»   » ಅಪ್ಪು ಬರ್ತಡೇ ಆಚರಿಸಿದ ಸದಾಶಿವ ನಗರ ಪೊಲೀಸರು

ಅಪ್ಪು ಬರ್ತಡೇ ಆಚರಿಸಿದ ಸದಾಶಿವ ನಗರ ಪೊಲೀಸರು

Posted By:
Subscribe to Filmibeat Kannada

ಕನ್ನಡದ ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ 43ನೇ ವರ್ಷದ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಸಾವಿರಾರು ಅಭಿಮಾನಿಗಳು ಸದಾಶಿವನಗರದಲ್ಲಿರುವ ಅಪ್ಪು ನಿವಾಸಕ್ಕೆ ಭೇಟಿ ನೀಡಿ ಕೇಕ್ ಕತ್ತರಿಸಿ ಸಂಭ್ರಮಿಸುತ್ತಿದ್ದಾರೆ.

ವಿಶೇಷ ಅಂದ್ರೆ, ಸದಾಶಿವ ನಗರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಗಳು ಅಪ್ಪು ನಿವಾಸಕ್ಕೆ ಭೇಟಿ ಕೊಟ್ಟು ಹುಟ್ಟುಹಬ್ಬ ಆಚರಿಸಿದ್ದಾರೆ. ಪುನೀತ್ ಅವರಿಂದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

ಅಭಿಮಾನಿಗಳಿಗಾಗಿ 'ರಾಜರ ರಾಜ' ಅಪ್ಪು ಹುಟ್ಟುಹಬ್ಬ ಅರ್ಪಣೆ

ಸಾಮಾನ್ಯವಾಗಿ ಸ್ಟಾರ್ ಗಳ ಬರ್ತಡೇಯಲ್ಲಿ ಅಭಿಮಾನಿಗಳನ್ನ ನಿಯಂತ್ರಿಸಲು ಪೊಲಿಸರಿಗೆ ಹರಸಾಹಸ ಪಡಬೇಕಾಗುತ್ತೆ. ಈ ಮಧ್ಯೆ ನಟರಿಗೆ ವಿಶ್ ಮಾಡಲು ಕೂಡ ಸಮಯ ಸಿಗಲ್ಲ. ಹೀಗಿದ್ದರೂ, ಎಲ್ಲ ಪೊಲೀಸರು ಒಟ್ಟಿಗೆ ಸೇರಿ ಪವರ್ ಸ್ಟಾರ್ ಜನುಮದಿನವನ್ನ ಕೊಂಡಾಡಿರುವುದು ನಿಜಕ್ಕೂ ವಿಶೇಷವೇ.

ಸೌತ್ ಸ್ಟಾರ್ ಗಳ ಜೊತೆ 'ರಾಜಕುಮಾರ': ಪರಭಾಷಿಗರಿಗೆ 'ಅಪ್ಪು'ನೇ ಫೇವರೆಟ್.!

Sadashivanagar police celebrated Puneeth Rajkumars birthday

ಇನ್ನುಳಿದಂತೆ ಪುನೀತ್ ಹುಟ್ಟುಹಬ್ಬದ ಪ್ರಯುಕ್ತ 'ನಟ ಸಾರ್ವಭೌಮ' ಚಿತ್ರದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆಯಾಗಿದೆ. ಅಪ್ಪು ಜನುಮದಿನದ ವಿಶೇಷವಾಗಿ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಲಿರುವ ಚಿತ್ರದ ಸ್ಪೆಷಲ್ ಪೋಸ್ಟರ್ ಕೂಡ ಬಿಡುಗಡೆಯಾಗಿದೆ.

English summary
Sada shivanagara police celebrated kannada actor, power star Puneeth Rajkumar's birthday at Sadashivanagar residency today (march 17th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X