೇಂದ್ರ, ಐಶ್ವರ್ಯಾನಾಗ್ ಜೋಡಿ ಚಿತ್ರ
ವಿಜಯ ರಾಘವೇಂದ್ರ, ಐಶ್ವರ್ಯಾ ನಾಗ್, ಶೋಭಾರಾಜ್ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಗೌಡರು ಮಾಜಿ ಸಿಎಂ ಪಾತ್ರವನ್ನು ಪೋಷಿಸಿದ್ದಾರೆ. ನಿರ್ದೇಶಕ ಸಾಯಿಕೃಷ್ಣ ಕುಡ್ಲ ಅವರ ಆಣತಿಯಂತೆ ಅವರು ಅಭಿನಯಿಸಿದ್ದಾರೆ.

ಸಖತ್ ಕಾಮಿಡಿ ಚಿತ್ರವಂತೆ ಚಲ್ಲಾಪಿಲ್ಲಿ
ಈ ಚಿತ್ರ ಔಟ್ ಅಂಡ್ ಔಟ್ ಮನರಂಜನಾತ್ಮಕವಾಗಿರುತ್ತದೆ. "Laughter is the best Medicine" ಎಂಬ ಆಂಗ್ಲ ನಾಣ್ಣುಡಿಗೆ ಅನ್ವರ್ಥವಾಗಿ ಈ ಚಿತ್ರ ಇರುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು.

ತಾಂತ್ರಿಕ ಬಳಗದಲ್ಲಿ ಯಾರಿದ್ದಾರೆ?
ಚಲ್ಲಾಪಿಲ್ಲಿ ಚಿತ್ರಕ್ಕೆ ಪಿ ಎಲ್ ರವಿ ಛಾಯಾಗ್ರಾಹಕರಾಗಿದ್ದು ಮಿಷ್ಠ ಸಂಗೀತ ಸಂಯೋಜಿಸಲಿದ್ದಾರೆ. ಈ ಚಿತ್ರಕ್ಕೆ ಕೌರವ ವೆಂಕಟೇಶ್ ಸಾಹಸವಿದ್ದು ಹರ್ಷ, ರಾಜೇಶ್ ಮತ್ತು ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನವಿದೆ. ಬಾಬುಖಾನ್ ಕಲಾನಿರ್ದೇಶನ ಹಾಗೂ ಸುಹಾಸ್ ಸಹನಿರ್ದೇಶನ 'ಚಲ್ಲಾಪಿಲ್ಲಿ' ಚಿತ್ರಕ್ಕಿದೆ. ಬೆಂಗಳೂರು, ಮಂಗಳೂರು ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರಕ್ಕೆ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆದಿದೆ.


Click it and Unblock the Notifications











